ಜಾರ್ಜ್ ಫೆರ್ನಾಂಡಿಸ್ ಸೈದ್ಧಾಂತಿಕ ಬದ್ಧತೆಯ ರಾಜಕಾರಣಿ -ಹಿರಿಯ ಪತ್ರಕರ್ತ ಆನಂದ ಶೆಟ್ಟಿ ಅಭಿಮತ

aaaaaaaaaa
Published on


ಮಂಗಳೂರು : ಜೀವನಪೂರ್ತಿ ದೇಶಕ್ಕಾಗಿ ದುಡಿದ ಜಾರ್ಜ್ ಫೆರ್ನಾಂಡಿಸ್ ಸೈದ್ಧಾಂತಿಕ ಬದ್ಧತೆಯ ರಾಜಕಾರಣಿಯಾಗಿದ್ದರು. ರಾಷ್ಟ್ರೀಯತೆಯ ಸಿದ್ಧಾಂತವನ್ನು ಮೈಗೂಡಿಸಿದ್ದ ಜಾರ್ಜ್ ಅವರ ಹೆಸರು ಜನಮಾನಸದಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ ಎಂದು ಹಿರಿಯ ಪತ್ರಕರ್ತ ಆನಂದ ಶೆಟ್ಟಿ ಹೇಳಿದರು.
ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ವತಿಯಿಂದ ಜಾರ್ಜ್ ಫೆರ್ನಾಂಡಿಸ್‌ರ ಅವರ 5ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಮಂಗಳಾ ಕ್ರೀಡಾಂಗಣದ ಬಳಿ ನಡೆದ ಕರ್ನಾಟಕ ಕರಾವಳಿ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ ಉದ್ಘಾಟಿಸಿ ಅವರು ಮಾತನಾಡಿದ ಅವರು ರೈಲ್ವೆ ಹಾಗೂ ರಕ್ಷಣಾ ಸಚಿವರಾಗಿ ಜಾರ್ಜ್ ತಮ್ಮ ಪ್ರಾಮಾಣಿಕ ಸೇವೆಯಿಂದ ರಾಜಕಾರಣದ ಗೌರವವನ್ನ
ನೈತಿಕವಾಗಿ ಮೇಲಕ್ಕೇರಿಸಿದರು ಎಂದರು.
ಸಿಎ ಗೌತಮ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾಯೋಜನಾ ಸಂಯೋಜನಾಧಿಕಾರಿ ಡಾ.ನಾಗರತ್ನ ಕೆ.ಎ., ಉದ್ಯಮಿ ಮ್ಯಾಕ್ಸಿಂ ಕ್ರಾಸ್ತಾ ಅಶೋಕನಗರ ಮುಖ್ಯ ಅತಿಥಿಗಳಾಗಿದ್ದರು. ಕಾಸಿಯಾ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎವರೆಸ್ಟ್ ಕ್ರಾಸ್ತಾ ಅವರು ಜ್ಞಾನದೀವಿಗೆ ಕಾರ್ಯಕ್ರಮ ಉದ್ಘಾಟಿಸಿದರು.
ಪ್ರಗತಿಪರ ಕೃಷಿಕ ಅರ್ಬಟ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು. ಸಾರ್ವಜನಿಕ ಗಣೇಶೋತ್ಸವ ಸಮಿತಿ ಸಂಘನಿಕೇತನ ಇದರ ಅಧ್ಯಕ್ಷ ಪ್ರವೀಣ್ ಕುಮಾರ್, ಜಿಲ್ಲಾ ಯುವಜನ ಸಬಲೀಕರಣ ಅಧಿಕಾರಿ ಪ್ರದೀಪ್ ಡಿಸೋಜಾ, ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷೆ ಲಿಲ್ಲಿ ಪಾಸ್ ಉಪಸ್ಥಿತರಿದ್ದರು. ವೇದಿಕೆಯ ಸ್ಥಾಪಕ ಫ್ರಾೃಂಕ್ಲಿನ್ ಮೊಂತೆರೊ ಸ್ವಾಗತಿಸಿದರು. ಪ್ರಿವಿ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net