ಶಾಶ್ವತ ಹಕ್ಕುಪತ್ರ ನೀಡಲು ಆಗ್ರಹ

girnichal house
Published on

ಹುಬ್ಬಳ್ಳಿ:ವಾಸಿಸುತ್ತಿರುವ ಮನೆಯ ಶಾಶ್ವತ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿ ಗಿರಣಿಚಾಳ ನಿವಾಸಿಗಳು, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ ಮನವಿ ಸಲ್ಲಿಸಿದರು.

ಸಮಸ್ತ ಗಿರಣಿಚಾಳ ನಿವಾಸಿಗಳ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು. ಶಾಸಕ ಮಹೇಶ ಟೆಂಗಿನಕಾಯಿ ಇದ್ದರು.

ಗಿರಣಿಚಾಳದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಸಮುದಾಯದ ನಿವಾಸಿಗಳಿಗೆ ಶುದ್ಧಿ ಕ್ರಯಪತ್ರ ಪೂರೈಸಿದರೆ ಮನೆಯ ಮಾಲೀಕತ್ವ ಪಡೆಯಲು ಸಹಕಾರಿಯಾಗುತ್ತಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಜವಳಿ ಸಂಸ್ಥೆಯ (ಅಂಡರ್ ಲಿಕ್ವಿಡೇಷನ್) ಎನ್​ಒಸಿ ಪಡೆದುಕೊಳ್ಳಲು ಧಾರವಾಡ ಜಿಲ್ಲಾಧಿಕಾರಿಗೆ ಸೂಕ್ತ ನಿರ್ದೇಶನ ನೀಡಬೇಕು. ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಶುದ್ಧಕ್ರಯ ಪತ್ರ ನೀಡಿ ಹುಬ್ಬಳ್ಳಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಬೇಕು ಎಂದು ಆಗ್ರಹಿಸಿದ್ದಾರೆ.

ನಿಯಮಾನುಸಾರವಾಗಿ ಈ ಹಿಂದೆ ಮಂಡಳಿಯಿಂದ ಮನೆಯ ಸ್ವಾಧೀನ ಪತ್ರ ಹಾಗೂ ಮನೆಯ ನಿವೇಶನದ ಹಕ್ಕುಪತ್ರಗಳನ್ನು ಪೂರೈಸಲಾಗಿದೆ. ಇದೀಗ ಶಾಶ್ವತ ಮಾಲೀಕತ್ವದ ಹಕ್ಕುಪತ್ರದ ಅವಶ್ಯಕತೆ ಇರುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಸಂಘದ ಅಧ್ಯಕ್ಷ ಮೋಹನ ಹಿರೇಮನಿ, ಪಾಲಿಕೆ ಸದಸ್ಯೆ ಮಂಗಳಮ್ಮ ಹಿರೇಮನಿ, ಪರಶುರಾಮ ಪೂಜಾರ, ಗುರುನಾಥ ಗಾಂಜಾಗೋಳ, ಹನುಮಂತಪ್ಪ ಮಾಲಪಲ್ಲಿ, ಮಾರುತಿ ಬಾರಕೇರ, ಗೋಪಾಲ ಎಣ್ಣಿಚವಂಡಿ, ಗಂಗಾಧರ ಕಮಲದಿನ್ನಿ, ಚಂದ್ರಶೇಖರ ಯಾತಗೇರಿ, ಮಂಜು ಬಳ್ಳಾರಿ, ಮಲ್ಲಿಕಾರ್ಜುನ ಯಾತಗೇರಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net