ಮೊಬೈಲ್ ಬಿಟ್ಟು ನಮ್ಮೊಂದಿಗೆ ಕೆಲಸ ಮಾಡು ಎಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಮಗಳು!

mobile
Published on

ವಿಜಯಪುರ: ಈಗಿನ ಮಕ್ಕಳಂತೂ ಮೊಬೈಲ್ಗೆ ಅಡಿಕ್ಟ್ ಆಗಿಬಿಟ್ಟಿದ್ದಾರೆ ಎನ್ನುವುದು ಅನೇಕ ಪೋಷಕರ ದೂರು. ಅದೇ ರೀತಿ ಮೊಬೈಲ್ಗೆ ಅಂಟಿಕೊಂಡಿದ್ದ ಮಗಳಿಗೆ ತಂದೆ ತಾಯಿ ಬೈದು ಬುದ್ಧಿ ಹೇಳಿದ್ದಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ವಿಜಯಪುರ ತಾಲ್ಲೂಕಿನ ಹಂಚಿನಾಳ ತಾಂಡಾದ ಭಾರತಿ ತಾರಾಸಿಂಗ್ ಚವ್ಹಾಣ(15) ಆತ್ಮಹತ್ಯೆಗೆ ಶರಣಾದ ಬಾಲಕಿ. ಕಳೆದ ಕೆಲ ತಿಂಗಳಿಂದ ಮೃತ ಬಾಲಕಿಯ ತಂದೆ ತಾರಾಸಿಂಗ್ ಹಾಗೂ ತಾಯಿ ಮಂಗಲಬಾಯಿ ಕುಟುಂಬ ಸಮೇತರಾಗಿ ಪಟ್ಟಣ ತಹಶೀಲ್ದಾರ ಎಂಬುವವರ ಖಡಿ ಮಷಿಷ್ನಲ್ಲಿ ವಾಸ್ತವ್ಯ ಮಾಡಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದರು. ಮಗಳು ಭಾರತಿ ಮನೆಯಲ್ಲೂ ಕೆಲಸ ಮಾಡದೇ ಕೂಲಿ ಕೆಲಸದಲ್ಲೂ ಭಾಗಿಯಾಗದೇ ಸದಾಕಾಲ ಮೊಬೈಲ್ನಲ್ಲಿ ಆಟವಾಡುತ್ತಿರುತ್ತಿದ್ದಳು. ಇದನ್ನು ಗಮನಿಸಿ ಪಾಲಕರು ಮಗಳಿಗೆ ಬುದ್ದಿವಾದ ಹೇಳಿದ್ದಾರೆ.
ಆದರೆ ಬುದ್ಧಿವಾದದಿಂದ ನೊಂದ ಬಾಲಕಿ ಮನೆಯ ಸಮೀಪದ ಕಲ್ಲಿನ ಕ್ವಾರಿಯ ನೀರಲ್ಲಿ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬುಧವಾರ ರಾತ್ರಿಯಿಂದ ಗುರುವಾರ ಬೆಳಿಗ್ಗೆ 6ರ ನಡುವಿನ ಸಮಯದಲ್ಲಿ ಈ ಘಟನೆ ನಡೆದಿದೆ. ಈ ವಿಚಾರವಾಗಿ ಬಾಲಕಿಯ ತಾಯಿ ದೂರು ದಾಖಲಿಸಿದ್ದು, ಘಟನಾ ಸ್ಥಳಕ್ಕೆ ಪಿಎಸ್ಐ ಸಿದ್ದಪ್ಪ ಯಡಹಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net