1 ಲಕ್ಷ ರೂ. ಮೌಲ್ಯದ ಗಿರ್​ ತಳಿಯ ಹೋರಿ ಕಳ್ಳತನ

Crime Logo
Published on

ಬ್ಯಾಡಗಿ: ಜಮೀನಿನ ಫಾಮ್​ರ್ಹೌಸ್​ನಲ್ಲಿ ಕಟ್ಟಿದ್ದ 1 ಲಕ್ಷ ರೂ. ಮೌಲ್ಯದ ಗುಜರಾತಿ ಗಿರ್​ ತಳಿಯ ಹೋರಿಯನ್ನು ಯಾರೋ ಕಳ್ಳತನ ಮಾಡಿರುವ ಘಟನೆ ತಾಲೂಕಿನ ಲಕಮಾಜಿಕೊಪ್ಪ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಮೃತ್ಯುಂಜಯ ಷಡಕ್ಷರಯ್ಯ ಹಿರೇಮಠ (43) ಎಂಬುವರ ಹೋರಿ ಕಳ್ಳತನ ಆಗಿರುವುದು.

ಇವರು ಜಮೀನಿನ ಫಾಮ್​ರ್ಹೌಸ್​ನಲ್ಲಿ ಹೋರಿ ಕಟ್ಟಿದ್ದರು. ಯಾರೋ ಖದೀಮರು ಬಂದು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net