BJP ಸೇಪರ್ಪಡೆಗೆ ಸಜ್ಜಾದ ಘೋಟ್ನೇಕರ್‌ : ಇಂದು 10 ಗಂಟೆಗೆ ಶಿರಸಿಯಲ್ಲ ಸಭೆ

BJP
Published on

ಕಾರವಾರ/ಹಳಿಯಾಳ: ಮಾಜಿ ಎಂಎಲ್‌ಸಿ, ಜೆಡಿಎಸ್ ನಾಯಕ ಎಸ್.ಎಲ್.ಘೋಟ್ನೇಕರ್ ಇಂದು BJP  ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ. ಶಿರಸಿಯಲ್ಲಿ ಘೋಟ್ನೇಕರ್ ಸೇರ್ಪಡೆ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದೆ. ಇತ್ತ ಹಳಿಯಾಳ ಬಿಜೆಪಿಯಲ್ಲಿ ತಳಮಳ ಶುರುವಾಗಿದೆ. ದಿನಕ್ಕೊಂದು ಬೆಳವಣಿಗೆಯಾಗುತ್ತಿದ್ದು, ರಾಜಕೀಯ ಕಣ ತೀವ್ರ ಕುತೂಹಲ ಕೆರಳಿಸುತ್ತಿದೆ. ದಶಕಗಳಿಂದ ಕಾಂಗ್ರೆಸ್ ಕೋಟೆಯಾಗಿದ್ದ ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ bjp ಕಟ್ಟಿ ಬೆಳೆಸಿದವರು ಸುನೀಲ ಹೆಗಡೆ. ವಿಧಾಸಭಾ ಚುನಾವಣೆ ಸೋತಿದ್ದರೂ 10 ವರ್ಷಗಳಲ್ಲಿ ಪಕ್ಷ ಸಂಘಟನೆಗೆ ಸಾಕಷ್ಟು ಒತ್ತು ನೀಡಿದ್ದಾರೆ. ಜತೆಗೆ ಸ್ಥಳೀಯ ಸಂಸ್ಥೆಗಳಲ್ಲೂ ಬಿಜೆಪಿ ಅಽಕಾರಕ್ಕೆ ಬರಲು ಕಾರಣರಾಗಿದ್ದಾರೆ. ಇದುವರೆಗೆ ಹಳಿಯಾಳ ಬಿಜೆಪಿಯಲ್ಲಿ ಅವರಿಗೆ ಟಿಕೆಟ್ ಪೈಪೋಟಿ ಒಡ್ಡುವವರಿರಲಿಲ್ಲ. ಈಗ ಘೋಟ್ನೇಕರ್ ಸೇರ್ಪಡೆಯಿಂದ ಸುನೀಲ ಹೆಗಡೆ ಪಕ್ಷದಲ್ಲೇ ಪೈಪೋಟಿ ಎದುರಿಸಬೇಕಾಗಿದೆ. ಘೋಟ್ನೇಕರ್ ಮತ್ತು ಸುನೀಲ ಬೆಂಬಲಿಗರ ನಡುವೆ ಹೊಂದಾಣಿಕೆಯ ಸಮಸ್ಯೆ ಉಂಟಾಗಲಿದೆ. ಶ್ರೀನಿವಾಸ ಘೋಟ್ನೇಕರ್ ಬಿಜೆಪಿ ಸೇರ್ಪಡೆಯಿಂದಲೇ ಹಳಿಯಾಳ ಬಿಜೆಪಿಯಲ್ಲಿ ಅಸಮಾಧಾನದ ಅಲೆ ಎದ್ದಿತ್ತು. ಅದು ಒಮ್ಮೆ ಸ್ಪೋಟಗೊಂಡು ಪಕ್ಷದ ಸಭೆಯಲ್ಲಿ ಗಲಾಟೆಯೂ ನಡೆದಿತ್ತು ಎಂಬುದನ್ನು ನೆನಪಿಸಿಕೊಳ್ಳಬಹುದು. ಈಗಲೂ ಬಿಜೆಪಿಯಲ್ಲಿ ಅಸಮಾಧಾನ ಹೊಗೆಯಾಡುತ್ತಲೇ ಇದೆ.

