ನಕಾರಾತ್ಮಕ ಚಿಂತನೆಯಿಂದ ಹೊರಬನ್ನಿ

13bnk1 (1)
Published on

ಬಣಕಲ್: ಜಾವಳಿಯ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ವತಿಯಿಂದ ಕೊಟ್ಟಿಗೆಹಾರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಳಸ ತಾಲೂಕು ಯೋಜನಾಧಿಕಾರಿ ಸುರೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಜೆಸಿಐ ವಿಸ್ಮಯ ಸ್ಥಾಪಕ ಅಧ್ಯಕ್ಷ ಸುರೇಶ್ ಎಸ್. ಶೆಟ್ಟಿ ಮಾತನಾಡಿ, ಮಕ್ಕಳು ಧೃಢ ನಿರ್ಧಾರ, ರಚನಾತ್ಮಕ ಚಿಂತನೆ, ಸಂವಹನ ಕೌಶಲ ಬೆಳೆಸಿಕೊಳ್ಳಬೇಕು. ನಕಾರಾತ್ಮಕ ಚಿಂತನೆಯಿಂದ ಹೊರಬಂದು ಆರೋಗ್ಯಪೂರ್ಣ ವ್ಯಕ್ತಿಗಳನ್ನು ಸಮಾಜಕ್ಕೆ ಕೊಡುವಲ್ಲಿ ನಮ್ಮೆಲ್ಲರ ಪಾತ್ರ ಬಹಳ ಮುಖ್ಯ ಎಂದರು.
ಜಾವಳಿ ಗ್ರಾಪಂ ಮಾಜಿ ಪ್ರಧಾನ ಚನ್ನಕೇಶವ ಗೌಡ, ಧರ್ಮಸ್ಥಳ ರಾಷ್ಟ್ರೀಯ ಶೌರ್ಯ ವಿಪತ್ತು ನಿರ್ವಹಣಾ ಜಾವಳಿ ಘಟಕದ ಪರೀಕ್ಷಿತ್ ಜಾವಳಿ, ಜಾವಳಿ ವಲಯ ಮೇಲ್ವಿಚಾರಕ ಸಂದೇಶ್, ಸೇವಾ ಪ್ರತಿನಿಧಿ ಕಾವ್ಯಾ, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net