ದೀಪಾವಳಿಯಿಂದ ಉತ್ಸಾಹ ನೂರ್ಮಡಿ

h10-jss
Published on

ಹುಬ್ಬಳ್ಳಿ: ನಗರದ ಉಣಕಲ್ ಬಳಿಯ ಜೆಎಸ್​ಎಸ್ ಶ್ರೀ ಮಂಜುನಾಥೇಶ್ವರ ಕೇಂದ್ರೀಯ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಶಾಲೆ ಮಕ್ಕಳು ಶುಕ್ರವಾರ ಉತ್ಸಾಹದಿಂದ ದೀಪಾವಳಿ ಹಬ್ಬವನ್ನು ಆಚರಿಸಿದರು.

ಪ್ರಾಚಾರ್ಯು ರಜನಿ ಪಾಟೀಲ ಮಾತನಾಡಿ, ದೀಪಾವಳಿಯು ಬೆಳಕಿನ ಹಬ್ಬ. ವರ್ಷವಿಡೀ ನಾವೆಲ್ಲ ಉತ್ಸಾಹದಿಂದ ಇರಬೇಕೆಂಬ ಉತ್ಸಾಹ ಮತ್ತು ಸಂಪ್ರದಾಯವನ್ನು ಈ ಹಬ್ಬ ಹೊಂದಿದೆ. ನಮ್ಮ ದೇಶದ ಸಂಸ್ಕೃತಿಯೂ ಹೌದು ಎಂದರು.

ಸಹ ಸಂಯೋಜಕಿ ಯಶಸ್ವಿನಿ ನಾಯಕ್, ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕಿಯರಾದ ಅನುರಾಧ ಬೆಂಗೇರಿ, ಮೇಘ ಚಿಕ್ಕ ಮಠ, ಶುಭಂ ಗಿಣಿ, ಅಶ್ವಿನಿ ಉಳ್ಳಿಕಾಶಿ, ಭಕ್ತಿ ಪಾಟೀಲ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net