ಒಳ್ಳೆಯ ಅಂಕ ಪಡೆದರೆ ಆತ್ಮವಿಶ್ವಾಸ ವೃದ್ಧಿ

16 ANK 2
Published on

ಅಂಕೋಲಾ: ಎಸ್ಸೆಸ್ಸೆಲ್ಸಿ ಫಲಿತಾಂಶವು ಮುಂದಿನ ಶಿಕ್ಷಣದ ದಾರಿ ನಿರ್ಧರಿಸುತ್ತದೆ. ಒಳ್ಳೆಯ ಅಂಕ ಪಡೆಯುವುದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಮುಂದಿನ ಹಂತಗಳನ್ನು ಎದುರಿಸಲು ಸಿದ್ಧರಾಗಬೇಕು ಎಂದು ಬಿಇಒ ಮಂಗಳಲಕ್ಷ್ಮೀ ಪಾಟೀಲ ಹೇಳಿದರು.

ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಅಂಕೋಲಾ ಕರಾವಳಿ ವತಿಯಿಂದ ಪಟ್ಟಣದ ಪಿ.ಎಂ. ಹೈಸ್ಕೂಲಿನ ರೈತ ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ಎರಡು ದಿನದ ಸಂಕಲ್ಪ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಲಯನ್ಸ್ ಕ್ಲಬ್ ಅಂಕೋಲಾ ಕರಾವಳಿ ಅಧ್ಯಕ್ಷ ದೇವಾನಂದ ಗಾಂವಕರ ಬಾಸಗೋಡ ಮಾತನಾಡಿ, ಜೀವನ ಸುಂದರವಾಗಿ ಅರಳಬೇಕೆಂದರೆ ಜ್ಞಾನವೂ ಅವಶ್ಯವಾಗಿದೆ. ವಿದ್ಯಾರ್ಥಿಗಳು ಉತ್ತಮ ಜ್ಞಾನ ಗಳಿಸಿ ಹೆಚ್ಚು ಅಂಕ ಪಡೆದುಕೊಂಡು ಶಾಲೆ ಹಾಗೂ ಊರಿನ ಮನೆಯ ಕೀರ್ತಿ ಬೆಳಗಬೇಕು ಎಂದರು.

ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕಾರಿ ದೇವರಾಯ ನಾಯಕ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಅಧ್ಯಕ್ಷ ಲಕ್ಷ್ಮೀದಾಸ ನಾಯಕ ಮಾತನಾಡಿದರು. ದೈಹಿಕ ಶಿಕ್ಷಣ ಪರಿವೀಕ್ಷಕ ಮಂಜುನಾಥ ನಾಯಕ, ಮುಖ್ಯಾಧ್ಯಾಪಕ ಚಂದ್ರಶೇಖರ ಕಡೆಮನಿ ಉಪಸ್ಥಿತರಿದ್ದರು.

ಶಿಕ್ಷಣ ಸಂಯೋಜಕಿ ರಚನಾ ನಾಯಕ ಸ್ವಾಗತಿಸಿದರು. ಜಯಶ್ರೆಈ, ಎನ್​ಸಿಸಿ ಕಮಾಂಡರ್ ಜಿ.ಆರ್. ತಾಂಡೇಲ್, ಬಿಆರ್​ಪಿ ಮಂಜುನಾಥ ನಾಯ್ಕ ನಿರ್ವಹಿಸಿದರು. ಸಿಆರ್​ಪಿ ವಿನಾಯಕ, ಸಾತು ಗೌಡ, ಕೆ.ಕೆ. ನಾಯ್ಕ, ಮಹಮ್ಮದ್ ಶಫಿ, ಜ್ಯೋತಿ ನಾಯ್ಕ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net