ಫೆ. 4ರಿಂದ ಗಿಳಿಗುಂಡಿ ಉತ್ಸವ

Manjaguni Utsava
Published on

ಶಿರಸಿ: ತಾಲೂಕಿನ ಮಂಜುಗುಣಿಯ ವೆಂಕಟರಮಣ ದೇವಸ್ಥಾನದಲ್ಲಿ ಮೂಲ ನೆಲೆಯಾದ ಗಿಳಲು ಗುಂಡಿಯಲ್ಲಿ ಫೆ. 4 ರಂದು ಗಿಳಿಗುಂಡಿ ಉತ್ಸವ, ಅಶ್ವರಥೋತ್ಸವ ಹಾಗೂ 5ರಿಂದ 7ರ ತನಕ ಮಂಜುಗುಣಿಯಲ್ಲಿ ಉದ್ಯಾಪನಾ ಉತ್ಸವ ಪರ್ವ ಆಯೋಜಿಸಲಾಗಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ, ವಿ. ಶ್ರೀನಿವಾಸ ಭಟ್ಟ ಮಂಜುಗುಣಿ ಹೇಳಿದರು.

ದೇವಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 4ರಂದು ನಿತ್ಯ ಪೂಜಾ ನಂತರ ಶ್ರೀ ದೇವರ ಪ್ರಧಾನ ಉತ್ಸವ ಮೂರ್ತಿಯು ಬೆಳಗ್ಗೆ 8.30 ಕ್ಕೆ ಗಿಳಲುಗುಂಡಿಗೆ ಮೌನಯಾತ್ರೆ ಮೂಲಕ ಸವಾರಿ ಹೊರಡಿಸಲಾಗುತ್ತದೆ. ಬಳಿಕ 10.30 ರಿಂದ ಶ್ರೀ ದೇವರ ಮೂಲಸ್ಥಾನದಲ್ಲಿ ಪೂಜೆ, ಗೋಪೂಜೆ, ಚಕ್ರಮೂರ್ತಿಗೆ ಶತಧಾರಾ ಕ್ಷೀರಾಭಿಷೇಕ, ತಿರುಮಲಯೋಗಿಗಳ ಪಾದಾಂಕಿತ ಪೂಜೆ, ಗೋಪಾದ ಚಿಹ್ನೆ ಪೂಜೆ, ಗುಹಾಪೂಜೆ, ಶ್ರೀ ವೆಂಕಟೇಶ ಮೂಲಮಂತ್ರ ಹಾಗೂ ಗಾಯತ್ರಿ ಮಂತ್ರ ಹೋಮ, ಶ್ರೀಸೂಕ್ತ ಪುರುಷಸೂಕ್ತ ಹೋಮ, ಸಾಮೂಹಿಕ ಸತ್ಯನಾರಾಯಣ ವ್ರತ ಕಥಾ ಪೂಜಾ, ಸಹಸ್ರನಾಮ, ಮಹಾ ನೈವೇದ್ಯ, ಮಹಾಮಂಗಳಾರತಿ ನಡೆಯಲಿದೆ.

ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದ ಭೋಜನ, ಮಧ್ಯಾಹ್ನ ಪೂಜೆ, 3:30 ರಿಂದ ಭೇರಿತಾಡನ, ಶ್ರೀದೇವರ ಅಶ್ವರಥಾರೋಹಣ, ವಿಜಯಯಾತ್ರಾ, ಸಂಜೆ 7 ಗಂಟೆಗೆ ಪುರಪ್ರವೇಶ, ಆಲಯ ಪ್ರವೇಶ, ಮಂಗಳಾರತಿ, ಮಹಾಪ್ರಸಾದ ವಿತರಣೆ ನಡೆಯಲಿದೆ. ಫೆ.5 ರಂದು ಮಂಜುಗುಣಿಯಲ್ಲಿ ದೇವಸ್ಥಾನದಲ್ಲಿ ಶ್ರೀದೇವರಲ್ಲಿ ಬೆಳಗ್ಗೆ 7 ಗಂಟೆಯಿಂದ ಪೂಜಾರಂಭ, 9.30ಕ್ಕೆ ಶ್ರೀ ದೇವರಿಗೆ ಮಹಾಪೂಜೆ, 11ಗಂಟೆಗೆ ಬೆಳ್ಳಿ-ಬಂಗಾರಗಳಿಂದ ತುಲಾಭಾರ ನಡೆಯಲಿದೆ. ವೆಂಕಟೇಶ ದೇವರಿಗೆ ಆತ್ಮಕಲ್ಯಾಣ, ಕುಟುಂಬ ಕಲ್ಯಾಣ, ಲೋಕ ಕಲ್ಯಾಣೋತ್ಸವ ಸೇರಿ ತ್ರಿವಿಧ ಕಲ್ಯಾಣ ಇದೆ ಎಂದರು.

ಸಂಜೆ 4.30ರಿಂದ ನಿತ್ಯಪೂಜೆ, 5 ಗಂಟೆಗೆ ಸ್ವಾಮಿಗೆ ಕಲ್ಯಾಣೋತ್ಸವ ಆರಂಭವಾಗಲಿದೆ. ಬಳಿಕ ಪಟ್ಟಗಾಣಿಕೆ ಸಮರ್ಪಣೆ, ಪ್ರಪಂಚ ಪುಷ್ಪಾಂಜಲಿ ನಂತರ ಡೋಲೋತ್ಸವ (ಉಯ್ಯಾಲೆ), 8 ಗಂಟೆಗೆ ಮಹಾಪ್ರಸಾದ ಭೋಜನವಿದೆ.

