ಬಾಲಕಾರ್ಮಿಕರ ಪತ್ತೆಗೆ ಜಿಯೋ ಟ್ಯಾಗ್

minister santhosh s. lad
ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್
Published on

ಶಿವಮೊಗ್ಗ: ಬಾಲಕಾರ್ಮಿಕರ ಪತ್ತೆ ಮತ್ತು ಕಡಿವಾಣ ಹಾಕುವುದು ಕೇವಲ ಕಾರ್ಮಿಕ ಇಲಾಖೆ ಜವಾಬ್ದಾರಿಯಲ್ಲ. ಅರಿವು ಮೂಡಿಸಲು ಇಲಾಖೆಗಳು, ಸಾರ್ವಜನಿಕರು ಕೈಜೋಡಿಸಬೇಕಾಗುತ್ತದೆ. ಬಾಲಕಾರ್ಮಿಕರ ಪತ್ತೆಗೆ ಜಿಯೋ ಟ್ಯಾಗ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಬೇರೆ ರಾಜ್ಯದಲ್ಲಿ ಕೆಲಸ ಮಾಡಿದರೂ ಪತ್ತೆಯಾಗುತ್ತಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಹೇಳಿದರು.

ಬೇರೆ ಬೇರೆ ರಾಜ್ಯಗಳಿಂದ ಬಂದು ಕರ್ನಾಟಕದಲ್ಲಿ ಕೆಲಸ ಮಾಡುವವರು ಹೆಚ್ಚಾಗುತ್ತಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಮಹಾರಾಷ್ಟ್ರ, ಶಿವಮೊಗ್ಗದಲ್ಲಿ ಬಿಹಾರ, ಉತ್ತರ ಪ್ರದೇಶ ಮತ್ತಿತರರ ರಾಜ್ಯಗಳಿಂದ ಬಂದು ಕೆಲಸ ಮಾಡುತ್ತಿದ್ದಾರೆ. ಅವರನ್ನು ಪತ್ತೆ ಮಾಡುವ ಕಾರ್ಯ ನಿರಂತರವಾಗಿದೆ ಎಂದರು.

ಬಾಲ ಕಾರ್ಮಿಕರು ಹೆಚ್ಚಾಗಲು ಆರ್ಥಿಕ ಕಾರಣವೂ ಒಂದಾಗಿದೆ. ಆದರೆ ಬಿಸಿಯೂಟ ಶುರುವಾದ ಬಳಿಕ ಆ ಪ್ರಮಾಣ ಕಡಿಮೆಯಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಬಾಲಕಾರ್ಮಿಕರ ಸಂಖ್ಯೆ ಕಡಿಮೆಯಾಗಿದೆ. ಆಶಾದೀಪ ಕಾರ್ಯಕ್ರಮ ಶುರು ಮಾಡಲಾಗಿದ್ದು ಸರ್ಕಾರದಿಂದ 7 ಸಾವಿರ ರೂ. ಕೊಡುತ್ತಿದ್ದೇವೆ. ಇದರಿಂದ ಗುಳೆ ಹೋಗುವುದು ಕಡಿಮೆ ಆಗುತ್ತಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net