

ಕೆ.ಆರ್.ಪೇಟೆ: ಪ್ರಸ್ತುತ ಆಧುನೀಕರಣದ ಪ್ರಭಾವದಿಂದ ಗ್ರಾಮೀಣ ಬದುಕಿನಲ್ಲಿ ಹಲವು ಮಾರ್ಪಾಡಾಗುತ್ತಿದ್ದು, ಯುವಜನತೆ ಗ್ರಾಮೀಣ ಬದುಕಿನೊಂದಿಗೆ ಹೆಚ್ಚಿನ ಒಡನಾಟ ಬೆಳೆಸಿಕೊಳ್ಳಬೇಕು ಎಂದು ಶಾಸಕ ಎಚ್.ಟಿ.ಮಂಜು ಸಲಹೆ ನೀಡಿದರು.
ತಾಲೂಕಿನ ಬೂಕನಕೆರೆ ಹೋಬಳಿ ಅರಳಕುಪ್ಪೆ ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವತಿಯಿಂದ ಆಯೋಜಿಸಿದ್ದ ಸಮಾಜ ಕಾರ್ಯ ಗ್ರಾಮೀಣ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಜನರು ಆಧುನಿಕತೆಗೆ ಒಳಗಾಗಿ ತಮ್ಮ ನೈಜ ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ. ನಮ್ಮ ನಾಡು, ನುಡಿ, ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಗ್ರಾಮೀಣ ಪ್ರದೇಶದ ಬದುಕು ಸುಂದರವಾಗಿದ್ದು, ಗ್ರಾಮೀಣ ಜೀವನ ಶೈಲಿ ಅತ್ಯಂತ ಮಹತ್ವ ಪಡೆದುಕೊಂಡಿದೆ. ಇಂದಿನ ಗ್ರಾಮೀಣ ಯುವಕರು ಕೃಷಿಯನ್ನು ಬಿಟ್ಟು ನಗರ ಪ್ರದೇಶಕ್ಕೆ ವಲಸೆ ಹೋಗುತ್ತಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಮತ್ತೆ ಹಳ್ಳಿಗಳತ್ತ ಮುಖ ಮಾಡಲಿದ್ದು, ಕೃಷಿಯನ್ನೇ ಮುಖ್ಯಕಸುಬನ್ನಾಗಿ ಮಾಡಿಕೊಳ್ಳಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಎ.ಎನ್. ಭಾಗ್ಯಜ್ಯೋತಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರತಾಪ್, ಕೃಷ್ಣಾಜಿರಾವ್ ಮತ್ತಿತರರಿದ್ದರು. ಶಿಬಿರಾಧಿಕಾರಿಗಳಾದ ಎಸ್.ಎನ್. ಅನಿತಾ, ಜೆ.ಆರ್.ನಾಗರಾಜ್, ಮಂಜುನಾಥ, ಸಿ.ಬಿ. ಹರೀಶ್ ಕುಮಾರ್, ಎನ್.ಬಿ. ಪುನೀತ್ ಕುಮಾರ್ ಇತರರಿದ್ದರು.
24ಞಡಿಠಿ-01: ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿ ಅರಳಕುಪ್ಪೆ ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವತಿಯಿಂದ ಆಯೋಜಿಸಿದ್ದ ಸಮಾಜ ಕಾರ್ಯ ಗ್ರಾಮೀಣ ಅಧ್ಯಯನ ಶಿಬಿರವನ್ನು ಶಾಸಕ ಎಚ್.ಟಿ.ಮಂಜು ಉದ್ಘಾಟಿಸಿದರು. ಎ.ಎನ್.ಭಾಗ್ಯಜ್ಯೋತಿ, ಪ್ರತಾಪ್, ಕೃಷ್ಣಾಜಿರಾವ್ ಮತ್ತಿತರರಿದ್ದರು.