ವಿಮಾ ಸೌಲಭ್ಯ ಪಡೆದುಕೊಳ್ಳಿ

chek vitarane
ಮುಧೋಳದಲ್ಲಿ ಮೃತಪಟ್ಟ ಕರ್ನಾಟಕ ಬ್ಯಾಂಕ್ ಗ್ರಾಹಕ ಪತ್ನಿ ಸಾವಿತ್ರ ಲಮಾಣಿ ಅವರಿಗೆ 10 ಲಕ್ಷ ರೂ. ಚೆಕ್‌ನ್ನು ಬ್ಯಾಂಕ್ ಅಧಿಕಾರಿಗಳು ವಿತರಿಸಿದರು. ಕಾರ್ತಿಕ ಹೂಗಾರ, ಸಚಿನ್ ಮಾವಳಕರ್, ಲಕ್ಷ್ಮೀ ಕುರ್ತಕೋಟಿ, ಗಂಗಾಧರ ಗೊರಂಟ್ನಾ, ಪ್ರಸಾದ ಹಿರೇಮಠ ಇದ್ದರು.
Published on

ಮುಧೋಳ: ಗ್ರಾಹಕರು ಬ್ಯಾಂಕ್ ವಿಮಾ ಸೌಲಭ್ಯ ಪಡೆದುಕೊಳ್ಳಬೇಕೆಂದು ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಸುರೇಶ ಬಾಗರ್ ಹೇಳಿದರು.

ನಗರದ ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ಮಂಗಳವಾರ ವಿಮಾ ಸೌಲಭ್ಯ ಪಡೆದಿದ್ದ ಗ್ರಾಹಕ ಶಂಕರ ಲಮಾಣಿ ಅಪಘಾತದಲ್ಲಿ ಮೃತಪಟ್ಟ ಬಳಿಕ ಪತ್ನಿ ಸಾವಿತ್ರಿ ಲಮಾಣಿ ಅವರಿಗೆ 10 ಲಕ್ಷ ರೂ. ವಿಮಾ ಚೆಕ್ ನೀಡಿ ಅವರು ಮಾತನಾಡಿದರು.

ಕೆಬಿಎಲ್ ಸುರಕ್ಷ ಅಪಘಾತ ವಿಮಾ ಸೌಲಭ್ಯವನ್ನು 2022ರಲ್ಲಿ ಪಡೆದುಕೊಂಡಿದ್ದರು. ಸುರಕ್ಷತೆಯಿಂದಿರಲು ಅಪಘಾತ ವಿಮಾ ಸೌಲಭ್ಯ ಅವಶ್ಯವಿದೆ. ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ಒಂದಾದ ಕರ್ನಾಟಕ ಬ್ಯಾಂಕ್ ಆರ್ಥಿಕ ವಹಿವಾಟು, ಗ್ರಾಹಕರಿಗೆ ಸುಲಭವಾಗಿ ಸೌಲಭ್ಯ ವಿಸ್ತರಿಸಲು ಬದ್ಧವಾಗಿದೆ ಎಂದರು.

ಅಧಿಕಾರಿ ಕಾರ್ತಿಕ ಹೂಗಾರ, ಸಚಿನ್ ಮಾವಳಕರ್, ಲಕ್ಷ್ಮೀ ಕುರ್ತುಕೋಟಿ, ಗಂಗಾಧರ ಗೊರಂಟ್ನಾ, ಪ್ರಸಾದ ಹಿರೇಮಠ, ಶಿವಾನಂದ ಗೋಕಾವಿ, ಶ್ರೀಶೈಲ ಕಾಂಬಳೆ, ರಮೇಶ ಜಿ. ಮತ್ತಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net