ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಶುಂಠಿ ಬೇಸಾಯ

Ginger cultivation is increasing in the district
Published on

ಮಡಿಕೇರಿ:

ಕೊಡಗಿನಲ್ಲಿ ಕಳೆದ ಕೆಲವು ವ?ರ್ಗಳಿಂದ ಶುಂಠಿ ಕೃಷಿ ಹೆಚ್ಚಾಗುತ್ತಿದೆ. ಶುಂಠಿ ಬೆಳೆಯುವ ಪ್ರದೇಶದ ಪ್ರಮಾಣ ವರ್ಷದಿಂದ ವರ್ಷಕ್ಕೆ ವಿಸ್ತಾರವಾಗುತ್ತಿದೆ. ಭತ್ತದ ಗದ್ದೆ, ಕಾಫಿ ತೋಟಗಳಿಗೂ ಶುಂಠಿ ಕಾಲಿಟ್ಟಿದೆ. ಅರಣ್ಯ ಕಡಿದು ಶುಂಠಿ ಕೃಷಿಗೆ ಜಾಗ ಮಾಡಿಕೊಳ್ಳುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಇದು ಅತಿ ಸೂಕ್ಷ್ಮ ಪರಿಸರ ಹೊಂದಿರುವ ಕೊಡಗಿನಲ್ಲಿ ಪ್ರತಿಕೂಲ ಪರಿಣಾಮಕ್ಕೆ ಕಾರಣವಾಗಿದ್ದು, ಫಲವತ್ತಾದ ಭೂಮಿ ಹಾಳಾಗುವುದರ ಜತೆಗೆ ಮಳೆಯ ಪ್ರಮಾಣದ ಮೇಲೂ ಪರಿಣಾಮ ಬೀರಲಾರಂಭಿಸಿದೆ.

ಶುಂಠಿ ಕೃಷಿಯಲ್ಲಿ ಯಥೇಚ್ಛ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಶುಂಠಿ ಬೆಳೆ ಕಾಪಾಡಿಕೊಳ್ಳಲು, ಇಳುವರಿ ಹೆಚ್ಚಿಸಲು ಬೀಜೋಪಚಾರದಿಂದ ಕಟಾವಿನ ತನಕ ಶುಂಠಿ ಬೇಸಾಯದಲ್ಲಿ ಮಿತಿ ಮೀರಿದ ರಾಸಾಯನಿಕಗಳನ್ನು ಬಳಸಲಾಗುತ್ತದೆ. ವಿವೇಚನೆ ಇಲ್ಲದೆ ರಾಸಾಯನಿಕಗಳನ್ನು ಬಳಸುವುದರಿಂದ ಜೀವವೈವಿಧ್ಯತೆಗೆ ಹಾನಿ, ಮಣ್ಣು, ನದಿಗಳು, ಸರೋವರಗಳು, ತೊರೆಗಳು ಹಾಗೂ ಜೌಗು ಪ್ರದೇಶಗಳ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಇದರಿಂದ ಮನುಷ್ಯ, ಜಾನುವಾರು, ಸಸ್ಯ, ಪ್ರಾಣಿ ಹಾಗೂ ಜಲಚರಗಳ ಮೇಲೆ ಪ್ರತಿಕೂಲ ಪರಿಣಾಮಗಳು ಬೀರುತ್ತಿದೆ ಎನ್ನುತ್ತದೆ ಕಳೆದ ವ?ರ್, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಅಡಿಯಲ್ಲಿ ಪರಿಸರ ವಿಜ್ಞಾನಗಳ ತಂಡ ನಡೆಸಿದ ಅಧ್ಯಯನ.

