ಜರ್ಮನ್ ಕಸದ ತೊಟ್ಟಿ ಹಗರಣ; ಒಂದಕ್ಕೆ 5.58 ಲಕ್ಷ ರೂಪಾಯಿ

German Dustbins 15 Feb 20
Published on

ನಗರದಲ್ಲಿ ಜರ್ಮನಿ ಕಂಪನಿಯೊಂದಿಗೆ ವೈಜ್ಞಾನಿಕ ಕಸದ ತೊಟ್ಟಿ ಅಳವಡಿಕೆಗೆ 55.27 ಕೋಟಿ ರೂ.ಗೆ ಪಾಲಿಕೆ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಯಾವುದೇ ವೈಜ್ಞಾನಿಕ ಸೌಲಭ್ಯವಿಲ್ಲದ ಕಬ್ಬಿಣದ ತೊಟ್ಟಿ ಅಳವಡಿಕೆ ಮಾಡಿರುವ ಕಂಪನಿ ಸ್ಥಳೀಯ ಅಧಿಕಾರಿಗಳೊಂದಿಗೆ ಸೇರಿ ಭಾರಿ ಹಗರಣ ಮಾಡಿರುವ ಅನುಮಾನ ವ್ಯಕ್ತವಾಗುತ್ತಿದೆ.

ಕಾಂಗ್ರೆಸ್ ಆಡಳಿತಾವಧಿಯಲ್ಲಿ ಕಸದ ನಿರ್ವಹಣೆ ಮಾಡುವ ಸಲುವಾಗಿ ವೈಜ್ಞಾನಿಕ ಕಸ ಸಂಗ್ರಹಣೆ ತೊಟ್ಟಿಗಳನ್ನು ಅಳವಡಿಕೆ ಮಾಡಲು ಟೆಂಡರ್ ಕರೆಯಲಾಗಿತ್ತು. ಆಗ ಜೊಂಟಾ ಇನ್ಪ್ರಾಟೆಕ್ ಪ್ರೖೆ.ಲಿ, ಮತ್ತು ಜರ್ಮನ್​ನ ಬಾಯರ್ ಗಂಬ್ಸ್ ಎಂಬ ಕಂಪನಿಗಗಳು ಗುತ್ತಿಗೆ ಪಡೆದುಕೊಂಡಿದ್ದವು. 1.5 ಮೀ. ಅಗಲ, 2.5 ಮೀಟರ್ ಎತ್ತರದ ಹಸಿ ಕಸ, ಒಣ ಕಸದ ಬಿನ್ ಅಳವಡಿಕೆ ಮತ್ತು ಸಂಗ್ರಹವಾಗುವ ಕಸವನ್ನು 5 ವರ್ಷದ ವಿಲೇವಾರಿ ಸೇರಿ ಒಂದು ತೊಟ್ಟಿಗೆ ಗೆ 5.58 ಲಕ್ಷ ರೂ. ದರ ಪಡೆದುಕೊಂಡಿವೆ.

ವೈಜ್ಞಾನಿಕ ನಿರ್ವಹಣೆಯಿಲ್ಲ: ಈ ಕಸ ಸಂಗ್ರಹಣೆ ತೊಟ್ಟಿಗಳ ಅಳವಡಿಕೆಯಲ್ಲಿ ವೈಜ್ಞಾನಿಕ ವಿಧಾನವಿಲ್ಲ. ತೊಟ್ಟಿಗಳನ್ನು ಭೂಮಿಯಲ್ಲಿ ಹುದುಗಿಸಲಾಗಿದ್ದು, ಮೇಲೆ ಕಸ ಕಾಣದಂತೆ ಮಾಡಲಾಗಿದೆ. ಕಬ್ಬಿಣದ ಡಬ್ಬ ಬಿಟ್ಟರೆ ಹೊಸತೇನೂ ಅಳವಡಿಕೆ ಮಾಡಲಾಗಿಲ್ಲ. ಜತೆಗೆ ಪಾದಚಾರಿ ಮಾರ್ಗಗಳ ಮೇಲೆ ಹಾಗೂ ಜನವಸತಿ ಪ್ರದೇಶದಲ್ಲಿ ಅಳವಡಿಕೆ ಮಾಡಲಾಗಿದೆ. ಕೆಲವು ಬಾರಿ ಕಸ ತುಂಬಿದರೂ ನಿರ್ವಹಣೆ ಮಾಡದ ಕಾರಣ ಕಸದ ಬ್ಲಾ್ಯಕ್ ಸ್ಪಾಟ್ ನಿರ್ವಣವಾಗುತ್ತಿದ್ದು, ಅವೈಜ್ಞಾನಿಕವಾಗಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸ್ಥಳ ಗುರುತಿಸದೆ ಅಳವಡಿಕೆ: ಕಸದ ತೊಟ್ಟಿ ಅಳವಡಿಕೆ ಮಾಡುವ ಯೋಜನೆಯಲ್ಲಿ ಎಲ್ಲೆಲ್ಲಿ ತೊಟ್ಟಿ ಅಳವಡಿಕೆ ಮಾಡಬೇಕು ಎಂಬುದನ್ನು ಗುರುತಿಸಲಾಗಿಲ್ಲ. ಇದರಿಂದ ಒಂದು ವಾರ್ಡ್​ನಲ್ಲಿ 10 ಕ್ಕೂ ಹೆಚ್ಚು ತೊಟ್ಟಿ ಅಳವಡಿಕೆ ಮಾಡಲಾಗಿದ್ದು, ಬಹುತೇಕ ವಾರ್ಡ್​ಗಳಲ್ಲಿ ಇದರ ಪರಿಚಯವೇ ಇಲ್ಲದಂತಾಗಿದೆ. ಕಸ್ತೂರಿ ನಗರದಲ್ಲಿ ಮತ್ತು

ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಹೆಚ್ಚಾಗಿ ಕಸದ ತೊಟ್ಟಿಗಳನ್ನು ಅಳವಡಿಸಲಾಗಿದೆ. ಆದರೆ ಬ್ಲಾ್ಯಕ್ ಸ್ಪಾಟ್ ಇರುವ ಸ್ಥಳದಲ್ಲಿ ನಿರ್ವಿುಸಿದ್ದರೆ ಅವುಗಳ ಸದುಪಯೋಗ ಆಗುತ್ತಿತ್ತು.