ಜಿಲ್ಲಾ ಬಿಜೆಪಿ ಕಾಗೇರಿ  ವರ್ಸಸ್ ಅನಂತ

ಜಿಲ್ಲೆಯ ಬಿಜೆಪಿಯಲ್ಲಿ ಅನಂತ ಕುಮಾರ ಹೆಗಡೆ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ ನಡುವೆ ತೀವ್ರ ವೈಮನಸ್ಸು ಇರುವುದು ಎಲ್ಲರಿಗೂ ತಿಳಿದಿದೆ. ಶಿರಸಿ ರಾಜಕೀಯ ಈಗ ಹಳಿಯಾಳಕ್ಕೂ ವಿಸ್ತರಿಸಿದಂತಾಗಿದೆ. ಸುನೀಲ ಹೆಗಡೆ ಮಾಜಿ ಸಂಸದ ಅನಂತ ಕುಮಾರ ಹೆಗಡೆ ಬೆಂಬಲಿಗರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಪಡೆದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹಳಿಯಾಳದಲ್ಲಿ ತಮ್ಮ ಗೆಲುವಿಗೆ ರಾಜ್ಯದ ಮೈತ್ರಿ ಪಕ್ಷ ಜೆಡಿಎಸ್‌ನ ಮುಖಂಡ ಘೋಟ್ನೇಕರ್ ಬೆಂಬಲ ಪಡೆದಿದ್ದರು. ಶ್ರೀನಿವಾಸ ಘೋಟ್ನೇಕರ್ ಅವರನ್ನು ಬಿಜೆಪಿಗೆ ಸ್ವಾಗತಿಸಿದ್ದರು. ಈಗ ಕಾಗೇರಿ ಅವರ ಮುತುವರ್ಜಿಯಿಂದಲೇ ಶ್ರೀಕಾಂತ ಘೋಟ್ನೇಕರ್ ಬಿಜೆಪಿ ಸೇರುತ್ತಿದ್ದಾರೆ.

ಒಟ್ಟಾದರೆ BJP ಗೆ ಬಲ

ಹಳಿಯಾಳ ಕ್ಷೇತ್ರದಲ್ಲಿ ಬಹು ಸಂಖ್ಯಾತ ಮತದಾರರಾಗಿರುವ ಮರಾಠಾ ಸಮುದಾಯಕ್ಕೆ ಸೇರಿದವರು ಶ್ರೀಕಾಂತ ಘೋಟ್ನೇಕರ್.ಸುನೀಲ ಹೆಗಡೆ ಸ್ಥಳೀಯವಾಗಿ ಸಾಕಷ್ಟು ಹೋಲ್ಡ್ ಹೊಂದಿದ್ದಾರೆ. ಇಬ್ಬರೂ ಒಟ್ಟಾರೆ ಕಾಂಗ್ರೆಸ್‌ನ ಘಟ್ಟಿಗ ಆರ್.ವಿ.ದೇಶಪಾಂಡೆ ಅವರನ್ನು ಎದುರಿಸುವುದು ಸುಲಭ ಎಂಬುದು ಬಿಜೆಪಿ  BJP ಹಿರಿಯ ನಾಯಕರ ಲೆಕ್ಕಾಚಾರ. ಆದರೆ, ಸ್ಥಳೀಯ ಪ್ರತಿಷ್ಠೇಗಳ ನಡುವೆ ಆ ಸಮೀಕರಣ ಎಷ್ಟರ ಮಟ್ಟಿಗೆ ವರ್ಕೌಟ್ ಆಗಲಿದೆ ಎಂಬುದನ್ನು ಕಾಲವೇ ಉತ್ತರಿಸಬೇಕಿದೆ.

