ಹೊಸ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳಿ: ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿ ಪ್ರೊ.ಬಿ.ಕೆ. ತುಳಸಿಮಾಲಾ

WhatsApp Image 2022-11-04 at 1.13.00 PM
ವಿಜಯಪುರ ನಗರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಲದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ನಿವೃತ್ತ ಪ್ರಧ್ಯಾಪಕರ ಸನ್ಮಾನ ಸಮಾರಂಭದಲ್ಲಿ ಕುಲಪತಿ ಪ್ರೊ.ಬಿ.ಕೆ. ತುಳಸಿಮಾಲಾ ಮಾತನಾಡಿದರು. ಪ್ರೊ.ಬಿ.ಎಸ್.ನಾವಿ, ಪ್ರೊ.ಎಂ.ಆರ್. ಜೋಶಿ, ಡಾ.ಮಲ್ಲಿಕಾರ್ಜುನ ಮೇತ್ರಿ ಮತ್ತಿತರರಿದ್ದರು.
Published on

ವಿಜಯಪುರ: ಸಂಘಟನೆಗೆ ಶಕ್ತಿ ಇದೆ. ಅದು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಹಲವಾರು ಜನ ಕೂಡಿಕೊಂಡು ಕಟ್ಟಿಕೊಂಡ ವ್ಯವಸ್ಥೆಯಾಗಿರುತ್ತದೆ. ಇಲ್ಲಿ ಸಹಬಾಳ್ವೆ ಹಾಗೂ ಸಾಮರಸ್ಯ ಮುಖ್ಯವಾಗಬೇಕು ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ. ತುಳಸಿಮಾಲಾ ಅಭಿಪ್ರಾಯಪಟ್ಟರು.

ನಗರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಲದ ಕನ್ನಡ ವಿಭಾಗದ ಸಭಾಭವನದಲ್ಲಿ ಕಾಲೇಜು ಶಿಕ್ಷಕರ ಸಂಘದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ನಿವೃತ್ತ ಪ್ರಧ್ಯಾಪಕರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಲೇಜು ಪ್ರಾಧ್ಯಾಪಕರು ಹೊಸ ತಂತ್ರಜ್ಞಾನಕ್ಕೆ ಒಗ್ಗಿಕೊಂಡು ಸಂಶೋಧನೆ, ವಿಮರ್ಶಾತ್ಮಕ ಬರಹಗಳಿಗೆ ಹಾಗೂ ಬೋಧನೆಗೆ ಮುಂದಾಗಬೇಕು ಎಂದರು.

ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ (ಆಡಳಿತ) ಪ್ರೊ.ಬಿ.ಎಸ್.ನಾವಿ ಮಾತನಾಡಿ, ಸಂಘದಲ್ಲಿ ಸ್ಥಾನ ಪಡೆದುಕೊಂಡವರಿಗೆ ಜವಾಬ್ದಾರಿ ಹೆಚ್ಚಾಗುತ್ತದೆ. ಅದನ್ನು ಅರಿತು ನೂತನ ಪದಾಧಿಕಾರಿಗಳು ಮುಂದುವರೆಯಬೇಕು. ಹೊಸ ಶಿಕ್ಷಣ ರೀತಿಯಲ್ಲಿ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳ ಮಹತ್ವವಿದೆ. ಅದನ್ನು ತಿಳಿದುಕೊಂಡು ಪ್ರಾಧ್ಯಾಪಕರು ಬೋಧನೆಯಲ್ಲಿ ತೊಡಗಿಕೊಳ್ಳಬೇಕು ಎಂದರು.

ಕಾಲೇಜು ಶಿಕ್ಷಕರ ಸಂಘದ ನಿಕಟಪೂರ್ವ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಅವರು ನೂತನ ಅಧ್ಯಕ್ಷ ಪ್ರೊ.ಎಂ.ಆರ್. ಜೋಶಿ ಅವರಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿ, ಸಂಘಟನೆಗೆ ನಿಷ್ಠೆಯಾಗಿ ಸರ್ವ ಪ್ರಾಧ್ಯಾಪಕರು ಇರಬೇಕು. ಆಗ ಮಾತ್ರ ಶಕ್ತಿ ಇರುತ್ತದೆ ಎಂದು ಹೇಳಿದರು.

ನೂತನ ಅಧ್ಯಕ್ಷ ಪ್ರೊ.ಎಂ.ಆರ್. ಜೋಶಿ ಮಾತನಾಡಿ, ಪ್ರಾಧ್ಯಾಪಕರ ಸಮಸ್ಯೆಗಳನ್ನು ವಿಶ್ವವಿದ್ಯಾಲಯಕ್ಕೆ ತಿಳಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತ ಶೈಕ್ಷಣಿಕ ಕಾರ್ಯ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸೋಣ ಎಂದರು.

ಡಾ. ವೈ.ವೈ.ಕೊಕ್ಕನವರ, ಡಾ.ಮಹೇಶ ಗಂವ್ಹಾರ, ಡಾ.ಮಲ್ಲಿಕಾರ್ಜುನ ಮೇತ್ರಿ, ಪ್ರೊ.ಕಿರಣಕುಮಾರ, ಪ್ರೊ.ಶಿವಲಿಂಗ ಸಾಹು, ಪ್ರೊ. ಶಿವರಾಜ ಎಚ್.ಡಿ., ಪ್ರೊ. ಮಯೂರ ತಿಳಗುಳಕರ, ಡಾ.ಮಹಮ್ಮದ ಅ್ಜಲ, ಡಾ.ಸಿ.ಎಲ್.ಪಾಟೀಲ, ಡಾ.ಸುಪ್ರಿಯಾ ಮಲ್ಲಶೆಟ್ಟಿ, ಡಾ.ಭಾರತಿ ಹೊಸಟ್ಟಿ ಹಾಗೂ ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಕಾಲೇಜುಗಳ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net