ಜರ್ಮನ್ ಆಸ್ಪತ್ರೆ ಆಡಳಿತಾಧಿಕಾರಿಗಳಿಗೆ ಮನವಿ

WhatsApp Image 2023-09-27 at 3.28.33 PM (1)
Published on

ಗದಗ ಗದಗ-ಬೆಟಗೇರಿ ನಗರದ ಅತ್ಯಂತ ಸುಪ್ರಸಿದ್ಧ ಜರ್ಮನ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡುತ್ತಿಲ್ಲವೆಂದು ಜರ್ಮನ್ ಆಸ್ಪತ್ರೆಯ ಆಡಳಿತಾಧಿಕಾರಿಗಳಿಗೆ ಜೈ ಭೀಮ್ ಸಂಘರ್ಷ ಸಮಿತಿ ಗದಗ ಜಿಲ್ಲಾ ಘಟಕದ ಅಧ್ಯಕ್ಷರಾದ ಗಣೇಶ ವಾಯ್. ಹುಬ್ಬಳ್ಳಿ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಗಣೇಶ ವಾಯ್. ಹುಬ್ಬಳ್ಳಿಯವರು ಗದಗ-ಬೆಟಗೇರಿ ನಗರದಲ್ಲಿ ಜರ್ಮನ್ ಆಸ್ಪತ್ರೆ ಗದಗ ಜಿಲ್ಲೆ ಸೇರಿದಂತೆ ಕೊಪ್ಪಳ ಜಿಲ್ಲೆ, ಬಳ್ಳಾರಿ ಜಿಲ್ಲೆಯ ರೋಗಿಗಳಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ನೀಡುತ್ತ ಬಂದಿರುವ ಆಸ್ಪತ್ರೆಯಾಗಿದೆ. ಕೆಲದಿನಗಳ ಹಿಂದೆ ರಾತ್ರಿಯ ಹೊತ್ತು ನಗರದ ನಿವಾಸಿಯೊಬ್ಬರನ್ನು ಅವರಿಗೆ ಅನಾರೋಗ್ಯದಿಂದ ತೊಂದರೆಯಾದಾಗ ಜರ್ಮನ್ ಆಸ್ಪತ್ರೆ ದಾಖಲಿಸಿದರೆ ಸರಿಯಾದ ಚಿಕಿತ್ಸೆ ನೀಡಲಿಲ್ಲ. ವೈದ್ಯರು ರೋಗಿಯನ್ನು ಸಂಜೆಯ ೬ ಗಂಟೆಗೆ ದಾಖಲಿಸಿದರೆ ರಾತ್ರಿ ೧೦ ಗಂಟೆಗೆ ಬಂದು ದಾಖಲೆ ಮಾಡಿದ ೬-೭ ಗಂಟೆಯ ನಂತರ ಬಂದು ಪರಿಶೀಲಿಸಿ ಚಿಕಿತ್ಸೆ ಪ್ರಾರಂಭಿಸಿದರು. ರೋಗಿಯು ತುರ್ತುಚಿಕಿತ್ಸೆಗೆ ದಾಖಲಿಸಿದರೆ ಯಾವುದೇ ವೈದ್ಯರು ರೋಗಿಯನ್ನು ನೋಡದೆ ಹಾಗೆ ಬಿಟ್ಟಿದ್ದರು. ಏನಾದರೂ ಪ್ರಾಣಾಪಾಯವಾಗಿದ್ದರೆ ಯಾರೂ ಜವಾಬ್ದಾರರು. ಇಂತಹ ಅವ್ಯವಸ್ಥೆಯನ್ನು ಖಂಡಿಸುತ್ತೇವೆ
ಆ ರೋಗಿಯನ್ನು ಈ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಸರಿಯಾದ ಸಮಯಕ್ಕೆ ವೈದ್ಯಕೀಯ ಚಿಕಿತ್ಸೆ ಮಾಡುತ್ತಿರಲಿಲ್ಲ. ರೋಗಿಗಳಿಗೆ ಸರಿಯಾದ ಆಸ್ಪತ್ರೆಯ ಸಿಬ್ಬಂದಿಗಳಿAದ ಉತ್ತಮ ಚಿಕಿತ್ಸೆ ನೀಡುತ್ತಿಲ್ಲ. ವೈದ್ಯರು ಸಿಬ್ಬಂದಿ ವರ್ಗದವರು ಹಾರಿಕೆಯ ಉತ್ತರ ಕೊಡುತ್ತಿದ್ದಾರೆ. ಕೆಲ ದಿನಗಳ ಸದರಿ ರೋಗಿಯನ್ನು ನಮ್ಮಲ್ಲಿ ಚಿಕಿತ್ಸೆಯಾಗುವುದಿಲ್ಲ. ಬೇರೆಡೆ ಕರೆದುಕೊಂಡು ಹೋಗಿ ಎಂದು ಹೇಳಿದರು. ಮೊದಲೇ ರೋಗಿಯು ಬಡ ಕುಟುಂಬದವರು ಅವರಿಗೆ ಒಮ್ಮೊಂದೊಮ್ಮಲೆ ಬೇರೆಡೆ ಕರೆದುಕೊಂಡು ಹೋಗಿ ಎಂದರೆ ಸದರಿ ಕುಟುಂಬದವರು ಆಘಾತಕ್ಕೊಳಗಾಗಿದ್ದರು. ಅವರಿಗೆ ನಾವು ಧೈರ್ಯ ತುಂಬಿ ಈಗ ಸದ್ಯ ಧಾರವಾಡದ ಎಸ್.ಡಿ.ಎಂ.ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದರಿ ರೋಗಿಗೆ ಏನಾದರೂ ಪ್ರಾಣಕ್ಕೆ ಅಪಾಯವಾದರೆ ಸದರ ಸಿ.ಎಸ್.ಐ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಕಾರಣ ಆಗುತ್ತೀರಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜೈ ಭೀಮ ಸಂಘರ್ಷ ಸಮಿತಿಯ ಉಪಾಧ್ಯಕ್ಷರಾದ ಮಂಜುನಾಥ ಎಫ್. ತೌಜಲ್, ಜೈ ಭೀಮ್ ಸಂಘರ್ಷ ಸಮಿತಿಯ ರೋಣ ತಾಲೂಕ ಅಧ್ಯಕ್ಷರಾದ ಬಸವರಾಜ ಬದಾಮಿ, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾದ ರಾಷ್ಟಿçÃನ್ ಜೋಸೆಪ್, ಜೈ ಭೀಮ್ ಸಂಘರ್ಷ ಸಮಿತಿ ಸಹ-ಕಾರ್ಯದರ್ಶಿ ಶಿವಣ್ಣ ಕಡಿವಾಲ, ಯುವ ಘಟಕ ಅಧ್ಯಕ್ಷ ಪ್ರೇಮಕುಮಾರ ಹುಬ್ಬಳ್ಳಿ, ಹೇಮಂತ ಹುಬ್ಬಳ್ಳಿ, ಮಡಿವಾಳ ಸಮಾಜದ ಮುಖಂಡರಾದ ಕೃಷ್ಣಪ್ಪ ಮಡಿವಾಳರ, ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೇ ಉತ್ತರ ಕರ್ನಾಟಕ ವಿಭಾಗ ಅಧ್ಯಕ್ಷರಾದ ಡಾ. ದಾದಾಪೀರ ಕಲೆಗಾರ, ಶ್ರೀಕಾಂತ ಹಲವಾಗಲಿ ಮುನ್ನಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net