ವಿಜ್ಞಾನದಲ್ಲಿ ಆಸಕ್ತಿ ಮೂಡಿಸಿಕೊಳ್ಳಿ

Get interested in science
ವಿಜಯಪುರ ನಗರದ ಸೇಂಟ್​ ಜೋಸೆಫ್​ ಶಾಲೆಯಲ್ಲಿ ತಾಲೂಕು ಮಟ್ಟದ ವಿಜ್ಞಾನ ಚಟುವಟಿಕೆಗಳ ಸ್ಪರ್ಧೆಯನ್ನು ಗಣ್ಯರು, ವಿದ್ಯಾರ್ಥಿಗಳು ಉದ್ಘಾಟಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ, ಎಂ.ಎಂ. ಗುರಾಡಿ, ಶಾಜು ಜೋಸೆಫ್​, ಅನಲೀಸಾ ಬಾಸ್ಕೋ, ಅಬ್ದುಲ್​ ರೆಹಮಾನ್​ ದರ್ಗಾ ಇತರರಿದ್ದರು.
Published on

ವಿಜಯಪುರ: ವಿದ್ಯಾರ್ಥಿಗಳು ವೈಜ್ಞಾನಿಕ ತಳಹದಿಯ ಮೇಲೆ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಹೇಳಿದರು.

ನಗರದ ಜಿ.ಪಂ., ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಹಾಗೂ ಸಂತ ಜೋಸೆಫ್​ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ಶಾಲಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 2024&25ನೇ ಸಾಲಿನ ತಾಲೂಕು ಮಟ್ಟದ ವಿಜ್ಞಾನ ಚಟುವಟಿಕೆಗಳ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಬಾಲ್ಯದಿಂದಲೇ ಎಪಿಜೆ ಅಬ್ದುಲ್​ ಕಲಾಂ ಅವರ ಹಾಗೆ ವಿಜ್ಞಾನ ವಿಷಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಪೂರ್ಣ ಪ್ರಯತ್ನ ಮಾಡಿದಾಗ ಭವಿಷ್ಯದಲ್ಲಿ ಶ್ರೇಷ್ಠ ವಿಜ್ಞಾನಿಯಾಗಿ ಹೊರಹೊಮ್ಮಲು ಸಾಧ್ಯ. ವಿಜ್ಞಾನ ಚಟುವಟಿಕೆಗಳ ಸ್ಪರ್ಧೆ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿಯನ್ನು ವೃದ್ಧಿಸುತ್ತದೆ. ಇದಕ್ಕೆ ಪೂರಕವಾಗಿ ಶಿಕ್ಷಕರು ಪ್ರೋತ್ಸಾಹಿಸಿ ಮಾರ್ಗದರ್ಶನ ಮಾಡಬೇಕು ಎಂದು ಸಲಹೆ ನೀಡಿದರು.

ತಾಲೂಕು ವಿಜ್ಞಾನ ನೋಡಲ್​ ಅಧಿಕಾರಿ ಎಂ.ಎಂ. ಗುರಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿಜ್ಞಾನ ಚಟುವಟಿಕೆ ಸ್ಪರ್ಧೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ಪಡೆಯುತ್ತಿರುವುದು ಶ್ಲಾನಾರ್ಹ ಎಂದರು.

ಸಂಸ್ಥೆ ಚೇರ್ಮನ್​ ಶಾಜು ಜೋಸೆಫ್​, ಮುಖ್ಯಸ್ಥೆ ಅನಲೀಸಾ ಬಾಸ್ಕೋ, ಕ್ಷೇತ್ರ ಸಮನ್ವಯಾಧಿಕಾರಿ ಅಬ್ದುಲ್​ ರೆಹಮಾನ್​ ದರ್ಗಾ, ಡಯಟ್​ ಉಪನ್ಯಾಸಕ ನಾರಾಯಣ ಬಾಬಾನಗರ, ಶಿಕ್ಷಣ ಸಂಯೋಜಕಿ ಪಿ.ಜಿ. ಹಿರೇಮಠ, ಸಂಪನ್ಮೂಲ ವ್ಯಕ್ತಿ ವೀರೇಶ ಮಾಶೆಟ್ಟಿ, ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್​.ಜೆ. ಬಿರಾದಾರ, ಶಿಕ್ಷಣ ಸಂಯೋಜಕರಾದ ಎಲ್​.ಎಸ್​. ಬಿರಾದಾರ, ರಾಜು ಮಸೂತಿ, ಎ.ಕೆ.ದಳವಾಯಿ, ಪ್ರಕಾಶ ನಾಲ್ವತವಾಡ, ವಿಜ್ಞಾನ ಶಿಕ್ಷಕ ರಾಜೇಶ ನುಚ್ಚಿ, ಭಾರತಿ ಕರಡಿ, ಶಾಹಿದ ಪಟೇಲ್​, ವಿಜಯಕುಮಾರ ಹಳ್ಳದಮನಿ, ಲೋಕೇಶ ಕಾಂಬಳೆ, ರವೀಂದ್ರ ಜಮಖಂಡಿ, ಶೈಲೇಂದ್ರ ಧರ್ಮಾಧಿಕಾರಿ, ಹಶ್ಮತ ಇನಾಮದಾರ, ಆನಂದ ಬಿರಾದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net