ಕೈಯ್ಯಿಂದ ಕಮಲದವರೆಗೆ

ಕಾಂಗ್ರೆಸ್‌ನ ದೇಶಪಾಂಡೆ ಗರಡಿಯಲ್ಲಿ ಬೆಳೆದ ಘೋಟ್ನೇಕರ್, ಅವರದ್ದೇ ಬೆಂಬಲದಿಂದ 2 ಬಾರಿ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದರು. ನಂತರ ಉತ್ತರ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ 2 ಬಾರಿ ಎಂಎಲ್‌ಸಿಯಾಗಿದ್ದರು. ಹಳಿಯಾಳ ವಿಧಾನಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದ ಘೋಟ್ನೇಕರ್, ಟಿಕೆಟ್ ಸಿಗದ ಕಾರಣಕ್ಕೆ ದೇಶಪಾಂಡೆ ವಿರುದ್ಧ ತಿರುಗಿ ಬಿದ್ದಿದ್ದರು. ಜೆಡಿಎಸ್ ಸೇರಿ ದೇಶಪಾಂಡೆ ವಿರುದ್ಧವೇ ವಿಧಾನಸಭೆ ಚುನಾವಣೆ ಸ್ಪಽðಸಿ, ಸೋಲು ಕಂಡಿದ್ದರು. ಲೋಕಸಭಾ ಚುನಾವಣೆಯ ಅವಽಯಲ್ಲಿ ತಮ್ಮ ಪುತ್ರ ಶ್ರೀನಿವಾಸ ಘೋಟ್ನೇಕರ್ ಅವರನ್ನು ಬಿಜೆಪಿಗೆ ಕಳಿಸಿದ್ದರು. ಈಗ ಸ್ವತಃ ಕಮಲ ಪಾಳಯ ಸೇರಲು ಸಜ್ಜಾಗಿದ್ದಾರೆ.

ವಿ.ಡಿ.ಹೆಗಡೆ ಅವರನ್ನು ಭೇಟಿಯಾದ ಘೋಟ್ನೇಕರ್

ಕಮಲ ಪಾಳಯ ಸೇರ್ಪಡೆಯಿಂದ ಹಳಿಯಾಳ BJP ಬಿಜೆಪಿಯಲ್ಲಿ ಉಂಟಾಗುತ್ತಿರುವ ಅಸಮಾಧಾನವನ್ನು ಶಮನ ಮಾಡಲು ಯತ್ನಿಸಿರುವ ಘೋಟ್ನೇಕರ್ ಶುಕ್ರವಾರ ಹಿರಿಯ ರಾಜಕಾರಣಿ ವಿ.ಡಿ.ಹೆಗಡೆ ಅವರ ನಿವಾಸಕ್ಕೆ ತೆರಳಿ ಅವರನ್ನು ಭೇಟಿಯಾದರು. ವಿ.ಡಿ.ಹೆಗಡೆ ಅವರು ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ, ಮಾಜಿ ಶಾಸಕ ಸುನೀಲ ಹೆಗಡೆ ಅವರ ತಂದೆ.

ಭೇಟಿ ಸಂದರ್ಭದಲ್ಲಿ ವಿ.ಡಿ.ಹೆಗಡೆ ಮಾತನಾಡಿ, `ಯಾರೆ ಪಕ್ಷಕ್ಕೆ ಬರಲಿ ನಾನು ಅದನ್ನು ವಿರೋಽಸುವುದಿಲ್ಲ. ಆದರೆ, ಸುನೀಲ ಹೆಗಡೆ ಬಿಜೆಪಿ ಸೇರ್ಪಡೆಗೂ ಮುಂಚೆ ಕ್ಷೇತ್ರದಲ್ಲಿ ಪಕ್ಷದ ಪರಿಸ್ಥಿತಿ ಹೇಗಿತ್ತು. ಈಗ ಹೇಗಿದೆ ಎಂಬುದನ್ನು ನೀವು ತಿಳಿದುಕೊಳ್ಳಬೇಕು. ಸ್ಥಳೀಯವಾಗಿ ಗುಂಪುಗಾರಿಕೆ ಮಾಡದೇ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬೇಕು' ಎಂದು ಘೋಟ್ನೇಕರ್‌ಗೆ ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ.

