

ಕುಷ್ಟಗಿ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಉಚಿತ ಸಹಾಯವಾಣಿಗೆ ಕೆರೆ ಮಾಡಿ ಕಾನೂನು ನೆರವು ಪಡೆಯುವಂತೆ ಪಟ್ಟಣದ ಜೆಎಂಎಫ್‌ಸಿ ಕೋರ್ಟ್‌ನ ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಎಲ್.ಪೂಜೇರಿ ಹೇಳಿದರು. ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸಹಾಯವಾಣಿಯ ಪೋಸ್ಟರ್ ವಿತರಿಸಿ ಸೋಮವಾರ ಮಾತನಾಡಿದರು.
ಕೋರ್ಟ್ ಆವರಣ, ತಹಸಿಲ್ ಕಚೇರಿ, ಸಿಡಿಪಿಒ ಕಚೇರಿ ಹಾಗೂ ಹನುಮಸಾಗರ ಗ್ರಾಪಂ ಕಚೇರಿಯಲ್ಲಿಯೂ ಕಾನೂನು ಸೇವಾಕೇಂದ್ರ ತೆರೆಯಲಾಗಿದ್ದು, ಸಾರ್ವಜನಿಕರು ನೇರವಾಗಿ ಸಂಪರ್ಕಿಸಿ ಕಾನೂನು ಸಲಹೆಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ ಚೌಳಗಿ, ವಕೀಲರ ಸಂಘದ ಅಧ್ಯಕ್ಷ ಎಸ್.ಜಿ.ಪಾಟೀಲ್, ಸಿಡಿಪಿಒ ಯಲ್ಲಮ್ಮ ಹಂಡಿ, ತಾಪಂ ವ್ಯವಸ್ಥಾಪಕ ಶಾಂತವೀರಯ್ಯ, ಪುರಸಭೆ ಸಿಬ್ಬಂದಿ ಪ್ರಾಣೇಶ, ಪೊಲೀಸ್ ಸಿಬ್ಬಂದಿ ಈಶಪ್ಪ ಇತರರಿದ್ದರು.