ಬೃಹತ್ ಗಾತ್ರದ ಗೂಳಿ ರಕ್ಷಣೆ

Giant bull protection
ರಬಕವಿಯ ಕಾಡಸಿದ್ಧೇಶ್ವರ ದೇಗುಲ ಎದುರಿನ ಹಳ್ಳದಲ್ಲಿ ಬಿದ್ದಿದ್ದ ಗೂಳಿಯನ್ನು ಗೋಸೇವಾ ತಂಡದ ಸದಸ್ಯರು ಮತ್ತು ಅಗ್ನಿಶ್ಯಾಮಕದಳದವರು ರಕ್ಷಿಸಿದರು.
Published on

ರಬಕವಿ/ಬನಹಟ್ಟಿ: ಸೋಮವಾರ ರಾತ್ರಿ ರಬಕವಿಯ ಕಾಡಸಿದ್ಧೇಶ್ವರ ದೇಗುಲ ಎದುರಿನ ಹಳ್ಳದಲ್ಲಿ ನಿರ್ಮಿಸಿದ ನೂತನ 40 ಅಡಿ ಆಳದ ಬೃಹತ್ ಚರಂಡಿಯಲ್ಲಿ ರಾತ್ರಿ 8ಗಂಟೆಗೆ ಆಕಸ್ಮಿಕವಾಗಿ ಬಿದ್ದಿರುವ ಗೂಳಿಯನ್ನು ಸ್ಥಳೀಯ ಗೋಸೇವಾ ತಂಡ ಹಾಗೂ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

ಗೂಳಿ ಚರಂಡಿಗೆ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು, ಗೋಸೇವಾ ತಂಡದ ನಾಯಕ ನಾಯಕ ಸಂತೋಷ ಆಲಗೂರ ಮತ್ತು ಅವರ ತಂಡದ 12 ಜನ ಗೋಸೇವಕರು ಎರಡು ಗಂಟೆಗಳ ಕಾಲ ಶ್ರಮಿಸಿದರೂ ಲಪ್ರದವಾಗಲಿಲ್ಲ.

ಅವಳಿನಗರ ವ್ಯಾಪ್ತಿಯಲ್ಲಿನ ರಾಂಪುರದ ನಗರದಲ್ಲಿರುವ ಆಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು 3ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಗೂಳಿಯನ್ನು ಸುರಕ್ಷಿತವಾಗಿ ಹೊರ ತಂದರು.

ಕಾರ್ಯಾಚರಣೆಯಲ್ಲಿ ಮಾಜಿ ನಗರಾಧ್ಯಕ್ಷ ಸಂಜಯ ತೆಗ್ಗಿ, ಅಗ್ನಿಶಾಮಕ ಠಾಣಾಧಿಕಾರಿ ರಮೇಶ ಚಿವಟೆ, ಸಿಬ್ಬಂದಿ ಎಂ.ಎಸ್. ಹೂಗಾರ, ಕೆ.ಡಿ.ಹಳ್ಳೂರ, ಎಸ್.ವೈ.ಸಂದ್ರಿಮನಿ, ಆರ್.ಸಿ.ಬಿಳ್ಳೂರೆ, ಮಾರುತಿ ರಾಥೋಡ, ಎಂ.ಎಸ್.ಸತಿಗೌಡರ ಟೀಂಗೋಸೇವಾ ಮುಖ್ಯಸ್ಥ ಸಂತೋಷ ಆಲಗೂರ ಮತ್ತಿತರರು ಪಾಲ್ಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net