

ಕುಮಟಾ: ಭಂಡಾರಿ ಸಮಾಜದ ಸಂಘಟನೆಗಳು ಇನ್ನೂ ಬಲಗೊಳ್ಳಬೇಕು. ಸಮಾಜದ ಯುವಕರು ಸಕ್ರಿಯವಾಗಿ ಸಂಘಟನೆಯಲ್ಲಿ ತೊಡಗಿಕೊಂಡು ಉನ್ನತ ಗುರಿಯೆಡೆಗೆ ಸಾಗಬೇಕು ಕಾರವಾರ ನಗರಸಭೆ ಅಧ್ಯಕ್ಷ ರವಿರಾಜ ಸಿ.ಅಂಕೋಲೆಕರ ಹೇಳಿದರು.
ಪಟ್ಟಣದ ನೆಲ್ಲಿಕೇರಿ ಮಹಾಸತಿ ಸಭಾಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಉತ್ತರ ಕನ್ನಡ ಜಿಲ್ಲಾ ಭಂಡಾರಿ ಸಮಾಜೋನ್ನತಿ ಸಂಘದ ತಾಲೂಕು ಘಟಕದ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಅರುಣ ಸಿ. ಮಣಕೀಕರ ಮಾತನಾಡಿದರು. ಗೋವಾದ ಎಇ ವಿನೋದ ಕೆ.ಭಂಡಾರಿ ಸಂಘಟನೆಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘದ ಗೌರವಾಧ್ಯಕ್ಷ ವಿ.ಎಂ. ಭಂಡಾರಿ, ಕಾರವಾರ ತಾಲೂಕಾಧ್ಯಕ್ಷ ಮೋಹನ್ ಕಿಂದಳಕರ, ಭಟ್ಕಳ ತಾಲೂಕಾಧ್ಯಕ್ಷ ಗಣೇಶ ಕೆ. ದೇಶಭಂಡಾರಿ, ಶಿರಸಿ ತಾಲೂಕಾಧ್ಯಕ್ಷ ನಾಗರಾಜ ನಾಯ್ಕ, ಕಾರವಾರ ಗ್ರಾಮೀಣ ಅಧ್ಯಕ್ಷ ಸುಧಾಕರ ಮಾಯೇಕರ, ಗೋವಾದ ಭಂಡಾರಿ ಸಮಾಜ ಸಂಘಟನೆ ಅಧ್ಯಕ್ಷ ಶರದ ಪಡವಳಕರ, ಕಾರವಾರ ಮಹಿಳಾ ವೇದಿಕೆ ಅಧ್ಯಕ್ಷೆ ಛಾಯಾ ಜಾವಕರ್, ಕುಮಟಾ ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ಸುಷ್ಮಾ ಗಾಂವಕರ, ಆಶಾ ಅಶೋಕ ಭಂಡಾರಿ ಉಪಸ್ಥಿತರಿದ್ದರು.
ಸಂಘಟನೆ ವತಿಯಿಂದ ಅರ್ಹ ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಿಸಲಾಯಿತು. ಅಂಕಿತ ಗಾಂವಕರ ಪ್ರಾರ್ಥಿಸಿದರು. ತಾಲೂಕು ಅಧ್ಯಕ್ಷ ಶ್ರೀಧರ ಆರ್. ಬಿರಕೋಡಿ ಸ್ವಾಗತಿಸಿದರು. ಗೌರೀಶ ಮಂಜುನಾಥ ಭಂಡಾರಿ ನಿರೂಪಿಸಿದರು. ಯಶಸ್ವಿ ಅರುಣ ಮಣಕಿಕರ ಹಾಗೂ ಹರ್ಷಿತಾ ಚಿದಾನಂದ ಭಂಡಾರಿ ಶಿಷ್ಯವೇತನ ಯಾದಿ ವಾಚಿಸಿದರು. ಕಾರ್ಯದರ್ಶಿ ಚಿದಾನಂದ ಭಂಡಾರಿ ವಂದಿಸಿದರು. ಜೈವಂತ ಭಂಡಾರಿ, ರಮೇಶ ಭಂಡಾರಿ, ಸುಲೋಚನಾ ಆರ್, ಅಕ್ಷಯ್ ಅರುಣ ಮಣಕಿಕರ ನಿರ್ವಹಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃಕ ಕಾರ್ಯಕ್ರಮ ಜರುಗಿದವು.