ಸಮಾಜದ ಒಳಿತಿಗೆ ಶ್ರಮಿಸಿದ ಶ್ರೀಗಳು

Gentlemen who worked for the good of society
Gentlemen who worked for the good of society
Published on

ಇಳಕಲ್ಲ(ಗ್ರಾ): ಆದಿ ಜಗದ್ಗುರು ರೇಣುಕಾಚಾರ್ಯರು ಜಾತಿ ತಾರತಮ್ಯ ಮಾಡದೆ, ಎಲ್ಲ ಸಮಾಜದವರಿಗೂ ಒಳಿತು ಮಾಡುವ ಹಂಬಲ ಹೊಂದಿದ್ದರು ಎಂದು ಉಪತಹಸೀಲ್ದಾರ್ ಈಶ್ವರ ಗಡ್ಡಿ ಹೇಳಿದರು.

ನಗರದ ತಹಸೀಲ್ದಾರ್ ಕಚೇರಿಯಲ್ಲಿ ಜಂಗಮ ಕ್ಷೇಮಾಭಿವೃದ್ಧಿ ಸಂಘ ಮತ್ತು ತಾಲೂಕಾಡಳಿತ ಸಂಯುಕ್ತ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ರೇಣುಕಾಚಾರ್ಯರ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ವಿಜಯ ಹಿರೇಮಠ ಮಾತನಾಡಿ, ರೇಣುಕಾಚಾರ್ಯರು ರಚಿಸಿದ ಸಿದ್ಧಾಂತ ಶಿಖಾಮಣಿಯನ್ನು ಪ್ರತಿಯೊಬ್ಬರೂ ಪಠಿಸಬೇಕು. ಕೇವಲ ಜಂಗಮರು ಮಾತ್ರ ರೇಣುಕಾ ಜಯಂತಿ ಆಚರಿಸದೆ, ಸರ್ವ ಸಮಾಜದವರು ಆಚರಿಸುವ ಪರಿಪಾಠ ರೂಢಿಸಿಕೊಳ್ಳಬೇಕು ಎಂದರು.

ಜಂಗಮ ಸಮಾಜ ಅಧ್ಯಕ್ಷ ಸಂಗಯ್ಯ ಸಾರಂಗಮಠ, ಪ್ರಭು ಬನ್ನಿಗೋಳಮಠ, ಸಂಗಯ್ಯ ನಾಗಯ್ಯನವರ, ಪಂಪಾಪತಿ ಸರಗಣಾಚಾರಿ, ಮಹಿಳಾ ಘಟಕದ ಅಧ್ಯಕ್ಷೆ ಉಮಾ ಮಠದ ಮತ್ತಿತರರಿದ್ದರು.

ರೇಣುಕಾಚಾರ್ಯರ ಮಂದಿರದಲ್ಲಿ ಆದಿ ಜಗದ್ಗುರು ರೇಣುಕಾಚಾರ್ಯರಿಗೆ ಅಭಿಷೇಕ, ಮಂತ್ರಪಠಣ, ಪೂಜಾ ವಿಧಾನದ ನಂತರ ರೇಣುಕಾಚಾರ್ಯರ ವೃತ್ತಕ್ಕೆ ಹೂಮಾಲೆ ಅರ್ಪಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net