ದಾರುಣ ಸ್ಥಿತಿಯಲ್ಲಿ ಗಿಡ್ಡನಹಳ್ಳಿ ರಸ್ತೆ!

27 10 2025_BNG_RURAL_PAGE_3
ಹೊಸಕೋಟೆ ತಾಲೂಕಿನ ನಂದಗುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿಡ್ಡನಹಳ್ಳಿಮಧ್ಯಭಾಗದಲ್ಲಿ ಕೆಸರು ಗದ್ದೆಯಂತಿರುವ ರಸ್ತೆ.
Published on

ಎಂ.ರಾಮೇಗೌಡ ನಂದಗುಡಿ

ಹೊಸಕೋಟೆ ತಾಲೂಕು ನಂದಗುಡಿ ಗ್ರಾಪಂ ವ್ಯಾಪ್ತಿಯ ಗಿಡ್ಡನಹಳ್ಳಿ ರಸ್ತೆ ದಾರುಣವಾಗಿದ್ದು, ಮಣ್ಣಿನ ರಸ್ತೆಯಲ್ಲಿನ ಏರು ತಗ್ಗು, ಹೊಂಡ- ಗುಂಡಿಯ ಕೆಸರಿನಲ್ಲಿ ಓಡಾಡುವಂತಾಗಿದೆ. ನೂರಕ್ಕೂ ಹೆಚ್ಚು ಮನೆಗಳಿರುವ ಇಲ್ಲಿ ಎಸ್ಸಿ, ಎಸ್ಟಿ ಮತ್ತು ಗೊಲ್ಲ ಜನಾಂಗದವರೇ ಹೆಚ್ಚಿದ್ದಾರೆ. ಸುಮಾರು 300 ರಿಂದ 400 ಜನಸಂಖ್ಯೆ ಈ ಹಳ್ಳಿಯಲ್ಲಿದೆ. ಹೈನುಗಾರಿಕೆ ಕಸುಬನ್ನಾಗಿಸಿಕೊಂಡಿರುವ ಇಲ್ಲಿನ ಜನರು ಬೆಳಗ್ಗೆ ಎದ್ದರೆ ಬಹುತೇಕರು ಕೂಲಿ ಕೆಲಸಗಳಿಗೆ ತೆರಳುತ್ತಾರೆ. ಪ್ರತಿದಿನ ಶಾಲಾ ಮಕ್ಕಳು, ಕಾರ್ಖಾನೆಗೆ ಹೋಗುವ, ನಿತ್ಯ ಕೆಲಸ ಕಾರ್ಯಗಳಿಗೆ ತೆರಳುವವರು ನಂದಗುಡಿ ಮತ್ತು ಬೈಲನರಸಾಪುರ ಮುಖ್ಯರಸ್ತೆ ತಲುಪಬೇಕೆಂದರೆ ಈ ಕಚ್ಚಾ ರಸ್ತೆಯಲ್ಲೇ ಸಾಗಬೇಕು. ಶಾಲಾ ವಾಹನ, ತರಕಾರಿ ವಾಹನಗಳು ಇಲ್ಲೇ ಸಾಗಬೇಕು. ಗ್ರಾಮ ದೇವತೆಗಳ ದೇವಸ್ಥಾನಗಳಾದ ಕಾಟೇರಮ್ಮ, ವೀರಾಂಜನೇಯ, ಶನೈಶ್ಚರ, ಮುನೇಶ್ವರ ದೇಗುಲಗಳಿಗೆ ಭೇಟಿ ನೀಡುವವರು ಈ ಅಧ್ವಾನಗೊಂಡ ರಸ್ತೆಯಲ್ಲೇ ನಿತ್ಯ ಸಂಚಾರಿಸುವ ಅನಿವಾರ್ಯ ಎದುರಾಗಿದೆ.

ವೋಟು ಕೇಳೋಕಷ್ಟೇ ಬರುವರು : ರಸ್ತೆ ಅಭಿವೃದ್ಧಿಗಾಗಿ ಜನಪ್ರತಿನಿಧಿಗಳ ಬಳಿ ಮಾಡಿಕೊಂಡ ಮನವಿ ಲಿಸಿಲ್ಲ. ಅಧಿಕಾರಿಗಳು ಗಮನಕ್ಕೆ ಹಾಕಿಕೊಳ್ಳುತ್ತಿಲ್ಲ. ಸಮಸ್ಯೆ ಬಗ್ಗೆ ಯಾರ ಬಳಿ ಹೇಳಿಕೊಳ್ಳಬೇಕು ಎಂಬುದೇ ತಿಳಿಯುತ್ತಿಲ್ಲ ಎಂಬುದು ಸ್ಥಳಿಯರ ದೂರಾಗಿದೆ. ಚುನಾವಣೆ ವೇಳೆ ವೋಟಿಗಾಗಿ ಬರುತ್ತಾರೆ. ಆಗ ಭರವಸೆ ನೀಡಿ ಹೋಗುವ ಜನಪ್ರತಿನಿಧಿಗಳು ಮತ್ಯಾವತ್ತೂ ಕಣ್ಣೆತ್ತಿಯೂ ಇತ್ತ ನೋಡಲ್ಲ ಎಂದು ಇಲ್ಲಿನ ಮಹಿಳೆಯರು ಅಸಮಾಧಾನದ ಮಾತು. ಯಾವ ಕಾರಣಕ್ಕೆ ಗಿಡ್ಡನಹಳ್ಳಿ ರಸ್ತೆ ಅಭಿವೃದ್ಧಿಯಾಗುತ್ತಿಲ್ಲ ಎಂಬುದು ತಿಳಿಯದಾಗಿದೆ. ಇದೆಲ್ಲದರಿಂದ ಜನರ ಸ್ಥಿತಿ ಅಯೋಮಯವಾಗಿದೆ.

