ಆ.26 ಜಾರ್ಜ್ ಫರ್ನಾಂಡೀಸ್ ಜೀವನ ಚರಿತ್ರೆ ಬಿಡುಗಡೆ

IMG_20220823_104057
Published on

ಮಂಗಳೂರು : ಡಾ.ರಾಹುಲ್ ರಾಮಗುಂಡಂ ಅವರು ಬರೆದಿರುವ 'ದಿ ಲೈಫ್ ಆ್ಯಂಡ್ ಟೈಮ್ಸ್ ಆಫ್ ಜಾರ್ಜ್ ಫೆರ್ನಾಂಡಿಸ್' ಜೀವನ ಚರಿತ್ರೆ: ಆ. 26ರಂದು, ಮಧ್ಯಾಹ್ನ 3 ಗಂಟೆಗೆ ಮಂಗಳೂರಿನಲ್ಲಿ ಬಿಡುಗಡೆಯಾಗಲಿದೆ,


ಈ ಪುಸ್ತಕವನ್ನು ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ಅಡ್ಮಿನಿಸ್ಟೇಟಿವ್‌ ಬ್ಲಾಕ್‌ನ ಸಾನಿಧ್ಯ ಸಭಾಂಗಣದಲ್ಲಿ ಮಂಗಳೂರಿನ ಬಿಷಪ್‌ ಪೀಟರ್ ಪೌಲ್ ಸಲ್ದಾನ್ಹಾ ಬಿಡುಗಡೆಗೊಳಿಸಲಿದ್ದಾರೆ. ರಾಹುಲ್ ರಾಮಗುಂಡಂ ಪುಸ್ತಕದ ಲೇಖಕ, ಮೈಕೆಲ್ ಫೆರ್ನಾಂಡಿಸ್-ಟ್ರೇಡ್ ಯೂನಿಯನಿಸ್ಟ್ ಹಾಗೂ ದಿ. ಜಾರ್ಜ್ ಫೆರ್ನಾಂಡಿಸ್ ಅವರ ಸಹೋದರ, ಫಾ.ಮೆಲ್ವಿನ್ ಜೋಸೆಫ್ ಪಿಂಟೊ ಎಸ್.ಜೆ- ರೆಕ್ಟರ್ ಸೈಂಟ್ ಅಲೋಶಿಯಸ್ ಕಾಲೇಜು ಮಂಗಳೂರು, ಡಾ. ಪ್ರವೀಣ್ ಮಾರ್ಟಿಸ್ ಎಸ್‌.ಜೆ- ಪ್ರಾಂಶುಪಾಲ ಸೈಂಟ್ ಅಲೋಶಿಯಸ್‌ ಕಾಲೇಜು ಮುಂತಾದವರು ಭಾಗವಹಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net