ಲಂಚ ನೀಡದೆ ಸೌಲಭ್ಯ ಪಡೆಯಿರಿ

6 MBL 4
Published on

ಮುಳಬಾಗಿಲು: ಡಾ.ಬಿ.ಆರ್​.ಅಂಬೇಡ್ಕರ್​ ಅಭಿವೃದ್ಧಿ ನಿಗಮ ಹಾಗೂ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಂದ ತಾಲೂಕಿನ ಎಸ್ಸಿ&ಎಸ್ಟಿ ಮತ್ತು ಹಿಂದುಳಿದ ವರ್ಗ ರೈತರಿಗೆ ಗಂಗಾ ಕಲ್ಯಾಣ ಯೋಜನೆಯಲ್ಲಿ ಉಚಿತವಾಗಿ ಕೊಳವೆ ಬಾವಿ ಕೊರೆಸಿ ವಿದ್ಯುತ್​ ಸಂಪರ್ಕ ಹಾಗೂ ಪಂಪ್​ ಮೋಟರ್​ ಸ್ಟಾರ್ಟರ್​ಗಳನ್ನು ಎರಡು ನಿಗಮಗಳ ಇಲಾಖೆಗಳಿಂದ ವಿತರಿಸಲಾಗುತ್ತಿದೆ ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ್​ ತಿಳಿಸಿದರು.

ನಗರದ ಅಮರ ಜ್ಯೋತಿ ವಿದ್ಯಾಸಂಸ್ಥೆ ಮುಂಭಾಗದ ಮೈದಾನದಲ್ಲಿ ಬುಧವಾರ ಡಾ.ಬಿ.ಆರ್​. ಅಂಬೇಡ್ಕರ್​ ಅಭಿವೃದ್ಧಿ ನಿಗಮದಿಂದ ತಾಲೂಕಿನ 43 ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಲ್ಲಿ ವಿದ್ಯುತ್​ ಪಂಪ್​ ಮೋಟರ್​ ಸ್ಟಾರ್ಟರ್​, ಕೇಬಲ್​ ಮತ್ತಿತರ ಸಲಕರಣೆಗಳನ್ನು ವಿತರಿಸಿ ಮಾತನಾಡಿದರು.

ತಾಲೂಕಿನ ಯಾವುದೇ ಈ ಯೋಜನೆಯ ಫಲಾನುಭವಿಗಳು ಮಧ್ಯವರ್ತಿಗಳಿಗಾಗಲಿ, ಅಧಿಕಾರಿಗಳು ಮತ್ತು ಸಿಬ್ಬಂದಿಗಾಗಲಿ ಲಂಚ ನೀಡಿದ ಸೌಲಭ್ಯ ಪಡೆಯಬೇಕು ಎಂದರು.

ಗುರುತಿಸಿದ 45 ರೈತರ ಹೊಲಗಳಲ್ಲಿ ಕೊರಿಸಿದ ಕೊಳವೆ ಭಾವಗಳ ಪೈಕಿ 2ರಲ್ಲಿ ನೀರು ಬಂದಿಲ್ಲ. ಉಳಿದ 43 ಕೊಳವೆ ಬಾವಿಗಳಲ್ಲಿ ನೀರು ಸಿಕ್ಕಿದ್ದು, ಉತ್ತಮ ಕೃಷಿ ಚಟುವಟಿಕೆ ಮೂಲಕ ಸಮಾಜಕ್ಕೆ ಅನ್ನದಾತರಾಗಬೇಕು. ವಿಷಮುಕ್ತ ಆಹಾರ ಬೆಳೆಯಲು ಮುಂದಾಗಬೇಕು, ಸಾವಯವ ನೈಸರ್ಗಿಕ ಕೃಷಿಗೆ ಆದ್ಯತೆ ನೀಡಬೇಕೆಂದು ಶಾಸಕರು ಸೂಚಿಸಿದರು.

ಕೇಂದ್ರದ ಅನುದಾನದಿಂದ ರಸ್ತೆ ಅಭಿವೃದ್ಧಿ

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದಿಂದ ರಾ. ಹೆ. 75ರ ತಾಲೂಕಿನ ಎನ್​. ವಡ್ಡಹಳ್ಳಿಯಿಂದ ಪುಂಗನೂರು ಮಾರ್ಗದ 3 ಕಿ.ಮೀ.ರಸ್ತೆ ಅಭಿವೃದ್ಧಿಗೆ 2.60 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಸಮೃದ್ಧಿ ವಿ. ಮಂಜುನಾಥ್​ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net