

ಕಾಸರಗೋಡು: ಎಣ್ಮಕಜೆ ಗ್ರಾಪಂ ವತಿಯಿಂದ ಬಾಳೆಮೂಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಂಪ್ಯೂಟರ್ ಮತ್ತು ಪ್ರಿಂಟರ್ ಇತ್ತೀಚೆಗೆ ವಿತರಿಸಲಾಯಿತು.
ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ ಜೆ.ಎಸ್. ಕಂಪ್ಯೂಟರ್ ಮತ್ತು ಪ್ರಿಂಟರ್ ಹಸ್ತಾಂತರಿಸಿದರು. ಗ್ರಾಪಂ ಸದಸ್ಯ ಶಶಿಧರ, ಪಂಚಾಯಿತಿ ಪ್ರಭಾರ ಕಾರ್ಯದರ್ಶಿ ಗಿರೀಶ್, ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ರಾಜೇಶ್ ಬಾಳೆಮೂಲೆ, ಎಸ್‌ಎಂಸಿ ಅಧ್ಯಕ್ಷ ಬಾಲಕೃಷ್ಣ ಭಟ್, ಶಾಲಾ ಎಸ್.ಎಸ್.ಜಿ. ಅಧ್ಯಕ್ಷ ಬಟ್ಯ ಮಾಸ್ಟರ್, ಪಿಟಿಎ ಉಪಾಧ್ಯಕ್ಷ ಪುರಂದರ ಬಾಳೆ ಮೂಲೆ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ರಾಜೇಶ್ ಬಜಕೂಡ್ಲು ಕೊಡುಗೆ ಸ್ವೀಕರಿಸಿದರು.