ಮಹನೀಯರ ಜಯಂತಿ ಆಚರಣೆ ಕಡ್ಡಾಯ

31Sirwar1
ಸಿರವಾರ ತಹಸಿಲ್ ಕಚೇರಿಯಲ್ಲಿ ಮಹನೀಯರ ಜಯಂತಿ ಪೂರ್ವಭಾವಿ ಸಭೆ ನಡೆಯಿತು. ತಹಸೀಲ್ದಾರ್ ರವಿ ಎಸ್.ಅಂಗಡಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರೀಫ್ ಮಿಯಾ, ಸಿಡಿಪಿಒ ನಾಗರತ್ನ, ನೀರಾವರಿ ಇಲಾಖೆ ಎಇಇ ವಿಜಯಲಕ್ಷ್ಮೀ ಪಾಟೀಲ್ ಇದ್ದರು.
Published on

ಸಿರವಾರ: ಮಹನಿಯರ ಜಯಂತಿಗಳ ಅಂಗವಾಗಿ ಪಟ್ಟಣದ ತಹಸಿಲ್ ಕಚೇರಿಯಲ್ಲಿ ಶುಕ್ರವಾರ ತಹಸೀಲ್ದಾರ್ ರವಿ ಎಸ್.ಅಂಗಡಿ ನೇತೃತ್ವದಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ನಡೆಸಲಾಯಿತು.

ರವಿ ಅಂಗಡಿ ಮಾತನಾಡಿ, ಶರಣ ಮಡಿವಾಳ ಮಾಚಿದೇವ, ಸವಿತಾ ಮಹರ್ಷಿ, ಸಂತ ಸೇವಾಲಾಲ್, ಛತ್ರಪತಿ ಶಿವಾಜಿ, ಸರ್ವಜ್ಞ ಹಾಗೂ ಕಾಯಕ ಶರಣರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಸಮಾಜದ ಮುಖಂಡರನ್ನು ಆಹ್ವಾನಿಸಬೇಕು. ಪ್ರತಿ ಕಚೇರಿಯಲ್ಲಿ ತಪ್ಪದೆ ಆಚರಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಆರೀಫ್ ಮಿಯಾ, ಜೆಸ್ಕಾಂ ಎಇಇ ಎಂ.ಡಿ ಸಲೀಂ, ಸಿಡಿಪಿಒ ನಾಗರತ್ನ, ನೀರಾವರಿ ಇಲಾಖೆ ಎಇಇ ವಿಜಯಲಕ್ಷ್ಮೀ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net