ಶುಂಠಿ ಬೆಳೆದಲ್ಲಿ ಮುಂದಿನ ೫ ವರ್ಷ ಯಾವುದೇ ಬೆಳೆ ಬೆಳೆದರೂ ನಿಷ್ಪ್ರಯೋಜಕ ಎನ್ನುವುದು ಅನುಭವಿ ರೈತರ ಮಾತು. ಆದರೆ ಶುಂಠಿ ಬೆಳೆಯುವುದಕ್ಕೋಸ್ಕರ ಕಾಡನ್ನು ಕಡಿಯುವವರು ಆ ಜಾಗದಲ್ಲಿ ಶುಂಠಿ ಕಟಾವಿನ ನಂತರ ಕಾಫಿ ಅಥವಾ ಅಡಿಕೆ ಗಿಡ ನೆಟ್ಟುಕೊಡುವ ಆಮಿಷ ಒಡ್ಡುತ್ತಾರೆ. ಆದರೆ ಅದಾಗಲೇ ಭೂಮಿಯ ಸಾರವನ್ನೆಲ್ಲಾ ಹೀರಿರುವ ಶುಂಠಿಯಿಂದಾಗಿ ಹೊಸದಾಗಿ ನೆಡುವ ಅಡಿಕೆ ಅಥವಾ ಕಾಫಿ ಗಿಡಗಳನ್ನು ಕಾಪಾಡಿಕೊಳ್ಳಲು ಮತ್ತೆ ರಾಸಾಯನಿಕಗಳ ಮೊರೆ ಹೋಗಬೇಕಾಗುತ್ತದೆ. ಇದೊಂದು ವಿಷ ವರ್ತುಲ ಇದ್ದಂತೆ ಎನ್ನುವುದು ಪರಿಸರ ಪ್ರಿಯರ ಅಭಿಪ್ರಾಯ.

ಕೇರಳಿಗರ ಮೂಲಕ ಕೊಡಗು ಸೇರಿದಂತೆ ಮಲೆನಾಡಿನ ಜಿಲ್ಲೆಗಳಿಗೆ ಶುಂಠಿ ಕೃಷಿ ಕಾಲಿಟ್ಟಿತು. ಪ್ರಸ್ತುತ ಸುಮಾರು ೪೦೦ ಹೆಕ್ಟೇರ್‌ಗೂ ಹೆಚ್ಚು ಅರಣ್ಯ ಪ್ರದೇಶದಲ್ಲಿ ಶುಂಠಿ ಬೆಳೆಯಲಾಗುತ್ತಿದೆ ಎನ್ನುತ್ತದೆ ಅಂಕಿ-ಅಂಶಗಳು. ಆಹಾರ ಬೆಳೆಗಳಾದ ಭತ್ತ ಮತ್ತು ಜೋಳದ ಮೇಲೆ ಶುಂಠಿ ಕೃಷಿ ಪ್ರಭಾವ ಬೀರಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಶುಂಠಿ ಬೆಳೆಯುವ ಪ್ರದೇಶಗಳಿಂದಾಗಿ ಮಲೆನಾಡಿನ ಜಿಲ್ಲೆಗಳಲ್ಲಿ ಭತ್ತದ ಉತ್ಪಾದನೆ ಕಡಿಮೆ ಆಗುತ್ತಿರುವುದನ್ನು ಕೃಷಿ ಇಲಾಖೆ ಅಧಿಕಾರಿಗಳೂ ಒಪ್ಪುತ್ತಾರೆ.

ಅರಣ್ಯ ನಾಶ ಮಾಡದೆಯೂ ಬೇಸಾಯದ ಭೂಮಿಗಳಲ್ಲಿ ಶುಂಠಿ ಕೃಷಿ ಸಾಧ್ಯವಿದೆ. ರಾಸಾಯನಿಕಗಳ ಬಳಕೆಗೂ ಕಡಿವಾಣ ಹಾಕುವ ಅವಕಾಶಗಳಿವೆ. ಮುಖ್ಯವಾಗಿ ದುರಾಸೆ ಬಿಡಬೇಕಿದೆ. ಸಾವಯವ ಮತ್ತು ಸಾಂಪ್ರದಾಯಿಕ ಪದ್ಧತಿಯಲ್ಲೂ ಶುಂಠಿ ಕೃಷಿ ಮಾಡಬಹುದು ಎನ್ನುತ್ತಾರೆ ಪರಿಸರ ವಿಜ್ಞಾನಗಳು.

ಶುಂಠಿ ಕೃಷಿಯಿಂದ ಭೂಮಿಯ ಫಲವತ್ತದೆ ಹಾಳಾಗುತ್ತದೆ ಎಂಬುದು ಸತ್ಯ. ಹೊರ ರಾಜ್ಯದಿಂದ ಬಂದು ಜಾಗವನ್ನು ಲೀಸ್‌ಗೆ ಪಡೆದು, ಶುಂಠಿ ಕೃಷಿಗೆ ತಗುಲುವ ರೋಗವನ್ನು ತಡೆಯಲು ಮಣ್ಣಿನ ಸತ್ವವನ್ನೇ ಕೊಲ್ಲುವ ವಿಷಕಾರಕ ಔಷಧಿಗಳನ್ನು ಸಿಂಪಡಿಸಿ ಮಣ್ಣನ್ನು ಹಾಳು ಮಾಡಿದ್ದಾರೆ. ಈಗ ಅದರ ದುಷ್ಪರಿಣಾಮ ಕಾಣಿಸುತ್ತಿದೆ.
ಪಿ. ಮಧು, ಕೃಷಿಕ, ಸೋಮವಾರಪೇಟೆ