`ನಾವಿಬ್ಬರೂ ಆರ್.ವಿ.ದೇಶಪಾಂಡೆ ಅವರ ಜತೆಗಿದ್ದವರು. ಆರ್‌ವಿಡಿ ನಮಗೆ ಮಾಡಿದ ದ್ರೋಹಕ್ಕಾಗಿ ಇಬ್ಬರೂ ಅವರಿಂದ ದೂರವಾಗಿದ್ದೇವೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿAದ ಹೊರ ಬಂದ ನಂತರ ತಾವು ಬಿಜೆಪಿಗೆ ಸೇರ್ಪಡೆಯಾಗಬಹುದಿತ್ತು. ಟಿಕೆಟ್ ವಿಚಾರ ಬಿಟ್ಟು ಆರ್‌ವಿಡಿ ಅವರನ್ನು ಸೋಲಿಸಲು ಪಣ ಮಾಡಬಹುದಿತ್ತು. ಆಗ ಚಿತ್ರಣವೇ ಬೇರೆ ಆಗುತ್ತಿತ್ತು' ಎಂದು ಘೋಟ್ನೇಕರ್ ನಡೆಯ ಬಗ್ಗೆ ಅಸಮಾಧಾನವನ್ನೂ ನೇರವಾಗಿ ಹೊರ ಹಾಕಿದ್ದಾರೆ ಎನ್ನಲಾಗಿದೆ. ಭೇಟಿ ಈ ಸಂದರ್ಭದಲ್ಲಿ ಹಳಿಯಾಳ ತಾಲೂಕಾ ಬಿಜೆಪಿ ಪ್ರಭಾರಿ ನಂದು ಗಾಂವಕರ್, ಪುರಸಭೆಯ ಬಿಜೆಪಿ ಸದಸ್ಯ ಉದಯ ಹೂಲಿ, ಪ್ರಮುಖರಾದ ಮೊಹನ ಬೆಳಗಾಂವಕರ, ನಾರಾಯಣ ಬೆಳಗಾಂವಕರ ಇದ್ದರು.

ನನ್ನ ಆಕ್ಷೇಪವಿಲ್ಲ

ಎಸ್.ಎಲ್.ಘೋಟ್ನೇಕರ್ ಅವರು BJP ಬಿಜೆಪಿ ಸೇರ್ಪಡೆಗೊಳ್ಳುತ್ತಿರುವುದಕ್ಕೆ ಅಭ್ಯಂತರವಿಲ್ಲ ಎಂದು ಸುನೀಲ್ ಹೆಗಡೆ ಹೇಳಿದ್ದಾರೆ.

ಕ್ಷೇತ್ರದ ಮಂಡಲ ಪ್ರಮುಖರ ಜತೆ ಅವರು ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಪಕ್ಷ ಬಲವರ್ಧನೆಗೆ ನಾನು ಹಾಗೂ ಎಲ್ಲ ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದೇವೆ. ಪಕ್ಷಕ್ಕೆ ಯಾರೆ ಸೇರಿದರೂ ನಮ್ಮ ತಕರಾರಿಲ್ಲ. ಆದರೆ, ಘೋಟ್ನೇಕರ್ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬಿಜೆಪಿ ಸೇರ್ಪಡೆಯಾಗಲಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ನ.28 ರಂದು ನಡೆದ ಕ್ಷೇತ್ರದ ಮೂರು ತಾಲೂಕುಗಳ ಪ್ರಮುಖ ಪದಾಽಕಾರಿಗಳ ಸಭೆಯಲ್ಲಿ ಈ ಬಗ್ಗೆ ನಿರ್ಣಯವಾಗಿದೆ. ಹಾಗಾಗಿ ಡಿ.1 ಅಥವಾ 2 ರಂದು ಹಳಿಯಾಳದಲ್ಲಿ ಮೂರು ತಾಲೂಕುಗಳ ಮಂಡಲ ಪ್ರಮುಖರು, ಕಾರ್ಯಕರ್ತರ ಸಭೆ ನಡೆಸಲಾಗುವುದು. ಎಸ್.ಎಲ್. ಘೋಟ್ನೇಕರ ಅವರು ಆ ಸಭೆಯಲ್ಲಿ ಎಲ್ಲರ ಜತೆ ಚರ್ಚಿಸಲಿ ಎಂದಿದ್ದಾರೆ.

ಹಳಿಯಾಳ ಅದ್ಯಕ್ಷ ವಿಠ್ಠಲ ಸಿದ್ದನ್ನವರ, ದಾಂಡೇಲಿ ಅಧ್ಯಕ್ಷ ಬುದ್ದವಂತ ಗೌಡ ಪಾಟೀಲ, ಜೊಯಿಡಾ ಅಧ್ಯಕ್ಷ ಶಿವಾಜಿ ಗೋಸಾವಿ, ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ ಘಟಕಾಂಬಳೆ, ಗಿರಿಶ ಠೊಸುರ, ಮಿಥುನ ನಾಯಕ, ಅರುಣ ಕಾಮರೆಕರ,ಮಹಾದೇವ ವೆಳಿಪ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net