ಫೆ. 6ರಂದು ಶ್ರೀನಿವಾಸ ಸಾಮ್ರಾಜ್ಯ ಪಟ್ಟಬಂಧ ಮಹೋತ್ಸವದ ಅಂಗವಾಗಿ ಬೆಳಗ್ಗೆ 7 ಗಂಟೆಯಿಂದ ಪೂಜಾರಂಭ, 9.30ಕ್ಕೆ ಶ್ರೀ ದೇವರಿಗೆ ಮಹಾಪೂಜೆ, 10.15ಕ್ಕೆ ವೇದಿಕೆಗೆ ಶ್ರೀದೇವರ ಆಗಮನ, ಪೂಜಾರಂಭ, ವಿವಿಧ ದ್ರವ್ಯಗಳಿಂದ ಅಭಿಷೇಕ, ಮುಹೂರ್ತ ವಾಚನ- ದರ್ಶನ, ರಾಜೋಪಚಾರ, ಪಟ್ಟಗಾಣಿಕೆ ಸಮರ್ಪಣೆ, ಭೂದಾನ, ಮಹಾಮಂಗಳಾರತಿ. 1 ಗಂಟೆಗೆ ಮಹಾಪ್ರಸಾದ, ಮಧ್ಯಾಹ್ನ 2 ರಿಂದ ಸಾಂಸೃ್ಕಕ ಕಾರ್ಯಕ್ರಮ,ಸಂಜೆ 5 ಗಂಟೆಯಿಂದ ಸಾಮೂಹಿಕ ಪ್ರಾರ್ಥನೆಯೊಂದಿಗೆ ನೌಕಾ ವಿಹಾರೋತ್ಸವ ಪ್ರಾರಂಭವಾಗಲಿದೆ. ತೀರ್ಥ-ತೀರ-ವಿಹಾರ, ತೀರ್ಥಾರತಿ, ಆಲಯ ಪ್ರವೇಶದೊಂದಿಗೆ ಉತ್ಸವ ಸಂಪನ್ನವಾಗಲಿದೆ ಎಂದರು.

ಫೆ. 7 ರಂದು ಶ್ರೀದೇವರಲ್ಲಿ ಬೆಳಗ್ಗೆ 7 ಗಂಟೆಯಿಂದ ಪೂಜಾರಂಭ, 9.30ಕ್ಕೆ ಶ್ರೀದೇವರಿಗೆ ಮಹಾಪೂಜೆ, 10 ಗಂಟೆಗೆ ವೇದಿಕೆಯಲ್ಲಿ ಸಾಮೂಹಿಕ ಸತ್ಯನಾರಾಯಣ ವ್ರತಕಥಾ ಪೂಜಾರಂಭ ಹಾಗೂ ಶ್ರೀ ದೇವಸ್ಥಾನದಲ್ಲಿ ಪ್ರಾಕಾರ ಬಲಿ ಉತ್ಸವ ಪ್ರಾರಂಭ, ಏಕಾಂತ ಸೇವೆ, ಭಾಗವತ ಸೇವೆ, ರಥಾರೋಹಣ, ದರ್ಶನ, ಸಾಮೂಹಿಕ ಸತ್ಯನಾರಾಯಣ ವ್ರತಕಥಾ ಪೂಜೆಯ ಮಹಾಮಂಗಳಾರತಿ, ಕಥಾಶ್ರವಣ, ಪ್ರಸಾದ ವಿತರಣೆ, 1 ಗಂಟೆಗೆ ಮಹಾಪ್ರಸಾದ ನಡೆಯಲಿದೆ. 15 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಕೊನೆಯ ದಿನ ಸಂಜೆ 4 ರಿಂದ ಸಭಾ ಕಾರ್ಯಕ್ರಮವಿದ್ದು, ಸಿದ್ದಾಪುರ ತಾಲೂಕಿನ ಶಿರಳಗಿಯ ಚೈತನ್ಯ ರಾಜಾರಾಮ ಕ್ಷೇತ್ರದ ಸ್ವಾಮಿ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಹಾಬಲೇಶ್ವರ ಜೋತಿ ಕಾನ್ಮೂಲೆ ಉಪಸ್ಥಿತರಿರುವರು. ಇದೇ ವೇಳೆ ಗಂಗಾವತಿಯ ಶ್ರೀಪಾದ ರಾಯ್ಕರ ದಂಪತಿ ಹಾಗೂ ಧಾರವಾಡದ ವೆಂಕಟೇಶ ಬಿಜಾಪೂರ ದಂಪತಿ, ಮಂಗಳೂರಿನ ಸದಾಶಿವ ಹೆಗಡೆ ದಂಪತಿಯನ್ನು ಸನ್ಮಾನಿಸಲಾಗುತ್ತಿದೆ. ನಂತರ ರಥನಯನ ಅಷ್ಟಾವಧಾನ, ಮಂಗಳಾರತಿ, 8 ಗಂಟೆಗೆ ಮಹಾಪ್ರಸಾದ ನಡೆಯಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net