ಭಾಗ್ಯಲಕ್ಷ್ಮೀ ಯೋಜನೆ: ಅ.30ರೊಳಗೆ ಪರಿಪಕ್ವ ಮೊತ್ತ ಪಡೆಯಿರಿ

Bhagyalakshmi bond
Published on

ಮದ್ದೂರು: ಭಾಗ್ಯಲಕ್ಷ್ಮೀ ಯೋಜನೆಯಡಿ 2006-07ನೇ ಸಾಲಿನಲ್ಲಿ ನೋಂದಣಿಯಾದ ಫಲಾನುಭವಿಗಳಿಗೆ ಪರಿಪಕ್ವ ಮೊತ್ತ ಪಾವತಿಸುವ ಪ್ರಕ್ರಿಯೆಗೆ ಅ.31ರವರೆಗೆ ಕಾಲಾವಕಾಶ ನಿಗದಿಪಡಿಸಲಾಗಿದೆ.

2006-07ನೇ ಸಾಲಿನಲ್ಲಿ ನೋಂದಣಿಯಾದ ಫಲಾನುಭವಿಗಳು ಪರಿಪಕ್ವ ಮೊತ್ತ ಪಡೆಯಲು ಅಗತ್ಯವಿರುವ ಎಲ್ಲ ದಾಖಲಾತಿಯನ್ನು ನಿಗದಿತ ಅವಧಿಯೊಳಗೆ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿಗೆ ಸಲ್ಲಿಸಬಹುದು. ನಂತರ ಬರುವ ಮನವಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net