ಕಚೇರಿಯಲ್ಲಿ ಸಮಸ್ಯೆಗೆ ಪರಿಹಾರ ಪಡೆಯಿರಿ

24 bkl 2
Published on

ಭಟ್ಕಳ: ಕ್ಷೇತ್ರದ ಜನರ ಅಹವಾಲುಗಳನ್ನು ಸ್ವೀಕರಿಸಲು ಪಟ್ಟಣದಲ್ಲಿ ಕಚೇರಿ ತೆರೆಯಲಾಗಿದ್ದು, ಜನರು ತಮ್ಮ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಪಡೆಯಬಹುದು ಎಂದು ರಾಜ್ಯ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಹೇಳಿದರು.

ಇಲ್ಲಿನ ಅಂಜುಮನ್ ಕಾಲೇಜು ರಸ್ತೆಯಲ್ಲಿ ಭಾನುವಾರ ನೂತನ ಕಚೇರಿಯನ್ನು ಬಾಲಕಿಯರಾದ ಯಶಶ್ರೀ ಹಾಗೂ ರಶ್ಮಿತಾ ಆರ್. ಭಟ್ ಅವರಿಂದ ಉದ್ಘಾಟಿಸಿ ಅವರು ಮಾತನಾಡಿದರು.

4 ತಿಂಗಳ ಬಳಿಕ ಭಟ್ಕಳದಲ್ಲಿ ನೂತನ ಕಾರ್ಯಾಲಯ ತೆರೆಯಲಾಗಿದೆ. ಈವರೆಗೆ ಮನೆಯಲ್ಲೇ ಜನತೆಯ ಸಮಸ್ಯೆಗಳನ್ನು ಆಲಿಸುತತಿದ್ದೆ. ಇನ್ನು ಮುಂದಿನ ದಿನಗಳಲ್ಲಿ ಜಿಲ್ಲೆಯ ಜನರು ನನ್ನ ಕಚೇರಿಗೆ ಬಂದು ಅವರ ಕೆಲಸ ಮಾಡಿಕೊಂಡು ಹೋಗಲು ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಹೊನ್ನಾವರ ಮತ್ತು ಬೆಂಗಳೂರಿನಲ್ಲಿ ಕಚೇರಿ ತೆರೆಯಲಾಗಿದ್ದು, ಕಾರವಾರದಲ್ಲಿ ಕಚೇರಿ ಕೆಲಸ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಕಚೇರಿ ತೆರೆಯಲಾಗುವುದು. ಜನತೆಗೆ ಅನುಕೂಲವಾಗುವಂತೆ ಆಯಾ ಸ್ಥಳದಲ್ಲಿ ಕಚೇರಿ ತೆರೆಯಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕಚೇರಿ ತೆರೆದಿರುತ್ತದೆ ಎಂದರು. ಪುಷ್ಪಲತಾ ವೈದ್ಯ, ಬೀನಾ ವೈದ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net