ಕೂಲಿಕಾರ್ಮಿಕರ ಕೊರತೆ, ಕಾಡುಪ್ರಾಣಿಗಳು ಮಾಡುವ ನ?್ಟದಿಂದ ಬೇಸತ್ತ ರೈತರು ಗದ್ದೆಗಳಲ್ಲಿ ಶುಂಠಿ ಕೃಷಿ ಮಾಡಲು ಮುಂದಾದರು. ಶುಂಠಿ ಬೆಳೆಗಾರರು ಸಿಂಪಡಿಸುವ ವಿ?ಯುಕ್ತ ಕ್ರಿಮಿನಾಶಕದಿಂದ ಮಾನವರಿಗೆ ವಿವಿಧ ಮಾರಕ ಕಾಯಿಲೆಗಳು ಉದ್ಭ್ಬವಿಸುವುದಲ್ಲದೆ, ಕೃಷಿ ಮಾಡಿದ ಭೂಮಿ ಹಲವು ವ?ರ್ ಯಾವ ಬೆಳೆಯನ್ನೂ ಬೆಳೆಯದ?್ಟು ಬರಡಾಗಿರುತ್ತದೆ. ಶುಂಠಿಗೆ ತಗಲುವ ಕೊಳೆರೋಗದಿಂದ ಹತ್ತಿರದ ಕಾಫಿ ತೋಟದಲ್ಲಿದ್ದ ಕಾಳು ಮೆಣಸಿನ ಬಳ್ಳಿಗಳೂ ಸೊರಗಿ ಹೋದವು. ಕಾಫಿ ತೋಟ ಮತ್ತು ಕಾಡನ್ನು ಶುಂಠಿ ಬೆಳೆಗಾರರಿಗೆ ಗುತ್ತಿಗೆ ಆಧಾರದ ಮೇಲೆ ತಮ್ಮ ಜಮೀನನ್ನು ಕೊಟ್ಟು, ಪರಿಸರ ಹಾಗೂ ನಮ್ಮ ನಾಶಕ್ಕೆ ನಾವೇ ಹೊಣೆಯಾಗಿದ್ದೇವೆ.
ಜಲಕಾಳಪ್ಪ, ಹಿರಿಯ ಸಾಹಿತಿ, ಹಾನಗಲ್ಲು

ಶುಂಠಿ ಬೆಳೆ ಎನ್ನುವುದು ತಕ್ಷಣಕ್ಕೆ ಆರ್ಥಿಕ ಲಾಭ ತಂದುಕೊಡುವ ಕೃಷಿ ಎನ್ನುವುದು ಎ?್ಟು ಸತ್ಯವೋ, ಭೂಮಿಯ ಫಲವತ್ತತೆ ಹಾಳು ಮಾಡುವುದು ಕೂಡ ಅ?್ಟೇ ಸತ್ಯ. ಹೆಚ್ಚು ಇಳುವರಿಗಾಗಿ ಕ್ರಿಮಿನಾಶಕ ಇತ್ಯಾದಿ ಬಳಸುವುದರಿಂದ ಸಮೃದ್ಧ ಭೂಮಿಯನ್ನು ಕಳೆದುಕೊಳ್ಳುತ್ತೇವೆ. ಇನ್ನು ಇತ್ತೀಚೆಗೆ ಕಾಡು ಕಡಿದು ಶುಂಠಿ ಬೆಳೆಯುವುದಕ್ಕೆ ರೈತರು ಮುಂದಾಗುತ್ತಿದ್ದಾರೆ. ಇದರಿಂದ ಪರಿಸರ ಸಮತೋಲನ ಕಳೆದುಕೊಂಡು ನೈಸರ್ಗಿಕ ವಿಕೋಪಕ್ಕೆ ತುತ್ತಾಗುವ ಆತಂಕವಿದೆ.
ಕೆ.ಎಸ್. ಕೃ?್ಣೇಗೌಡ, ರೈತ, ತೊರೆನೂರು

