

ಕಿಕ್ಕೇರಿ : ಹೋಬಳಿಯ ಬೋಳಮಾರನಹಳ್ಳಿ ಗ್ರಾಮದ ರೈತ ದೇವನಾಥ್(55) ಅವರು ಹುಲ್ಲು ಕತ್ತರಿಸುವ ಸಂದರ್ಭ ಯಂತ್ರಕ್ಕೆ ಸಿಲುಕಿ ಕೈಬೆರಳುಗಳು ಜಖಂ ಆದ ಪ್ರಕರಣ ಶನಿವಾರ ನಡೆದಿದೆ. ದೇವನಾಥ್ ಶನಿವಾರ ರಾತ್ರಿ ತಮ್ಮ ಜಾನುವಾರುಗಳಿಗೆ ಮೇವು ಉಣಿಸಲು ಜೋಳದ ಕಡ್ಡಿಯನ್ನು ಜಮೀನಿನಿಂದ ತಂದಿದ್ದರು. ಅವುಗಳನ್ನು ಮತ್ತು ಹುಲ್ಲನ್ನು ಯಂತ್ರಕ್ಕೆ ಹಾಕುತ್ತಿದ್ದರು. ಆಕಸ್ಮಿಕವಾಗಿ ಯಂತ್ರದೊಳಗೆ ಕ್ಕೆ ಸಿಲುಕಿದಾಗ ಕೂಗಿಕೊಂಡರು. ಮನೆಯವರು ಧಾವಿಸಿ ಯಂತ್ರವನ್ನು ನಿಲುಗಡೆ ಮಾಡಿದ್ದಾರೆ. ಬೆರಳುಗಳಿಗೆ ತೀವ್ರ ಗಾಯವಾಗಿದ್ದು, ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ.