ಶಿಕ್ಷಣ ಪಡೆದು ಪರಂಪರೆ ಬೆಳೆಸಿ

Get an education and build a legacy.
ಕೂಡಲಸಂಗಮದ ಶ್ರೀ ಸಿದ್ಧಗಂಗಾ ಪಬ್ಲಿಕ್ ಸ್ಕೂಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿಗಳ ಪಾದಪೂಜೆ ಮಾಡಿದರು.
Published on

ಹುನಗುಂದ: ಇಂದಿನ ಆಧುನಿಕ ಜಗತ್ತಿನಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ನಮ್ಮ ಪರಂಪರೆಯ ಬಗ್ಗೆ ತಿಳಿ ಹೇಳುವುದು ಬಹುಮುಖ್ಯ ಎಂದು ಎಸ್‌ಆರ್‌ಎನ್ ಫೌಂಡೇಶನ್ ಅಧ್ಯಕ್ಷ ಎಸ್. ಆರ್. ನವಲಿಹಿರೇಮಠ ಹೇಳಿದರು.

ಕೂಡಲಸಂಗಮದ ಸಿದ್ಧಗಂಗಾ ಪಬ್ಲಿಕ್ ಸ್ಕೂಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಪಾದಪೂಜೆ, ದೀಪ ಪ್ರದಾನ ಕಾರ್ಯಕ್ರಮ ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಮಕ್ಕಳಲ್ಲಿ ಪ್ರತಿಭೆಯ ಕೊರತೆ ಇರುವುದಿಲ್ಲ, ಅವರಿಗೆ ಸರಿಯಾದ ಮಾರ್ಗದರ್ಶನ ಅವಶ್ಯವಿದೆ ಎಂದರು.

ಶಿವಮೊಗ್ಗದ ಪೊದಾರ ಶಾಲೆಯ ಪ್ರಾಂಶುಪಾಲ ಸುಕೇಶ ಶೇರಿಗಾರ ಮಾತನಾಡಿ, ಭಾರತ ಆಧ್ಯಾತ್ಮಿಕತೆಯ ತವರೂರು. ಮಕ್ಕಳು ವಿದ್ಯಾರ್ಥಿ ಜೀವನದಿಂದಲೆ ಆಧ್ಯಾತ್ಮಿಕತೆ ಮೈಗೂಡಿಸಿಕೊಂಡರೆ ಎಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗುತ್ತಾರೆ ಎಂದರು.

ಶಾಲೆಯ ಪ್ರಾಂಶುಪಾಲ ರಾಘವೇಂದ್ರ ಕೆ.ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹತ್ತನೇ ತರಗತಿ ವಿದ್ಯಾರ್ಥಿಗಳಿಂದ ಶಾಲೆಗೆ ಕಾಣಿಕೆ ಸಮರ್ಪಿಸಲಾಯಿತು. ನಂತರ ಪಾಲಕರ ಪಾದಪೂಜೆ ಹಾಗೂ ಸಂಸ್ಥೆಯ ಆಡಳಿತ ಮಂಡಳಿಯಿಂದ ದೀಪ ಪ್ರದಾನ ನಡೆಯಿತು.

ಸಂಸ್ಥೆಯ ಕಾರ್ಯದರ್ಶಿ ರೇಖಾ ಎಸ್. ನವಲಿಹಿರೇಮಠ , ಚೇರಮನ್ ಸಿದ್ಧಲಿಂಗಸ್ವಾಮಿ ನವಲಿಹಿರೆಮಠ, ಆಡಳಿತಾಧಿಕಾರಿ ಎಸ್.ಬಿ. ಕೋಟಿ, ಮ್ಯಾನೇಜರ ಶಿವಕುಮಾರ ಹಿರೆಮಠ , ಶ್ವೇತಾ ಹಿರೆಮಠ, ವೆಂಕಟೇಶ ಲೆಕ್ಕಿಹಾಳ, ಶ್ರೀಶೈಲ ಕೇದಾರ, ಪ್ರಿಯಾಂಕ ಹೊಸಮನಿ, ವಿನಯ ಚಟ್ಟೇರ, ಸವಿತಾ ಸುಂಕದ ,ವಿಜಯಲಕ್ಷ್ಮೀ ಕೆ. ಮತ್ತಿತರರಿದ್ದರು. ಸಂಪದಾ ನಾಡಗೌಡರ ನಿರೂಪಿಸಿದರು. ಪ್ರೀತಮ ಗುಗ್ಗರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net