ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಐವರ ನೇಮಕ

FotoJet (1)
Published on

ತೂಬಗೆರೆ: ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವ ಸರ್ಕಾರವು ಐವರು ನಾಮ ನಿರ್ದೇಶಕರನ್ನು ನೇಮಿಸಿ ಆದೇಶ ಹೊರಡಿಸಿದೆ.

ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಮತ್ತು ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಘಾಟಿ ಸುಬ್ರಹ್ಮಣ್ಯ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದು, ಪ್ರಾಧಿಕಾರದ ಮೊದಲ ನಾಮ ನಿರ್ದೇಶಕರಾಗಿ ಜಿ.ಎನ್.ರಂಗಪ್ಪ, ಕೆ.ಎಸ್.ರವಿ, ಲಕ್ಷ್ಮನಾಯಕ, ಆರ್.ವಿ.ಮಹೇಶ್ ಕುಮಾರ್,ಎಂ. ಹೇಮಲಾತಾ ಅವರನ್ನು ನೇಮಕ ಮಾಡಿ ರಾಜ್ಯಪಾಲರ ಆದೇಶಾನುಸರ ಕಂದಾಯ ಇಲಾಖೆ( ಧಾರ್ಮಿಕ ದತ್ತಿ) ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಪಿ.ಹನುಂತರಾಜು ಆದೇಶಿಸಿದ್ದಾರೆ.

ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮೊದಲ ಸದಸ್ಯರಾದ 5 ಮಂದಿ ಘಾಟಿ ಸನ್ನಿಧಾನದಲ್ಲಿ ಪದಗ್ರಹಣ ಮಾಡಿದರು.

ನೂತನ ಸದಸ್ಯರನ್ನು ಮುಖಂಡರಾದ ಚೆನ್ನೇಗೌಡ, ರವಿ ಸಿದ್ದಪ್ಪ, ಅರವಿಂದ್, ಜಿ.ಕೆ.ಶ್ರೀಧರ್, ಮುರಳಿ, ಗೋಪಾಲ್ ನಾಯ್ಕ, ರಾಮಕೃಷ್ಣಪ್ಪ, ಆಂಜಿನಪ್ಪ ಹಾಗೂ ಅಧಿಕಾರಿಗಳು ಗೌರವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net