

ಗುಳೇದಗುಡ್ಡ: ರೀಕ್ಷೆ ಇನ್ನೂ ಎರಡ್ಮೂರು ತಿಂಗಳಿರುವಾಗಲೇ ವಿದ್ಯಾರ್ಥಿಗಳು ಪರೀಕ್ಷೆ ತಯಾರಿಯನ್ನು ಯೋಜನಾಬದ್ಧವಾಗಿ ನಡೆಸಬೇಕು. ಅಭ್ಯಾಸದಲ್ಲಿ ಶೇ. 100 ರಷ್ಟು ಪ್ರಯತ್ನ ಹಾಕಿದಾಗ ಯಾವುದೇ ಆತಂಕ, ಅಂಜಿಕೆ ಇಲ್ಲದೆ ಪರೀಕ್ಷೆ ಎದುರಿಸಬಹುದು ಎಂದು ಧಾರವಾಡದ ಖ್ಯಾತ ಮನೋವೈದ್ಯ ಡಾ. ಆನಂದ ಪಾಂಡುರಂಗಿ ಹೇಳಿದರು.
ಸ್ಥಳೀಯ ಭಂಡಾರಿ ಕಾಲೇಜಿನ ಸಭಾಭವನದಲ್ಲಿ ಸ್ಥಳೀಯ ಸರ್ಕಾರಿ ಪಪೂ ಕಾಲೇಜಿನ 1987ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಸ್ನೇಹ ಬಳಗ, ಹುಬ್ಬಳ್ಳಿಯ ಸಾರಥಿ ಫೌಂಡೇಷನ್ ಹಾಗೂ ಪಿ.ಇ. ಟ್ರಸ್ಟ್ ಸಹಯೋಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ, ಪಾಲಕರರೊಂದಿಗೆ ಪರೀಕ್ಷೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿಮ್ಮ ಓದಿನ ಬಗ್ಗೆ, ನಿಮ್ಮ ಕಲಿಕೆಯ ಬಗ್ಗೆ ನೀವು ವಿಶ್ವಾಸ ಹೊಂದಿರಬೇಕು. ಆತಂಕ, ಒತ್ತಡಕ್ಕೆ ಒಳಗಾಗದೆ ಹೊತ್ತಿಗೆ ಸರಿಯಾಗಿ ನಿರಾತಂಕವಾಗಿ ಓದಿ ಯಶಸ್ಸು ಗಳಿಸಬೇಕು ಎಂದರು.
ಧಾರವಾಡದ ಮನಶಾಸಜ್ಞೆ ಡಾ. ಅನುಪಮಾ ಪಾಂಡುರಂಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನುಷ್ಯ ದೈಹಿಕವಾಗಿ ದುರ್ಬಲರಾದಾಗ ಟಾನಿಕ್‌ನ ಅವಶ್ಯಕತೆ ಬೀಳುತ್ತದೆ. ಅದೇ ರೀತಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಮಾನಸಿಕ ಟಾನಿಕ್ ಬೇಕು. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಆಸಕ್ತಿ ಮತ್ತು ಏಕಾಗ್ರತೆಯಿಂದ ಓದಿದರೆ ಯಾವ ಪರೀಕ್ಷೆಗಳೂ ಸವಾಲಾಗುವುದಿಲ್ಲ ಎಂದರು.
ಸ್ಥಳೀಯ ಗುರುಸಿದ್ಧೇಶ್ವರ ಬೃಹನ್ಮಠದ ಬಸವರಾಜ ಶ್ರೀಗಳು ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪಿಇಟಿ ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ, ರಾಠಿ ಹಾಗೂ ಕಾವಡೆ ಶಾಲೆಯ ಚೇರ್ಮನ್ ಅಶೋಕ ಹೆಗಡಿ, ಸಾರಥಿ ೌಂಡೇಷನ್ ಅಧ್ಯಕ್ಷೆ ಎಲ್. ಪಿ. ಹೆಗಡಿ, ನ್ಯಾಯವಾದಿ ಕೆ. ಆರ್. ರಾಯಚೂರ, ಸಂಚಾಲಕ ಡಾ. ಪಿ. ಎಸ್. ಹೆಗಡಿ, ಮುರುಗೇಶ ಶೇಖಾ, ಶ್ರೀಕಾಂತ ಹುನಗುಂದ, ನೀಲಪ್ಪ ಗಾಣಿಗೇರ, ಮಲ್ಲು ತಾಂಡೂರ, ನಿಂಗಪ್ಪ ಅಲದಿ, ಗಂಗಾಧರ ಪತ್ತಾರ ಇತರರಿದ್ದರು.