

ಧಾರವಾಡ: ಅಯೋಧ್ಯೆಯ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ನಗರದ ಕಮಲಾಪುರದ ಸುಭಾಷ ರಾಯಪ್ಪನವರ 2 ಕಂಬಳಿಗಳನ್ನು ಬುಧವಾರ ದೇಣಿಗೆ ನೀಡಿದರು.
ವಿಶ್ವ ಹಿಂದು ಪರಿಷತ್‌ನ ಡಾ. ಎಸ್.ಆರ್. ರಾಮನಗೌಡರ ಹಾಗೂ ಮಾಜಿ ಮೇಯರ್ ಈರೇಶ ಅಂಚಟಗೇರಿ ಅವರಿಗೆ ಕಂಬಳಿಗಳನ್ನು ಹಸ್ತಾಂತರಿಸಿದರು. ಜ. 22ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಹಾಗೂ ಭವ್ಯಮಂದಿರ ಉದ್ಘಾಟನೆ ಆಗುತ್ತಿದೆ. ಈ ಕಾರ್ಯಕ್ರಮದ ಬಳಕೆಗಾಗಿ ಸುಭಾಷ ರಾಯಪ್ಪನವರ ಎರಡು ಕಂಬಳಿಗಳನ್ನು ನೀಡಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮೂಲಕ ಅಯೋಧ್ಯೆಗೆ ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿದೆ.
ಸೋಮಶೇಖರಗೌಡ ಪಾಟೀಲ, ಗುರುನಾಥ ಹೊನ್ನನ್ನವರ, ಈರಪ್ಪ ಗೌಡಪ್ಪನವರ, ಯ¯್ಲಪ್ಪ ಹೊಟ್ಟಿ, ಉಳವಪ್ಪ ಅನಾಡ, ಚಂದ್ರು ಗುಮಗೋಳಮಠ, ಮುರುಗೇಶ ಬಾಳಗಿ, ಈರಯ್ಯ ರಾಮಯ್ಯನವರ, ಬಸವಣ್ಣೆಪ್ಪ ಬಾಳಗಿ, ನಿರ್ಮಲಾ ಕನ್ನಿನಾಯ್ಕರ, ಇತರರಿದ್ದರು.