ಅಸಲಿ ಚಿನ್ನ ತೋರಿಸಿ ನಕಲಿ ಕೊಟ್ಟು ವಂಚನೆ

gold-513062_640
Published on

ಹಾವೇರಿ: ಅಸಲಿ ಚಿನ್ನ ತೋರಿಸಿ ನಕಲಿ ಕೊಟ್ಟು ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ 1.5 ಲಕ್ಷ ರೂ. ವಂಚಿಸಿರುವ ಕುರಿತು ತಾಲೂಕಿನ ಗುತ್ತಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ತಾವರಗೇರೆ ನಿವಾಸಿ ವಿನೋದಕುಮಾರ ನಾಗರಾಜು (25) ಎಂಬುವರಿಗೆ ಮೋಸ ಮಾಡಿರುವುದು.

ಇವರು ರಾಜು ಎಂಬ ವ್ಯಕ್ತಿ ಫೋನ್​ ಮಾಡಿ ನನ್ನ ಬಳಿ ಸ್ವಲ್ಪ ಚಿನ್ನವಿದೆ. ಅದನ್ನು ಮಾರಾಟ ಮಾಡಿಕೊಡಿ ಎಂದು ಕೇಳಿಕೊಂಡಿದ್ದ. ಅದರಂತೆ ಅ. 1ರಂದು ಗುತ್ತಲದ ಬಸ್​ ನಿಲ್ದಾಣಕ್ಕೆ ಬಂದಾಗ ರಾಜು ಎಂಬುವನು 800 ಮೀಲಿ ಗ್ರಾಂ ಅಸಲಿ ಚಿನ್ನ ಕೊಟ್ಟು ಪರಿಶೀಲಿಸಿಕೊಂಡು ಬರಲು ತಿಳಿಸಿದ್ದ. ಅದನ್ನು ಪರೀಕ್ಷಿಸಿ ಅಸಲಿ ಎಂದು ತಿಳಿದ ಮೇಲೆ ಮತ್ತೇ ಅದೇ ಬಸ್​ ನಿಲ್ದಾಣಕ್ಕೆ ಬಂದು ರಾಜುಗೆ 1.5 ಲಕ್ಷ ರೂ. ಕೊಟ್ಟು ಆತನಿಂದ 65 ಗ್ರಾಂ ಚಿನ್ನ ಪಡೆದುಕೊಂಡಿದ್ದೇವು. ಆದರೆ, ಗುತ್ತಲ ಗ್ರಾಮ ಬಿಟ್ಟು ಎರಡ್ಮೂರು ಕಿ.ಮೀ. ಹೋಗಿ ನೋಡಿದಾಗ ಅದು ನಕಲಿ ಎಂಬುದು ಗೊತ್ತಾಗಿದೆ. ವಾಪಸ್​ ರಾಜುಗೆ ಫೋನ್​ ಮಾಡಿದರೆ ಸ್ವಿಚ್​ ಆಫ್​ ಮಾಡಿಕೊಂಡಿದ್ದಾನೆ ಎಂದು ವಿನೋದಕುಮಾರ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net