ಕೃಷಿಯಲ್ಲಿ ಬಹುವಾರ್ಷಿಕ ಬೆಳೆ ಬೆಳೆಯುವುದರಿಂದ ರೈತರಿಗೆ ಅನುಕೂಲ. ಆದರೆ ಲಾಭ ಇದೆ ಎಂದು ಒಂದೇ ಬೆಳೆಯನ್ನು ಎಲ್ಲಾ ಕಡೆ ಹಾಕುವುದರಿಂದ ಮಣ್ಣಿನ ಫಲವತ್ತತೆ ಕುಸಿಯುತ್ತದೆ. ಶುಂಠಿ ಬೆಳೆಗೆ ಬೆಲೆ ಇದೆ ಎಂದು ಮರ ಗಿಡಗಳ ಹನನ ಮಾಡಿ ಹಾಕುವುದರಿಂದ ಪರಿಸರಕ್ಕೆ ನ?್ಟ ಉಂಟಾಗುತ್ತದೆ.
ಭವ್ಯಾ, ಉಪನ್ಯಾಸಕಿ, ಗೋಣಿಕೊಪ್ಪ

ಕೊಡಗಿನಲ್ಲಿ ಶುಂಠಿ ಬೆಳೆ ಬೆಳೆಯಲು ಮುಂದಾಗುತ್ತಿರುವುದು ದುರಂತ. ಈ ಬೆಳೆ ಬೆಳೆಯಲು ಲಕ್ಷಾಂತರ ರೂ. ವಿಷ ರಾಸಾಯನಿಕ ಔಷಧಿ ಸಿಂಪಡಣೆ ಮಾಡುತ್ತಾರೆ. ಜತೆಗೆ ಬೆಳೆ ಬೆಳೆಯುವ ಜಾಗದಲ್ಲಿರುವ ಮರಗಳನ್ನು ಬುಡ ಸಹಿತ ಕಿತ್ತು ಹಾಕುತ್ತಾರೆ. ಮರಗಿಡಗಳಿದ್ದರೆ ಮಳೆಯಾಗುವುದು. ಈಗಾಗಲೇ ಈ ಹಿಂದೆ ಸುರಿಯುತ್ತಿದ್ದ ಮಳೆ ಇದೀಗ ಇಲ್ಲದಾಗಿದೆ. ಭತ್ತದ ಗದ್ದೆಗಳು ಸಹ ಶುಂಠಿ ಗದ್ದೆಗಳಾಗಿರುವುದರಿಂದ ಮುಂದಿನ ದಿನಗಳಲ್ಲಿ ಅಕ್ಕಿಯನ್ನು ಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಬರಲಿದೆ.
ಎಂ.ಬಿ. ಚಿಣ್ಣಪ್ಪ, ತಾಳೂರು, ಹಂಡ್ಲಿ

ಶುಂಠಿ ಬೆಳೆ ಕೊಡಗಿನಲ್ಲಿ ಆರಂಭವಾದಗಿನಿಂದ ಇಲ್ಲಿನ ಸಾವಿರಾರು ಎಕರೆ ಫಲವತ್ತದ ಭೂಮಿ ಬರಡಾಗಿದೆ. ಶುಂಠಿ ಬೆಳೆಯಲು ಬಳಸಿದ್ದ ಕಳೆನಾಶಕ, ರಾಸಾಯನಿಕ ಗೊಬ್ಬರ ಮಾತ್ರವಲ್ಲದೆ ಉಪ್ಪು ಕೂಡ ಕೊಡಗಿನ ಮಣ್ಣಿನಲ್ಲಿ ಹಾಕಿ ನಮ್ಮ ಮಣ್ಣು ಕೂಡ ಸತ್ವಹೀನವಾಗಿದೆ. ಉತ್ತಮ ಜಾತಿಯ ಹಸಿರೆಲೆ ಮರಗಳನ್ನೂ ನಾಶ ಮಾಡಲಾಗಿದೆ. ಇದರಿಂದ ಅನೇಕ ರೀತಿಯ ದುಷ್ಪರಿಣಾಮಗಳಾಗಿದ್ದು, ನಾವು ಬೆಳೆಯುವ ವಿವಿಧ ಬೆಳೆಗಳ ಮೇಲೂ ಪರಿಣಾಮ ಆಗಿದೆ. ಕಾಡು ಪ್ರಾಣಿಗಳ ಉಪಟಳ ಹೆಚ್ಚಳಕ್ಕೂ ಕಾರಣವಾಗಿದೆ.
ಚೌರಿರ ಉದಯ, ನಿವೃತ್ತ ಶಿಕ್ಷಕ ಹೊದ್ದೂರು ಗ್ರಾಮ