ಶಿವಾಜಿನಗರದಲ್ಲಿ ಸಿಗುವ ತೊಟ್ಟಿಗಳು: ನಗರದಲ್ಲಿ ಅಳವಡಿಕೆ ಮಾಡಲಾದ ತೊಟ್ಟಿಗಳು ಜರ್ಮನ್ ತಂತ್ರಜ್ಞಾನದ ಹೊಂದಿವೆ ಎಂದು ಹೇಳುತ್ತಿರುವುದು ಸುಳ್ಳು. ಅವುಗಳನ್ನು ಸ್ಥಳೀಯವಾಗಿ ಕಬ್ಬಿಣದ ಅಂಗಡಿಯಲ್ಲಿಯೂ ತಯಾರಿಸಲಾಗುತ್ತದೆ. ಸ್ಥಳೀಯ ಕಂಪನಿಗಳು ಇಂತಹ ಕಸದ ತೊಟ್ಟಿಗಳನ್ನು ಕೇವಲ 1 ಲಕ್ಷ ರೂ.ಗೆ ನಿರ್ವಿುಸಿಕೊಡುತ್ತವೆ. ಆದರೆ, ಇದಕ್ಕೆ 5.5 ಲಕ್ಷ ರೂ. ಪಾವತಿಸುವ ಅಗತ್ಯವಿಲ್ಲ. ತೊಟ್ಟಿ ಅಳವಡಿಕೆಯಲ್ಲಿ ಸಂಪೂರ್ಣ ಯೋಜಿತ ಹಗರಣ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ವೈಜ್ಞಾನಿಕ ಕಸದ ತೊಟ್ಟಿಗಳ ಅಳವಡಿಕೆಯಲ್ಲಿ ಹಗರಣ ನಡೆದಿರುವ ಅನುಮಾನ ವ್ಯಕ್ತವಾಗಿದ್ದು, ತನಿಖೆ ಮಾಡುವಂತೆ ವಿಶೇಷ ಆಯುಕ್ತ ಡಿ. ರಂದೀಪ್ ಅವರಿಗೆ ಪತ್ರ ಬರೆಯಲಾಗಿದೆ. ತನಿಖೆಯಲ್ಲಿ ಹಗರಣ ನಡೆದಿರುವುದು ಸಾಬೀತಾದರೆ ಈಗಾಗಲೇ ಪಾವತಿಸಿರುವ ಹಣ ವಾಪಸ್ ಪಡೆದು ಅಕ್ರಮವೆಸಗಿದ ಕಂಪನಿಯನ್ನು ಕಪು್ಪ ಪಟ್ಟಿಗೆ ಸೇರಿಸಲು ಕ್ರಮ ವಹಿಸಲಾಗುವುದು. | ಗೌತಮ್​ ಕುಮಾರ್​

ಹಣ ಪಾವತಿ ತಡೆದ ಮೇಯರ್

ಜರ್ಮನಿಯ ಬಾಯರ್ ಗಂಬ್ಸ್ ಕಂಪನಿ ನೆದರ್​ಲ್ಯಾಂಡ್ ಸೇರಿ ವಿವಿಧ ದೇಶಗಳಲ್ಲಿ ಇದೇ ಮಾದರಿಯ ಬಿನ್ ಅಳವಡಿಕೆಗೆ 1 ಲಕ್ಷ ರೂ. ನಿಂದ 1.3 ಲಕ್ಷ ರೂ. ಪಡೆದುಕೊಂಡಿದೆ. ಆದರೆ ಬಿಬಿಎಂಪಿ ಟೆಂಡರ್​ನಲ್ಲಿ 5.58 ಲಕ್ಷ ರೂ. ಬಿಡ್ ಮಾಡಿದೆ.

ಈಗಾಗಲೇ ಕಸದ ತೊಟ್ಟಿ ಅಳವಡಿಸಿದ ಜೊಂಟಾ ಕಂಪನಿ 20 ರಿಂದ 30 ಕೋಟಿ ರೂ.ಗಳನ್ನು ಪಾಲಿಕೆಯಿಂದ ಪಡೆದುಕೊಂಡಿದೆ. ಈಚೆಗೆ ಅಧಿಕಾರಿಗಳು 81 ಲಕ್ಷ ರೂ. ಪಾವತಿಸಲು ಮುಂದಾದಾಗ ಅನುಮಾನ ಬಂದು ಹಣ ನೀಡುವುದನ್ನು ತಡೆದಿದ್ದೇನೆ ಎಂದು ಮೇಯರ್ ಗೌತಮ್​ ಕುಮಾರ್ ತಿಳಿಸಿದ್ದಾರೆ.

| ಸತೀಶ್ ಕೆ.ಬಳ್ಳಾರಿ ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net