

ಬೆಂಗಳೂರು: ಬಿಬಿಎಂಪಿ ಖಾತಾ ಇಲ್ಲದವರು ಈಗ ಅದನ್ನು ಸುಗಮವಾಗಿ ಮತ್ತು ಆನ್‌ಲೈನ್‌ನಲ್ಲಿ ಪಡೆಯಲು ಪಾಲಿಕೆ ಸುಲಭವಾದ ಮಾರ್ಗವನ್ನು ಹುಡುಕಿದೆ. ಸ್ವತ್ತುದಾರರೇ ನೇರವಾಗಿ ಆನ್‌ಲೈನ್ ಮೂಲಕ ತಮ್ಮ ಆಸ್ತಿಗಳಿಗೆ ಸಂಬಂಧಿಸಿ ಖಾತಾ ಪಡೆದುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ.
ನಾಗರಿಕರು ತಮ್ಮ ಬಳಿ ಖಾತಾ ಇಲ್ಲದಿದ್ದರೆ ಪಾಲಿಕೆಯಿಂದ ಹೊಸದಾಗಿ ಖಾತಾ ಪಡೆಯುವ ಅಭಿಯಾನದಲ್ಲಿ ಪಾಲ್ಗೊಳ್ಳಬಹುದು. ಇದಕ್ಕಾಗಿ ಅರ್ಹರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಸ್ವತ: ಅರ್ಜಿದಾರರೇ ಹೊಸ ಖಾತಾವನ್ನು ರಚಿಸಿಕೊಳ್ಳಬಹುದಾಗಿದೆ. ಆದರೆ, ಬಿಬಿಎಂಪಿ ಖಾತಾ ಇದ್ದು ಮತ್ತು ಇ-ಖಾತಾ ಪಡೆಯಲು ಬಯಸಿದರೆ - ಹೊಸ ಖಾತಾ ಪಡೆಯಲು ಪ್ರಯತ್ನಿಸಬಾರದು. ನಕಲಿ ಖಾತಾಗೆ ಇಂತಹ ಪ್ರಯತ್ನವು ವ್ಯಕ್ತಿಯನ್ನು ಕ್ರಿಮಿನಲ್ ಪ್ರಕರಣಕ್ಕೆ ಹೊಣೆಗಾರರನ್ನಾಗಿ ಮಾಡುತ್ತದೆ ಎಂದು ಪಾಲಿಕೆಯ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.
ಹೊಸ ಬಿಬಿಎಂಪಿ ಖಾತಾ ಪಡೆಯಲು ಬೇಕಿರುವ ದಾಖಲೆ:
* ಆಧಾರ್ ಸಂಖ್ಯೆ
* ಮಾರಾಟ/ನೋಂದಣಿ ಪತ್ರ ಸಂಖ್ಯೆ
* ಆಸ್ತಿ ಫೋಟೋ
* ಮಾರಾಟ/ನೋಂದಣಿ ಪತ್ರಕ್ಕೆ ಕನಿಷ್ಠ 1 ದಿನ ಮೊದಲು ಹಾಗೂ 2024ರ ಅ.31 ಅಥವಾ ನಂತರದವರೆಗೆ ಆಸ್ತಿಯ ಋಣಭಾರ ಪ್ರಮಾಣಪತ್ರ.