ಕಾರ್ಮಿಕ ಇಲಾಖೆಯ ಎಲ್ಲ ಸೌಲಭ್ಯ ಪಡೆಯಿರಿ

30 skp 02
ಗಬ್ಬೂರಿನಲ್ಲಿ ಏರ್ಪಡಿಸಿದ್ದ ಕಟ್ಟಡ ಕಾರ್ಮಿಕರ ಪ್ಲಂಬರ್ ಶ್ಯಂಡ್ ಎಲೆಕ್ಟçಈಶಿಯನ್ ಸಂಘದ ಕಾರ್ಯಕ್ರಮವನ್ನು ಬಿ.ಎಲ್.ರಾಜು ಉದ್ಘಾಟಿಸಿದರು. ಮಹಾದೇವ ಆಚಾರ್, ವೆಂಕಟೇಶ್, ರವಿ, ಲೋಕೇಶ್ ಇತರರಿದ್ದರು.
Published on

ಶಿಕಾರಿಪುರ: ಕಾರ್ಮಿಕರು ಸಂಘಟನಾತ್ಮಕ ಹೋರಾಟದಿಂದ ತಮ್ಮ ಹಕ್ಕನ್ನು ಪಡೆಯಲು ಸಾಧ್ಯ ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಲ್.ರಾಜು ಹೇಳಿದರು. ಪಟ್ಟಣದ ಗಬ್ಬೂರಿನಲ್ಲಿ ಆಂಜನೇಯ ಸ್ವಾಮಿ ಸಮುದಾಯ ಭವನದಲ್ಲಿ ಕಟ್ಟಡ ಕಾರ್ಮಿಕರ ಪ್ಲಂಬರ್ ಆ್ಯಂಡ್ ಎಲೆಕ್ಟಿçÃಶಿಯನ್ ಸಂಘ ಉದ್ಘಾಟಿಸಿ ಮಾತನಾಡಿ, ಸಂಘಟನೆ ಸ್ಥಾಪಿಸುವುದು ಮುಖ್ಯವಲ್ಲ ಬದಲಾಗಿ ಸಂಘದ ಮುಖ್ಯ ಉದ್ದೇಶ ಈಡೇರಲು ಎಲ್ಲರೂ ಒಗ್ಗೂಡಿ ಹೋರಾಡಿ ತಮ್ಮ ಹಕ್ಕು, ನ್ಯಾಯವನ್ನು ಪಡೆದುಕೊಳ್ಳಬೇಕು. ಕಾರ್ಮಿಕ ಇಲಾಖೆಯಡಿ ಬರುವ ಎಲ್ಲ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಸಂಘದ ಗೌರವಾಧ್ಯಕ್ಷ ಮಹಾದೇವ ಆಚಾರ್ ಮಾತನಾಡಿದರು. ಅಧ್ಯಕ್ಷತೆಯನ್ನು ವೆಂಕಟೇಶ್ ವಹಿಸಿದ್ದರು, ಗೌರವಾಧ್ಯಕ್ಷ ರವಿ, ಕಾರ್ಯದರ್ಶಿ ಲೋಕೇಶ್, ಮುನಿರತ್ನ, ನಜೀರ್ ಅಹ್ಮದ್, ಕಾಂತಪ್ಪ, ಗಿರೀಶ್, ಪ್ರವೀಣ್ ಮಾಳಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net