

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಸ್ಥಳ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಗೆ ಭಾನುವಾರ ತಿ.ನರಸೀಪುರ ತಾಲೂಕಿನ ವಾಟಾಳು ಸಮೀಪದ ಸುಜ್ಜಲೂರು ಗ್ರಾಮದ ಎಂ. ನಾಗಮಣಿ ಹಾಗೂ ಕುಟುಂಬ 1 ಕೆ.ಜಿ 600 ಗ್ರಾಂ ತೂಕದ ಬೆಳ್ಳಿ ತಟ್ಟೆ ಹಾಗೂ ದೀಪವನ್ನು ಕೊಡುಗೆಯಾಗಿ ನೀಡಿದರು.
ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್, ಪಾರುಪತ್ತೇದಾರ ಮಲ್ಲಿಕಾರ್ಜುನ ಬೆಳ್ಳಿ ತಟ್ಟೆಯನ್ನು ದೇವಸ್ಥಾನಕ್ಕೆ ಹಸ್ತಾಂತರಿಸುವ ವೇಳೆ ಇದ್ದರು.
ಮಾದಪ್ಪನ ನೆಲೆಬೀಡಾದ ಮ.ಬೆಟ್ಟ ಪ್ರಸಿದ್ಧ ಧಾರ್ಮಿಕ ಯಾತ್ರಸ್ಥಳವಾಗಿದ್ದು, ಕೋಟ್ಯಾಂತರ ಭಕ್ತರನ್ನು ಹೊಂದಿದೆ. ಇಲ್ಲಿಗೆ ಜಾತ್ರಾ ಮಹೋತ್ಸವ ವೇಳೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಇಷ್ಟಾರ್ಥ ಸಿದ್ಧಿಗಳನ್ನು ಕರುಣಿಸುವ ಮಾದಪ್ಪನ ಬಗ್ಗೆ ಭಕ್ತರು ಇನ್ನಿಲ್ಲದ ಅಪಾರ ನಂಬಿಕೆಯನ್ನು ಹೊಂದಿದ್ದಾರೆ.