ಗಿಫ್ಟ್ ಆಮಿಷ ನಂಬಿ ಪಂಗನಾಮ

Published on

ಮಂಗಳೂರು: ಫೇಸ್‌ಬುಕ್‌ನಲ್ಲಿ ಅನಾಮಿಕ ವ್ಯಕ್ತಿಯ ಗಿಫ್ಟ್ ಆಮಿಷ ನಂಬಿ ಮಂಗಳೂರಿನ ಮಹಿಳೆಯೊಬ್ಬರು 7.10 ಲಕ್ಷ ರೂ.ಕಳೆದುಕೊಂಡಿದ್ದಾರೆ.

ಮಂಗಳೂರಿನ ಮಹಿಳೆಗೆ ಡಾ. ತುಷಾರ್ ಪಾಟೀಲ್ ಎನ್ನುವ ಹೆಸರಿನ ಫೇಸ್‌ಬುಕ್ ಖಾತೆಯಿಂದ ಮೆಸೆಜ್ ಬಂದಿದ್ದು, ತಾನು ಫ್ಲೋರಿಡಾದಲ್ಲಿ ನ್ಯೂರೋಲಜಿಸ್ಟ್ ಆಗಿದ್ದೇನೆ ಎಂದು ಪರಿಚಯಿಸಿದ್ದ. ಬಳಿಕ ಮಹಿಳೆಯ ವಾಟ್ಸಾಪ್ ಸಂಖ್ಯೆ ಪಡೆದು ಉಡುಗೊರೆಯಾಗಿ ಪ್ಲಾಟಿನಂ ವಾಚ್, ಡೈಮಂಡ್, ಲ್ಯಾಪ್‌ಟಾಪ್, ಐಫೋನ್, 90 ಸಾವಿರ ಯುಎಸ್ ಡಾಲರ್ ಹಾಗೂ ಚಿನ್ನಾಭರಣ ಕಳುಹಿಸಿಕೊಡುವುದಾಗಿಯೂ, ಈ ಉಡುಗೊರೆ ತಲುಪಿದ ಬಳಿಕ ವಿಮಾನ ನಿಲ್ದಾಣದಿಂದ ಕರೆ ಬರಲಿದೆ ಎಂದೂ ನಂಬಿಸಿದ್ದಾನೆ.

ಆತ ಹೇಳಿದಂತೆ ಮರುದಿನ ಮಹಿಳೆಗೆ ಕರೆ ಬಂದಿದೆ. ಕರೆ ಮಾಡಿದವರು ಗಿಫ್ಟ್ ಪಡೆಯಬೇಕಾದರೆ ಸೆಕ್ಯೂರಿಟಿ ಡಿಪಾಸಿಟ್ ಮತ್ತು ಕ್ಲಿಯರೆನ್ಸ್‌ಗಾಗಿ ಹಣ ಕಳುಹಿಸುವಂತೆ ತಿಳಿಸಿದ್ದಾನೆ. ಅದನ್ನೂ ನಂಬಿದ ಮಹಿಳೆ ಆತ ಹೇಳಿದ ವಿವಿಧ ಖಾತೆಗಳಿಗೆ 7.10 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ. ಬಳಿಕ ತಾನು ಮೋಸ ಹೋಗಿರುವುದು ಅರಿವಾಗಿ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net