ಜಿ.ಪಂ., ತಾ.ಪಂ., ಚುನಾವಣೆಗೆ ಸಿದ್ಧರಾಗಿ

Get ready for G.P., T.P., elections
ವಿಜಯಪುರದ ಜಿಲ್ಲಾ ಕಾಂಗ್ರೆಸ್​ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿದರು. ವಿದ್ಯಾರಾಣಿ ತುಂಗಳ ಇದ್ದಾರೆ.
Published on

ವಿಜಯಪುರ: ಮುಂಬರುವ ದಿನಗಳಲ್ಲಿ ನಡೆಯುವ ಜಿಪಂ ಹಾಗೂ ತಾಪಂ ಚುನಾವಣೆಗಳಿಗೆ ಇಂದಿನಿಂದಲೇ ಸಿದ್ಧತೆ ಕೈಗೊಳ್ಳುವಂತೆ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಪದಾಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಬಾಗಲಕೋಟೆ ರಸ್ತೆಯಲ್ಲಿರುವ ಕಾಂಗ್ರೆಸ್​ ಕಚೇರಿಯಲ್ಲಿ ಶುಕ್ರವಾರ ಮಹಿಳಾ ಜಿಲ್ಲಾ ಅಧ್ಯಕ್ಷರು, ಬ್ಲಾಕ್​ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲ ಪದಾಧಿಕಾರಿಗಳು ಪಕ್ಷದ ಕಾರ್ಯಕರ್ತರ ಜತೆಗೆ ಸಂಪರ್ಕ ಸಾಧಿಸುವ ಮೂಲಕ ಜಿಲ್ಲೆ, ತಾಲೂಕು ಮಟ್ಟದಲ್ಲಿ ತುಂಬಾ ಜಾಗೃತೆಯಿಂದ ಕಾರ್ಯನಿರ್ವಹಿಸಬೇಕು. ಮಹಿಳಾ ಟಕದ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆ ಹಾಗೂ ಬ್ಲಾಕ್​ ಮಟ್ಟದಲ್ಲಿ ಪಕ್ಷವನ್ನು ಸದೃಢಗೊಳಿಸುವಂತೆ ಅವರು ಸಲಹೆ ನೀಡಿದರು.

ಬರುವ ದಿನಗಳಲ್ಲಿ ತಮ್ಮ ಬ್ಲಾಕ್​ ಮಟ್ಟದಲ್ಲಿ ಜಿಲ್ಲಾ ಕಾಂಗ್ರೆಸ್​ ಸಮಿತಿಯು ಪ್ರವಾಸ ಕೈಗೊಳ್ಳಲಿದ್ದು, ತಮ್ಮ ಬ್ಲಾಕ್​ ಮಟ್ಟದ ಎಲ್ಲ ಪದಾಧಿಕಾರಿಗಳ ಜತೆ ಸಭೆ ನಡೆಸಿ ಅಗತ್ಯ ತಯಾರಿ ಮಾಡಬೇಕೆಂದು ತಿಳಿಸಿದರು. ಮಹಿಳಾ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ ಮಾತನಾಡಿದರು. ತಾಲೂಕು ಅಧ್ಯಕ್ಷರು ಹಾಗೂ ಮಹಿಳಾ ಪದಾಧಿಕಾರಿಗಳು ತಮ್ಮ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು.

ಜಿಲ್ಲಾ ಉಪಾಧ್ಯಕ್ಷೆ ಸುಜಾತಾ ಸಿಂಧೆ, ಗಂಗೂಬಾಯಿ ಧುಮಾಳೆ, ಭಾರತಿ ದೊಡಮನಿ, ಸುಮಿತ್ರಾ ಶಿರಗೂರ, ಸುಗಂದಾ ಪಾಟೀಲ, ಜಯಶ್ರೀ ಕಾಲೆಬಾಗ, ಶೋಭಾ ರಾಠೋಡ, ಶೈಲಾಶ್ರೀ ಜಾಧವ, ರಂಜನಾ ಕಿಚಡಿ, ಅಂಬಿಕಾ ಪಾಟೀಲ, ಜಯಶ್ರೀ ಹದನೂರ, ಆಸ್ಮಾ ಕಾಲೇಬಾಗ, ಹಮೀದಾ ಪಟೇಲ, ಸಂಗಮ್ಮ ಹಚಡದ, ಸಮೀಮಾ ಅಕ್ಕಲಕೋಟ, ಸುಜಾತಾ ಜಂಗಮಶೆಟ್ಟಿ, ರುಕ್ಮಿಣಿ ರಾಠೋಡ, ಗಂಗೂಬಾಯಿ ಹಚಡದ, ಶೈಲಾ ಹೊಸಮನಿ, ಬೋರಮ್ಮ ಬಜಾರ, ಮಂಜುಳಾ ಬಡಿಗೇರ, ಕವಿತಾ ವಾಮೋರೆ, ಜ್ಯೋತಿ ಕುಂಬಾರ, ನಿರ್ಮಲಾ ನಾಗನೂರ, ಕಾವ್ಯಾ ತಡಗಾರ, ನೀಲಮ್ಮ ಪಾಟೀಲ, ಅಶ್ವಿನಿ ಪಾಟೀಲ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net