ಶುಂಠಿ ಕೃಷಿ ಮಾಡಲು ಅಮೂಲ್ಯ ಕಾಡು ನಾಶ ಮಾಡುವುದು ಅಕ್ಷ್ಮಮ್ಯ. ತಲೆಮಾರುಗಳಿಂದ ರಕ್ಷಿಸುತ್ತಾ ಬಂದಿರುವ ಮರಗಳನ್ನು ಕ್ಷಣಿಕ ಲಾಭದ ಆಸೆಗೆ ಕಡೆಯುವವರ ಮನಸ್ಥಿತಿಗೂ ಕಟುಕರ ಮನಸ್ಥಿತಿಗೂ ವ್ಯತ್ಯಾಸವೇ ಇಲ್ಲ. ಕಾಡು ಇದ್ದರೆ ಮಾತ್ರ ನಾಡು ಎನ್ನುವುದನ್ನು ಅರಿತಿರುವವರು ಹೀಗೆ ಮಾಡಲು ಸಾಧ್ಯವಿಲ್ಲ. ಶುಂಠಿ ಕೃಷಿ ಹೆಸರಿನಲ್ಲಿ ಅಕ್ರಮವಾಗಿ ಮರರಗಳ ಹನನ ದಂಧೆ ಜೀವಂತವಾಗಿದೆ. ಬೆಲೆಬಾಳುವ ಅಪರೂಪದ ಮರಗಳು ಕಾಡುಗಳ್ಳರ ಪಾಲಾಗುತ್ತಿದೆ. ಪರಿಸರದ ಮೇಲೆ ಹಾನಿ ಮಾಡುವ ಇಂಥ ಬೆಳವಣಿಗೆಗಳ ಬಗ್ಗೆ ಎಲ್ಲರೂ ಎಚ್ಚೆತ್ತುಕೊಳ್ಳಬೇಕು.
ಎಂ.ಎನ್. ಚಂದ್ರಮೋಹನ್, ರಾಜ್ಯ ಸಂಚಾಲಕ, ಕಾವೇರಿ ನದಿ ಸ್ವಚ್ಛತಾ ಆಂದೋಲನ

ಜಿಲ್ಲೆಗೆ ಶುಂಠಿ ಕೃಷಿ ಬಂದ ನಂತರ ಕಾರ್ಮಿಕರ ವೇತನ ಕೂಡ ಜಾಸ್ತಿಯಾಗಿದೆ. ಭತ್ತಕ್ಕೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸದ ಹಿನ್ನೆಲೆಯಲ್ಲಿ ರೈತರು ಆರ್ಥಿಕ ಬೆಳೆಗಳತ್ತ ಆಕರ್ಷಿತರಾಗಿದ್ದಾರೆ. ಕಾಡುಪ್ರದೇಶಗಳನ್ನು ಕಡಿದು ಶುಂಠಿ ಕೃಷಿ ಬೆಳೆಯುವುದರಿಂದ ವಾತಾವರಣದ ಮೇಲೂ ದು?್ಪರಿಣಾಮ ಬೀರಿದೆ. ಕೃಷಿಕರು ಈ ವಿಷಯದಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದೆ.
೯. ಕೃ?್ಣ, ಸಾಮಾಜಿಕ ಕಾರ್ಯಕರ್ತ, ಕರಡಿಗೋಡು

ಶುಂಠಿ ಬೆಳೆ ಭೂಮಿಯ  ಸತ್ವವನ್ನೆಲ್ಲಾ ಹೀರಿಕೊಳ್ಳುತ್ತದೆ. ಒಂದೇ ಜಾಗದಲ್ಲಿ ಮೇಲಿನಿಂದ ಮೇಲೆ ಶುಂಠಿ ಬೆಳೆಯುವುದು ಉತ್ತಮ ಬೇಸಾಯ ಪದ್ಧತಿ ಅಲ್ಲ. ಶುಂಠಿ ಭೂಮಿಯ ಫಲವತ್ತತೆ ಹಾಳು ಮಾಡುತ್ತದೆ. ಶುಂಠಿ ಕಟಾವಿನ ನಂತರ ದ್ವಿದಳ ಧಾನ್ಯ ಬೆಳೆಯುವುದು ಒಳ್ಳೆಯದು. 

ಡಾ. ವೀರೇಂದ್ರ ಕುಮಾರ್, ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net