

ಅರಕೇರಾ: ಎ.ವೆಂಕಟೇಶ ನಾಯಕ ಅವರು ರಾಜಕೀಯ ಜೀವನದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುವ ಮೂಲಕ ಜನಮಾನಸದಲ್ಲಿ ನೆಲೆಸಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ಸತ್ಯನಾರಾಯಣ ನಾಯಕ ಪೊಲೀಸ್ ಪಾಟೀಲ್ ಹೇಳಿದರು.
ಸಮೀಪದ ಜುಟ್ಟಮರಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಎ.ವೆಂಕಟೇಶ ನಾಯಕ ಅವರ 11ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಭಾನುವಾರ ಮಾತನಾಡಿದರು. ಜಿಲ್ಲೆಯಲ್ಲಿ ಸರಳ ಸ್ವಭಾವದ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದ ವೆಂಕಟೇಶ ನಾಯಕ ಅವರು ನಾಲ್ಕು ಬಾರಿ ಸಂಸದ, ಒಮ್ಮೆ ಶಾಸಕರಾಗಿ ಗಣನೀಯ ಸೇವೆ ಸಲ್ಲಿಸಿದ್ದಾರೆ ಎಂದರು.
ಪ್ರಮುಖರಾದ ಸೀತಣ್ಣ ನಾಯಕ ಗುರಿಕಾರ, ಬಸವರಾಜ ಪೂಜಾರಿ, ಶರಣಗೌಡ ಗಣೇಕಲ್, ರಾಚಣ್ಣ ಅಬಕಾರಿ, ಕೊಟ್ರೇಶಪ್ಪ ಕೋರಿ, ಬಸವರಾಜ ಮಾಪಾ, ಬಸವರಾಜ ಕ್ವಾಟೆ ದೊರೆ, ಜಿ.ಬೂದೆಪ್ಪ ಸಾಹುಕಾರ, ಮಲ್ಲಿಕಾರ್ಜುನ ಸಾಹುಕಾರ ಗುಡಿ, ದುರುಗಪ್ಪ ನಾಯಕ, ಜಾವೀದ್ ಆರ್.ಚಿಂಚೋಳಿಕರ್, ಸಿದ್ಧಾರ್ಥ ಹವಾಲ್ದಾರ್, ಸಾಬಣ್ಣ ಹೂಗಾರ, ಮಲ್ಲಯ್ಯ ಮದರಕಲ್ ಇತರರಿದ್ದರು.