

ಕಪ್ಪಸೋಗೆ: (ನಂಜನಗೂಡು ತಾ.): ಹಲವು ದಿನಗಳಿಂದ ನಿರಂತರವಾಗಿ ಬೀಳುತ್ತಿರುವ ಧಾರಾಕಾರ ಮಳೆಗೆ ರೈತರು ಬೆಳೆದಿದ್ದ ಬಹುತೇಕ ಬೆಳೆಗಳಿಗೆ ನೀರು ನುಗ್ಗಿರುವುದರಿಂದ ಬೆಳೆಗಳು ಹಾನಿಯಾಗಿವೆ.
ರೈತರ ಆರ್ಥಿಕ ಬೆಳೆಗಳಾದ ಭತ್ತ, ಬಾಳೆ, ಶುಂಠಿ ಮುಂತಾದ ಬೆಳೆಗಳು ನಿರಂತರ ಮಳೆ ಹಾಗೂ ಪ್ರವಾಹದಿಂದ ಹಾನಿಯಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕಪ್ಪಸೋಗೆ ಗ್ರಾಮದ ಕೆ.ಎನ್.ಮಲ್ಲಿಕಾರ್ಜುನಪ್ಪ, ಕೆ.ಎಂ.ಬಸವಣ್ಣ, ಕೆ.ಪಿ.ಮಲ್ಲಿಕಾರ್ಜುನಪ್ಪ, ಮಾಧು ಎಂಬುವರಿಗೆ ಸೇರಿದ್ದ ಸುಮಾರು 8 ರಿಂದ 10 ಎಕರೆಯಷ್ಟು ಬೆಳೆದಿದ್ದ ಭತ್ತ ಹಾಗೂ ಶುಂಠಿ ಬೆಳೆಗಳಿಗೆ ನುಗು ಜಲಾಶಯದಿಂದ ಬಿಟ್ಟ ನೀರಿನಿಂದ ಪ್ರವಾಹ ಉಂಟಾಗಿ ಬೆಳೆಗಳಿಗೆ ನುಗ್ಗಿದ್ದರಿಂದ ಅಪಾರ ನಷ್ಟವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಸಾಲ ಮಾಡಿ ಕಷ್ಟಪಟ್ಟು ಬೆಳೆದ ಬೆಳೆ ಇನ್ನೇನು ಕಟಾವು ಮಾಡುವ ಸಮಯದಲ್ಲಿ ಜಮೀನುಗಳಿಗೆ ನೀರು ನುಗಿದ್ದರಿಂದ ನಷ್ಟ ಅನುಭವಿಸುವಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.