ಸ್ವಾನಿಧಿ ಯೋಜನೆ ಸೌಲಭ್ಯ ಪಡೆಯಿರಿ

NAVEEN
Published on

ಚಿತ್ರದುರ್ಗ: ಪಿಎಂ ಸ್ವಾನಿಧಿ ಯೋಜನೆ ಮೂಲಕ ಅ.4ರಂದು ಜಿಲ್ಲಾದ್ಯಂತ ವಿತರಕರು ನೋಂದಣಿ ಮಾಡಿಕೊಂಡು 10 ಸಾವಿರ ರೂ. ಸಾಲ ಸೌಲಭ್ಯ ಪಡೆದುಕೊಳ್ಳಿ ಎಂದು ಎಂಎಲ್ಸಿ ಕೆ.ಎಸ್.ನವೀನ್ ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ, ಜಿಲ್ಲಾ ಕಾರ್ಯನಿರತ ಪತ್ರಿಕಾ ಹಂಚಿಕೆದಾರರ ಮತ್ತು ವಿತರಕರ ಸಂಘದಿಂದ ಪತ್ರಿಕಾ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮರ್ಪಕ ಮರುಪಾವತಿಯೊಂದಿಗೆ 5 ಲಕ್ಷ ರೂ. ನಿಂದ 10 ಲಕ್ಷ ರೂ. ವರೆಗೂ ಸಾಲ ಪಡೆದು ಜೀವನಮಟ್ಟ ಸುಧಾರಿಸಿಕೊಳ್ಳಬಹುದು ಎಂದು ಪ್ರತಿ ವಿತರಕರಿಗೂ ಆಧುನಿಕ ಜಾಕೆಟ್ ನೀಡಲಾಗುತ್ತಿದ್ದು, ಚಳಿ-ಮಳೆ-ಗಾಳಿಯಿಂದ ರಕ್ಷಣೆ ಸಿಗಲಿದೆ. ನಿವೇಶನಗಳಿಗೆ ಹಕ್ಕುಪತ್ರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net