ಸಿಬ್ಬಂದಿ ಮಾಡಿದ ಎಡವಟ್ಟಿನಿಂದ 18 ಸಾವಿರ ರೂ. ಕರೆಂಟ್ ಬಿಲ್; ಗ್ರಾಹಕ ನಿತ್ಯ ಅಲೆದಾಟ

CURRENT BILL
ಕುಷ್ಟಗಿಯ ಮೂರನೇ ವಾರ್ಡ್‌ನ ಗ್ರಾಹಕ ರಾಚಪ್ಪ ಹಳ್ಳೂರು ವ್ಯತ್ಯಾಸವಾಗಿರುವ ಬಿಲ್ ತೋರಿಸುತ್ತಿರುವುದು. ಕುಷ್ಟಗಿಯ ಮೂರನೇ ವಾರ್ಡ್‌ನ ಗ್ರಾಹಕ ರಾಚಪ್ಪ ಹಳ್ಳೂರು ಜೆಸ್ಕಾಂ ಅಧಿಕಾರಿಗಳಿಗೆ ಬರೆದ ಪತ್ರ.
Published on

ಕುಷ್ಟಗಿ: ಮೀಟರ್ ರೀಡರ್ ಎಡವಟ್ಟಿನಿಂದಾಗಿ ಗ್ರಾಹಕರೊಬ್ಬರು ನಿತ್ಯ ಜೆಸ್ಕಾಂ ಕಚೇರಿಗೆ ಅಲೆಯುವಂತಾಗಿದೆ. ಬಳಕೆಗಿಂತ ಹೆಚ್ಚು ಯೂನಿಟ್ ನಮೂದಿಸಿದ ಪರಿಣಾಮ ಬರೋಬ್ಬರಿ 18 ಸಾವಿರ ರೂ. ಬಿಲ್ ಬಂದಿದೆ. ಮೀಟರ್ ರೀಡರ್ ಮಾಡಿದ ತಪ್ಪಿಗೆ ಕಳೆದ ಎರಡು ವರ್ಷದಿಂದ ಕಚೇರಿಗೆ ಅಲೆಯುತ್ತಿರುವ ಗ್ರಾಹಕ ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷೃಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಪಟ್ಟಣದ 3ನೇ ವಾರ್ಡ್‌ನ ಬಾಡಿಗೆ ಮನೆಯೊಂದರಲ್ಲಿ ವಾಸವಿರುವ ರಾಚಪ್ಪ ಹಳ್ಳೂರು ಕಾಲಕಾಲಕ್ಕೆ ವಿದ್ಯುತ್ ಬಿಲ್ ಪಾವತಿಸುತ್ತ ಬಂದಿದ್ದಾರೆ. 2021ರ ಮಾರ್ಚ್ ತಿಂಗಳಲ್ಲಿ ನೀಡಿದ ಬಿಲ್‌ನಲ್ಲಿ ವ್ಯತ್ಯಾಸವಾಗಿದೆ. ವ್ಯತ್ಯಾಸವಾಗಿರುವ ಬಿಲ್ ಸರಿಪಡಿಸುವಂತೆ ಮೀಟರ್ ರೀಡರ್ ಗಮನಕ್ಕೆ ತಂದ ರಾಚಪ್ಪ, 2021ರ ಜುಲೈ ತಿಂಗಳಲ್ಲಿ ಜೆಸ್ಕಾಂ ಉಪ ವಿಭಾಗಕ್ಕೆ ಪತ್ರ ಬರೆದಿದ್ದಾರೆ.

ಅದಾದ ನಂತರ 2022ರ ಮೇ ತಿಂಗಳಲ್ಲಿಯೂ ಪತ್ರ ಬರೆದು ಸರಿಪಡಿಸುವಂತೆ ಒತ್ತಾಯಿಸಿದ್ದಾರೆ. ಜೆಸ್ಕಾಂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಕಾರಣ ಗ್ರಾಹಕ ರಾಚಪ್ಪ ಗೃಹಜ್ಯೋತಿ ಯೋಜನೆಯಿಂದ ವಂಚಿತರಾಗಿದ್ದಾರೆ.

ಬಿಲ್ ವ್ಯತ್ಯಾಸವಾದ ಬಗ್ಗೆ ಗ್ರಾಹಕ ರಾಚಪ್ಪ ಹಳ್ಳೂರು ದೂರು ನೀಡಿದ್ದಾರೆ. ಈ ಸಂಬಂಧ ವಿಭಾಗೀಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆಯೇ ಎಂಬುದನ್ನು ಪರಿಶೀಲಿಸಿ ಸರಿಪಡಿಸಲಾಗುವುದು.ದಾವಲಸಾಬ್ ನದಾಫ್, ಎಇಇ, ಜೆಸ್ಕಾಂ ಉಪವಿಭಾಗ ಕುಷ್ಟಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net