ಕಿತ್ತುಬಂದ ಕಾಂಕ್ರೀಟ್​ : ಗ್ರಾಮದ ಮಧ್ಯಭಾಗದ ರಸ್ತೆಯ ಕಾಂಕ್ರೀಟ್​ ಕಿತ್ತುಹೋಗಿ ಕೆಸರುಗದ್ದೆಯಾಗಿ, ದೊಡ್ಡ ದೊಡ್ಡ ಹೊಂಡಗಳು ಸೃಷ್ಟಿಯಾಗಿವೆ. ಇಲ್ಲಿನ ರಸ್ತೆಯ ದುಸ್ಥಿತಿ ಆ ಭಗವಂತನಿಗೆ ಪ್ರೀತಿ ಎಂಬಂತಾಗಿದೆ. ವಯೋವೃದ್ಧರು, ಅನಾರೋಗ್ಯ ಪೀಡಿತರು ಸಾಗುವುದು ಕಷ್ಟದ ಮಾತು. ಬಿಸಿಲು ಬಿದ್ದಾಗ ಏಳುವ ಧೂಳು, ಮಳೆ ಬಂದಾಗ ಕೆಸರು ಇವರೆಡರ ನಡುವೆ ನಾಗರಿಕರ ಪಯಣ ನರಕ ಸದೃಶ್ಯವಾಗಿದೆ.

ನಾನುಹಿಂದಿನ ಅವಧಿಯಲ್ಲಿ ಪಂಚಾಯಿತಿ ಸದಸ್ಯನಾಗಿದ್ದಾಗ ಗ್ರಾಮದ ಚರಂಡಿ ಸ್ವಚ್ಛತೆ, ಬೀದಿ ದೀಪದ ವ್ಯವಸ್ಥೆ ಅಗತ್ಯವಿದ್ದೆಡೆ ಚರಂಡಿಗಳ ನಿಮಾರ್ಣ ಸೇರಿ ಮೂಲಸೌಕರ್ಯ ಕಲ್ಪಿಸಿದ್ದೇನೆ. > ಜೈ ಕುಮಾರ್​ ಗ್ರಾಪಂ ಮಾಜಿ ಸದಸ್ಯ ಮುಂಜಾನೆ 5 &6 ಗಂಟೆಗೆ ಹಾಲು ಕರೆದು ನಂದಗುಡಿ ಪಟ್ಟಣಕ್ಕೆ ಹೋಗಬೇಕಾದರೆ ಈ ಕೆಸರು ಗದ್ದೆಯಂತಿರುವ ರಸ್ತೆಯಲ್ಲಿ ಪ್ರಾಣ ಕೈಯಲ್ಲಿ ಹಿಡಿದು ಸೈಕಲ್​ನಲ್ಲಿ ಸವಾರಿ ಮಾಡಬೇಕು. ನಿತ್ಯದ ಕೆಲಸಗಳಿಗೆ ಬೆಳಗಾದರೆ ನಂದಗುಡಿಗೆ ಹೋಗಬೇಕು. ಅಂಗನವಾಡಿ, ಶಾಲಾ ಮುಂಭಾಗದಲ್ಲಿ ರಸ್ತೆ ಮತ್ತು ಚರಂಡಿ ಹಾಳಾಗಿದೆ. ಚರಂಡಿಗಳಲ್ಲಿ ಕಸ ತುಂಬಿ ಕೊಳಚೆ ನೀರು ರಸ್ತೆ ಮೇಲೆ ಹರಿದು ಬರುತ್ತಿದೆ. > ಗೌಸ್​ ಗಿಡ್ಡನಹಳ್ಳಿ ಗ್ರಾಮಸ್ಥ ಗಿಡ್ಡನಹಳ್ಳಿಯಲ್ಲಿ 3 &4 ತಿಂಗಳ ಹಿಂದೆ ಚರಂಡಿ ಸ್ವಚ್ಛ ಮಾಡಿಸಲಾಗಿದೆ. ಇನ್ನು ಕ್ರಿಯಾ ಯೋಜನೆಯಲ್ಲಿ ಸೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮಕ್ಕೆ ದೀಪದ ವ್ಯವಸ್ಥೆ, ಚರಂಡಿ ನೈರ್ಮಲ್ಯ ಕಾರ್ಯ ಕೈಗೊಳ್ಳಲಾಗುವುದು. > ಎಂ.ಕೆಂಪಣ್ಣ ಪಿಡಿಒ, ನಂದಗುಡಿ ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net