ಪೊಲೀಸರಿಗೆ ಮೆಗಾಫೋನ್ ಕೊಡುಗೆ

mega phone
Published on

ಮಡಿಕೇರಿ: ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಮಡಿಕೇರಿಯ ಸಂಚಾರಿ ಪೊಲೀಸ್ ಠಾಣೆಗೆ ಮೆಗಾಫೋನ್ ಕೊಡುಗೆಯಾಗಿ ನೀಡಲಾಯಿತು.


ಮಡಿಕೇರಿಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಅಗತ್ಯವಾಗಿದ್ದ ಮೆಗಾಫೋನ್‌ನ್ನು ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ಮತ್ತು ಕಾರ್ಯದರ್ಶಿ ಕಟ್ಟೆಮನೆ ಸೋನಜಿತ್ ಅವರು ಸಂಚಾರಿ ಪೊಲೀಸ್ ಠಾಣಾಧಿಕಾರಿ ತಮ್ಮಯ್ಯ ಹಾಗೂ ಅಧಿಕಾರಿಗಳಾದ ಐ.ಪಿ.ನಂದ, ರಂಗೇಗೌಡ ಅವರುಗಳಿಗೆ ಹಸ್ತಾಂತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net