

ಹಗರಿಬೊಮ್ಮನಹಳ್ಳಿ: ಪಟ್ಟಣದ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಕಚೇರಿಯಲ್ಲಿ ರೈತನಿಂದ ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿಯೊಬ್ಬರು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಬಲೆಗೆ ಬಿದ್ದಿರುವು ಘಟನೆ ಶುಕ್ರವಾರ ನಡೆದಿದೆ.
ಜೆಸ್ಕಾಂ ಸೆಕ್ಷನ್ ಅಧಿಕಾರಿ ಎಚ್.ಫಕ್ಕಿರಪ್ಪ ಬಂಧಿತನಾಗಿದ್ದು, ಲಂಚ ಪಡೆದಿದ್ದ ೪ ಸಾವಿರ ರೂ. ವಶಕ್ಕೆ ಪಡೆಯಲಾಗಿದೆ.
ತಾಲೂಕಿನ ಬಂಡಿಹಳ್ಳಿ ಗ್ರಾಮದ ಹೊಲದಲ್ಲಿ ವಿದ್ಯುತ್ ಪರಿವರ್ತಕ ಸುಟ್ಟಿದ್ದು, ಅದನ್ನು ಬದಲಾವಣೆ ಮಾಡುವಂತೆ ರೈತರು ಅರ್ಜಿ ಸಲ್ಲಿಸಿದ್ದರು. ಅದಕ್ಕೆ ೧೫ ಸಾವಿರ ರೂ. ಲಂಚಕ್ಕಾಗಿ ಬೇಡಿಕೆಯಿಟ್ಟಿದ್ದ ಫಕ್ಕೀರಪ್ಪ, ಮೊದಲ ಕಂತಿನಲ್ಲಿ ೨ ಸಾವಿರ ರೂ. ಪಡೆದುಕೊಂಡಿದ್ದ. ಈ ಕುರಿತು ರೈತರಿಂದ ದಾಖಲಾದ ದೂರು ಆಧರಿಸಿ, ಶುಕ್ರವಾರ ೪ ಸಾವಿರ ರೂ. ತೆಗೆದುಕೊಳ್ಳುತ್ತಿದ್ದಾಗ ಲೊಕಾಯುಕ್ತರು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಎಸ್ಪಿ ಪುರುಷೋತ್ತಮ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಐಯ್ಯನಗೌಡ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಸಿಪಿಐ ಸುರೇಶ್ ಬಾಬು ಪವಾರ್, ರಾಜೇಶ್ ಲಮಾಣಿ ಪಾಲ್ಗೊಂಡಿದ್ದರು.