ಮಹನೀಯರ ಕನಸು ನನಸು

13-Aug-Krt-2A
ಕಾರಟಗಿಯಲ್ಲಿ ಹರ್‌ಘರ್ ತಿರಂಗಾ ಯಾತ್ರೆ ಅಂಗವಾಗಿ ಬಿಜೆಪಿ ಪದಾಧಿಕಾರಿಗಳು ಬೈಕ್ ರ‌್ಯಾಲಿ ನಡೆಸಿದರು.
Published on

ಕಾರಟಗಿ: ಜಾಗತಿಕ ಮಟ್ಟದಲ್ಲಿ ಭಾರತ ಸದೃಢ ರಾಷ್ಟ್ರವಾಗಿ ಹೊರಹೊಮ್ಮುತ್ತಿದ್ದು, ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವ ಮೂಲಕ ದೇಶ ಸಾಧನೆ ಸಂಭ್ರಮಿಸಬೇಕು ಎಂದು ಬಿಜೆಪಿ ಮಂಡಲ ಘಟಕ ಅಧ್ಯಕ್ಷ ಮಂಜುನಾಥ ಮಸ್ಕಿ ಹೇಳಿದರು.

ಬಿಜೆಪಿಯಿಂದ ಬುಧವಾರ ಆಯೋಜಿಸಿದ್ದ ಹರ್‌ಘರ್ ತಿರಂಗಾ ಯಾತ್ರೆ ಅಂಗವಾಗಿ ನಡೆದ ಬೈಕ್ ರ‌್ಯಾಲಿಯಲ್ಲಿ ಮಾತನಾಡಿದರು. ಕೇಂದ್ರದ ಬಿಜೆಪಿ ಸರ್ಕಾರ ದೇಶವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸದೃಢಗೊಳಿಸುತ್ತಿದೆ. ಜನಪರ ಯೋಜನೆಗಳಿಂದ ಜೀವನಮಟ್ಟ ಸುಧಾರಣೆ ಮಾಡುವ ಜತೆಗೆ ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಮಹನೀಯರ ಕನಸು ಸಾಕಾರಗೊಳಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಸ್ಫೂರ್ತಿ ತುಂಬಲು ಎಲ್ಲರೂ ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸಬೇಕು ಎಂದರು.

ಜಂಗಮರ ಕಲ್ಗುಡಿಯಿಂದ ಬೈಕ್ ರ‌್ಯಾಲಿ ಆರಂಭಿಸಿ ಮರಳಿ, ಶ್ರೀರಾಮನಗರ, ಸಿದ್ದಾಪುರ ಮಾರ್ಗವಾಗಿ ಪಟ್ಟಣದ ಬಸ್ ನಿಲ್ದಾಣದವರೆಗೆ ರಾಷ್ಟ್ರಧ್ವಜ ಹಿಡಿದು ಮೆರವಣಿಗೆ ನಡೆಸಿದರು.

ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮೌನೇಶ್ ದಢೇಸೂಗೂರು, ಮಂಡಲ ಪ್ರ.ಕಾರ್ಯದರ್ಶಿ ರವಿಸಿಂಗ್, ಮಂಜುನಾಥ್ ಹೊಸ್ಕೆರ, ಎಸ್ಟಿ ಮೋರ್ಚಾ ಅಧ್ಯಕ್ಷ ದೇವರಾಜ್ ನಾಯಕ, ಯುವ ಮೋರ್ಚಾ ಅಧ್ಯಕ್ಷ ಶರಣಬಸವರೆಡ್ಡಿ ಪ್ರಮುಖರಾದ ಬಸವರಾಜ್ ಎತ್ತಿನಮನಿ, ಶಿವು ಅರಿಕೇರಿ, ರತ್ನಾಕುಮಾರಿ, ಪ್ರಿಯಾಂಕಾ ಪವಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net