ಜಸ್ಟೀಸ್​ ಸಂತೋಷ್​ ಹೆಗ್ಡೆಯವರಿಗೆ ಜಾರ್ಜ್​ ಫೆರ್ನಾಂಡಿಸ್​ ರಾಷ್ಟ್ರೀಯ ಪ್ರಶಸ್ತಿ

Justice Santosh Hegde
Published on

ಉಡುಪಿ: ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ವತಿಯಿಂದ ಮಾಜಿ ರಕ್ಷಣಾ ಸಚಿವ ಚಾರ್ಜ್ ಫೆರ್ನಾಂಡಿಸ್​ ಸಂಸ್ಮರಣಾರ್ಥ ರಾಷ್ಟ್ರೀಯ ಪ್ರಶಸ್ತಿಯನ್ನು ಸವೋರ್ಚ್ಛನ್ಯಾಯಾಲಯದ ನಿವೃತ್ತ ನ್ಯಾಯಾಧೀಶ, ಮಾಜಿ ಲೋಕಾಯುಕ್ತ ಜಸ್ಟೀಸ್​ ಎನ್​. ಸಂತೋಷ್​ ಹೆಗ್ಡೆ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ಸಮಿತಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

8ರಂದು ಪ್ರಶಸ್ತಿ ಪ್ರದಾನ

ಜೂನ್​ 8ರಂದು ಬೆಳಗ್ಗೆ 10 ಗಂಟೆಗೆ ಉಡುಪಿ ಕಲ್ಸಂಕದಲ್ಲಿರುವ ಹೊಟೇಲ್​ ಓಷಿಯನ್​ ಪರ್ಲ್​ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಕಾನೂನು ಸಚಿವ ಎಚ್​.ಕೆ. ಪಾಟೀಲ್​, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾ. ಬ್ರಜೇಶ್​ ಚೌಟ, ವಿಪ ಸದಸ್ಯರಾದ ಐವನ್​ ಡಿಸೋಜಾ, ಎಸ್​.ಎಲ್​.ಭೋಜೆ ಗೌಡ, ಶಾಸಕ ಯಶಪಾಲ ಸುವರ್ಣ, ಬಹುಭಾಷಾ ಚಲನಚಿತ್ರ ನಟರಾದ ಸುಮನ್​ ತಲ್ವಾರ್​ ಪೂಜಾರಿ, ಮಾಜಿ ಎಂಎಲ್​ಸಿ ಕ್ಯಾ. ಗಣೇಶ್​ ಕಾರ್ಣಿಕ್​ ಮೊದಲಾದವರು ಮುಖ್ಯ ಅತಿಥಿಗಳಾಗಿರುವರು. ಸಮಿತಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್​ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net