ಬಂಗಾರಪೇಟೆ: ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿವಿಧ ಇಲಾಖೆಗಳಿಂದ ಜಾರಿಗೊಳಿಸಿರುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ರೈತರು ಅಭಿವೃದ್ಧಿ ಕಾಣಬೇಕು ಎಂದು ಬಂಗಾರಪೇಟೆ ಕೃಷಿ ರೈತ ಉತ್ಪಾದಕ ಕಂಪನಿಯ ಸಿಇಒ ರಾಜೇಶ್ವರಿ ಹೇಳಿದರು.
ನಗರದ ಎಪಿಎಂಸಿ ಯಾರ್ಡ್ನಲ್ಲಿ ಬಂಗಾರಪೇಟೆ ರೈತ ಉತ್ಪಾದಕ ಕಂಪನಿ ಹಾಗೂ ಸೆಹಗಲ್ ಫೌಂಡೇಷನ್ನಿಂದ ಹಮ್ಮಿಕೊಂಡಿದ್ದ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿ, ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಪಶುವೈದ್ಯಕಿಯ ಇಲಾಖೆಯಿಂದ ಹಲವು ಯೋಜನೆಗಳು ಇದ್ದು, ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.
ಸೆಹಗಲ್ ಫೌಂಡೇಷನ್ ಕೂಡ ಈಗಾಗಲೇ ರೈತರಿಗಾಗಿ ಹಲವು ಯೋಜನೆ ಜಾರಿಗೆ ತಂದಿದೆ. ಅರ್ಹರು ಸೌಲಭ್ಯ ಪಡೆಯಬೇಕು ಎಂದು ಹೇಳಿದರು.
ಬಂಗಾರಪೇಟೆ ರೈತ ಉತ್ಪಾದಕ ಕಂಪನಿ ಅಧ್ಯಕ್ಷೆ ಮಂಜುಳಮ್ಮ, ಎಪಿಎಂಸಿ ಇಲಾಖೆಯ ಅಯ್ಯಪ್ಪ, ಜಗನ್ನಾಥ್, ಸೆಹಗಲ್ ಫೌಂಡೇಷನ್ ನವ್ಯಾ, ಗೋಪಾಲಪ್ಪ, ಆರ್.ಮಂಜುಳಾ ಹಾಗೂ ಇತರರು ಇದ್ದರು.