

ತುಬಚಿ: ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಗಾಗಿ ಉತ್ತಮ ಶಿಕ್ಷಣ ಪಡೆಯಬೇಕು ಎಂದು ರೈತ ಮುಖಂಡ ಬಿ.ಎಸ್. ಸಿಂಧೂರ ಹೇಳಿದರು.
ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ದಳವಾಯಿ ವಸತಿ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 5ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಗುರಿಯೆಡೆಗೆ ಸಾಗಲು ಪಾಲಕರು ಸಹಕರಿಸಬೇಕು. ಈ ಶಾಲೆಯ ಅಭಿವೃದ್ಧಿಗೆ ನನ್ನ ಸಹಾಯ ಹಸ್ತ ಯಾವಾಗಲೂ ಇರುತ್ತದೆ ಎಂದರು.
ಸುರೇಶಗೌಡ ಪಾಟೀಲ ಮಾತನಾಡಿ, ಗ್ರಾಮೀಣ ಭಾಗದ ಶಾಲೆಗಳಲ್ಲಿ ಶಿಕ್ಷಣ ಪಡೆದ ಅನೇಕರು ಇಂದು ದೇಶದ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಗಳು ಮೊಬೈಲ್ ಹಾಗೂ ರಾಜಕೀಯ ವ್ಯಾಮೋಹಕ್ಕೆ ಒಳಗಾಗದೆ ಶಿಕ್ಷಕರು ತೋರಿದ ಮಾರ್ಗದಲ್ಲಿ ಹೆಚ್ಚಿನ ಅಂಕ ಪಡೆದು ಶಾಲೆಯ ಹಾಗೂ ಪಾಲಕರ ಕೀರ್ತಿ ಹೆಚ್ಚಿಸಬೇಕು ಎಂದರು.
ಎಸ್.ಎಂ. ಕುಂಬಾರ ಮಾತನಾಡಿ, ಶಿಕ್ಷಕರು ಮಕ್ಕಳ ಶೈಕ್ಷಣಿಕ ಪ್ರಗತಿಯ ಆಧಾರವಾಗಿಟ್ಟುಕೊಂಡು ವಿದ್ಯಾಭ್ಯಾಸದಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ತರಗತಿ ತೆಗೆದುಕೊಳ್ಳಬೇಕು ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ದಳವಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪಂಚಾಕ್ಷರಿ ಮಠದ, ಶಿವಣಪ್ಪ ದಳವಾಯಿ, ಶ್ರೀಶೈಲ ಮಠದ, ಬಸಪ್ಪ ದಳವಾಯಿ, ಮಲ್ಲಪ್ಪ ಬಾಲಪ್ಪನವರ, ಶಿವಲಿಂಗಪ್ಪ ಕುಂಬಾರ, ಶಿವಲಿಂಗಪ್ಪ ಕಿತ್ತೂರ, ಮುತ್ತಪ್ಪ ಕುಂಬಾರ, ಬಸವರಾಜ ಪಾಟೀಲ, ಡಾ.ಸದಾಶಿವ ಬಾಲಪ್ಪನವರ, ಹನುಮಂತ ಕುಂಬಾರ, ನಿಂಗಪ್ಪ ಬೋರಾಳ, ಅಣ್ಣಪ್ಪ ಕರಬಸನವರ, ಮಲ್ಲಪ್ಪ ಬೋರಾಳ, ಸದಾಶಿವ ಕರಬಸನವರ, ಅಪ್ಪಸಾಬ ಕುರಿ, ಪರಶುರಾಮ ಸಿಂಗೆ, ದರೆಪ್ಪ ಕುಂಬಾರ ಮತ್ತಿತರರಿದ್ದರು. ಮುಖ್ಯ ಶಿಕ್ಷಕ ಮಹಾಂತೇಶ ಘಟಗಿ ಸ್ವಾಗತಿಸಿದರು, ಎಂ.ಎಚ್. ಮುಲ್ಲಾ ನಿರೂಪಿಸಿದರು ಹಾಗೂ ಮಹಾಂತೇಶ ಹಾಲಳ್ಳಿ ವಂದಿಸಿದರು.