ಉನ್ನತ ಶಿಕ್ಷಣ ಪಡೆದು ಸಮಾಜಕ್ಕೆ ಮಾದರಿಯಾಗಿ: ನಾಗಶ್ರೀ ಸಲಹೆ

Mahila dina
????????????????????????????????????
Published on

ಚಿಕ್ಕಮಗಳೂರು: ಮಹಿಳೆಯರು ಉನ್ನತ ಶಿಕ್ಷಣ ಪಡೆದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಸಮಾಜಕ್ಕೆ ಮಾದರಿಯಾಗಿ ಬದುಕಬೇಕು ಎಂದು ಡಿಎಸಿಜಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್ ಹೇಳಿದರು. ಜಿಲ್ಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಮಂಗಳವಾರ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಸಂಸ್ಕಾರದಿಂದ ರಾಷ್ಟ್ರಕ್ಕೆ ಮಾದರಿ:
ನಮ್ಮ ದೇಶದಲ್ಲಿ ಮಹಿಳೆಯರಿಗೆ ನೀಡಿರುವಷ್ಟು ಸ್ಥಾನಮಾನ ಬೇರೆ ಯಾವ ದೇಶದಲ್ಲೂ ನೀಡಿಲ್ಲ. ನಮ್ಮ ದೇಶದಲ್ಲಿ ಮಹಿಳೆಯರು ಅತ್ಯುನ್ನತ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಮನೆ ಜವಾಬ್ದಾರಿ ಜತೆಗೆ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲೂ ಪ್ರಮುಖ ಪಾತ್ರ ವಹಿಸಿ ಸಂಸ್ಕøತಿ ಮತ್ತು ಸಂಸ್ಕಾರದಿಂದ ರಾಷ್ಟ್ರಕ್ಕೆ ಮಾದರಿಯಾಗಿದ್ದಾರೆ ಎಂದರು.

ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಸವಿತಾ ರಮೇಶ್ ಮಾತನಾಡಿ, ಕುಟುಂಬದಲ್ಲಿ ತಾಯ್ತನದೊಂದಿಗೆ ಮಕ್ಕಳ ಲಾಲನೆ-ಪಾಲನೆ, ಹಿರಿಯರ ಪೋಷಣೆಯೊಂದಿಗೆ ಎಲ್ಲವನ್ನೂ ಹೆಣ್ಣು ಸಮರ್ಥವಾಗಿ ನಿಭಾಯಿಸುತ್ತಾಳೆ. ಪುರುಷರಂತೆ ವಿವಿಧ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆ ತೋರುತ್ತಿದ್ದು ಅದಕ್ಕೆ ಕುಟುಂಬದ ಪ್ರೋತ್ಸಾಹವೂ ಕಾರಣ. ಮಹಿಳೆಯರು ತಮ್ಮ ಆಲೋಚನೆ, ಚಿಂತನೆ, ಸಂಸ್ಕøತಿ ಮೂಲಕ ಪೀಳಿಗೆಗೆ ಆದರ್ಶವಾಗಬೇಕು ಎಂದು ಸಲಹೆ ನೀಡಿದರು.

ಸಾಂಸ್ಕøತಿಕ ಚಟುವಟಿಕೆಗೆ ಕರೊನಾ ಗರ:
ಪ್ರತಿವರ್ಷ ಸಂಘದಿಂದ ಮಹಿಳಾ ದಿನವನ್ನು ಅದ್ದೂರಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಕಳೆದ ಬಾರಿ ಕರೊನಾದಿಂದ ಯಾವುದೇ ಸಾಂಸ್ಕøತಿಕ, ಕ್ರೀಡಾ ಚಟುವಟಿಕೆ ಹಮ್ಮಿಕೊಳ್ಳಲು ಸಾಧ್ಯವಾಗಿರಲಿಲ್ಲ ಎಂದರು. ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಉಪಾಧ್ಯಕ್ಷೆ ಸ್ಮಿತಾ ಸುರೇಶ್, ಕಾರ್ಯದರ್ಶಿ ಎಂ.ಎಲ್.ಜಾಹ್ನವಿ ಜಯರಾಮ್, ಖಜಾಂಚಿ ಶಿಲ್ಪಾ ವಿಜಯ್, ನಿರ್ದೇಶಕರಾದ ಮಂಜುಳಾ ಮಂಜುನಾಥ್, ವೇದಶ್ರೀ ಸತೀಶ್, ಅನ್ವಿತಾ ಚರಣ್, ಕೃಷ್ಣವೇಣಿ ರಮೇಶ್, ಭಾಗ್ಯಾ ಮಹೇಂದ್ರ, ಚಂಪಾ ಸುದರ್ಶನ್, ಅಂಜನಾ ರವಿ, ಎಂ.ಆರ್.ಶಾಲಿನಿ ಸುಬ್ರಹ್ಮಣ್ಯ, ಸುಭದ್ರಾ ನಾರಾಯಣ್, ನಾಗರತ್ನ ಜಗದೀಶ್, ಸಂಧ್ಯಾ ನಾಗೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net